ಸಿಡ್ನಿ: ಹಾರ್ದಿಕ್ ಪಾಂಡ್ಯ ಹಾಗೂ ಶಿಖರ್ ಧವನ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ನಾಯಕ ವಿರಾಟ್ ಕೊಹ್ಲಿ ಸಮಯೋಚಿತ ಬ್ಯಾಟಿಂಗ್ ನೆರವಿನಿದ ಭಾರತ ತಂಡ 2ನೇ ಟಿ20 ಪಂದ್ಯವನ್ನು 6 ವಿಕೆಟ್ಗಳ ಜಯ ಸಾಧಿಸಿ ಟಿ20 ಸರಣಿ ವಶಪಡಿಸಿಕೊಂಡಿದೆ.
ಆಸ್ಟ್ರೇಲಿಯಾ ನೀಡಿದ 195 ರನ್ಗಳ ಗುರಿಯನ್ನು 19.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಕೆ ಎಲ್ ರಾಹುಲ್ ಹಾಗೂ ಶಿಖರ್ ಧವನ್ ಮೊದಲ ವಿಕೆಟ್ಗೆ 56 ರನ್ಗಳ ಜೊತೆಯಾಟ ನೀಡಿದರು. ರಾಹುಲ್ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 30 ರನ್ಗಳಿಸಿ ಔಟಾದರು.
ನಂತರ ಅಬ್ಬರಿಸಿದ ಶಿಖರ್ ಧವನ್ ಕೇವಲ 36 ಎಸೆತಗಳಲ್ಲಿ ತಲಾ 4 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 52 ರನ್ ಗಳಿಸಿದರಲ್ಲದೆ, ನಾಯಕ ಕೊಹ್ಲಿ ಜೊತೆಗೂಡಿ 2ನೇ ವಿಕೆಟ್ಗೆ 39 ರನ್ ಸೇರಿಸಿದರು. ಧವನ್ ನಂತರ ಬಂದ ಸಾಮ್ಸನ್ ಇಂದಿನ ಪಂದ್ಯದಲ್ಲಿಯೂ 10 ಎಸೆತಗಳಲ್ಲಿ 15 ರನ್ ಗಳಿಸಿ ವಿಕೆಟ್ ಕೈಚೆಲ್ಲಿದರು. ಕೊಹ್ಲಿ 24 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 40 ರನ್ಗಳಿಸಿ ಔಟಾದರು.
-
Hardik Pandya seals it for #TeamIndia.
— BCCI (@BCCI) December 6, 2020 " class="align-text-top noRightClick twitterSection" data="
INDIA WIN by 6 wickets and clinch the T20I series 2-0.#AUSvIND pic.twitter.com/Hx3YfmukEr
">Hardik Pandya seals it for #TeamIndia.
— BCCI (@BCCI) December 6, 2020
INDIA WIN by 6 wickets and clinch the T20I series 2-0.#AUSvIND pic.twitter.com/Hx3YfmukErHardik Pandya seals it for #TeamIndia.
— BCCI (@BCCI) December 6, 2020
INDIA WIN by 6 wickets and clinch the T20I series 2-0.#AUSvIND pic.twitter.com/Hx3YfmukEr
ಆದರೆ ಕೊನೆಯಲ್ಲಿ ಅಬ್ಬರಿಸಿದ ಪಾಂಡ್ಯ ಮತ್ತು ಶ್ರೇಯಸ್ ಅಯ್ಯರ್ ಮುರಿಯದ 5ನೇ ವಿಕೆಟ್ಗೆ 46 ರನ್ ಸಿಡಿಸಿ ಗೆಲುವಿನ ಗಡಿ ದಾಟಿಸಿದರು. ಕೊನೆಯ 3 ಓವರ್ಗಳಲ್ಲಿ ಭಾರತಕ್ಕೆ ಗೆಲ್ಲಲು 37 ರನ್ಗಳ ಅಗತ್ಯವಿತ್ತು. ಶ್ರೇಯಸ್-ಪಾಂಡ್ಯ ಜೋಡಿ 18ನೇ ಓವರ್ನಲ್ಲಿ 12, 19ನೇ ಓವರ್ನಲ್ಲಿ 11 ರನ್ ಸಿಡಿಸಿದರು. ಹಾಗೂ ಕೊನೆಯ ಓವರ್ನಲ್ಲಿ ಗೆಲ್ಲಲು 14 ರನ್ಗಳ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಕೇವಲ 4 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಸಹಿತ 14 ರನ್ ಸಿಡಿಸಿ ಭಾರತಕ್ಕೆ ಸರಣಿ ಗೆದ್ದುಕೊಟ್ಟರು.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಸಾಮರ್ಥ್ಯವನ್ನ ಭಾರತ ತಂಡ ವ್ಯರ್ಥ ಮಾಡಿಕೊಳ್ಳುತ್ತಿದೆ: ಅಜಯ್ ಜಡೇಜಾ ಬೇಸರ
ಶ್ರೇಯಸ್ ಅಯ್ಯರ್ 5 ಎಸೆತಗಳಲ್ಲಿ 12 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ 22 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 42 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ಡೇನಿಯಲ್ ಸ್ಯಾಮ್ಸ್ 41ಕ್ಕೆ 1, ಆ್ಯಂಡ್ರ್ಯೂ ಟೈ 47ಕ್ಕೆ 1 ಸ್ಪಿನ್ನರ್ಗಳಾದ ಜಂಪಾ ಮತ್ತು ಸ್ವೆಪ್ಸನ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ನಾಯಕ ಮ್ಯಾಥ್ಯೂ ವೇಡ್ ಅವರ ಅರ್ಧಶತಕ(58), ಸ್ಟಿವ್ ಸ್ಮಿತ್ 46 ರನ್, ಮ್ಯಾಕ್ಸ್ವೆಲ್ 22 ರನ್ , ಹೆನ್ರಿಕ್ಸ್ ಅವರ 26 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 194 ರನ್ ಗಳಿಸಿತ್ತು.
ನಟರಾಜನ್ 2 ವಿಕೆಟ್, ಠಾಕೂರ್ ಹಾಗೂ ಚಹಾಲ್ ತಲಾ ಒಂದು ವಿಕೆಟ್ ಪಡೆದಿದ್ದರು. ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಎರಡು ತಂಡಗಳ ನಡುವಿನ ಕೊನೆಯ ಟಿ20 ಪಂದ್ಯ ಇದೇ ಮೈದಾನದಲ್ಲಿ ಡಿಸೆಂಬರ್ 8 ರಂದು ನಡೆಯಲಿದೆ.
ಇದನ್ನು ಓದಿ: ದೇಶಕ್ಕಾಗಿ ಆಡಲು ಕಠಿಣ ಪರಿಶ್ರಮ ಪಟ್ಟಿದ್ದೇನೆ: ಹಾರ್ದಿಕ್ ಪಾಂಡ್ಯ