ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಮುಂಬೈ ಇಂಡಿಯನ್ಸ್ ತಂಡ 5ನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದಿದೆ. ಟೂರ್ನಿಯ ಆರಂಭಕ್ಕೂ ಮುನ್ನ ಸುದೀರ್ಘ ವಿರಾಮ ಪಡೆದುಕೊಂಡಿದ್ದ ಹಾರ್ದಿಕ್ ಪಾಂಡ್ಯ ಈ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಮುಂಬೈಗೆ ಕೆಲವು ಪಂದ್ಯಗಳನ್ನು ಗೆದ್ದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ತಮ್ಮ ತಂಡ ಚಾಂಪಿಯನ್ ಆಗಿದ್ದು, ಪ್ರಶಸ್ತಿಯನ್ನು ತಮ್ಮ ಮಗನಿಗೆ ಅರ್ಪಿಸಿದ್ದಾರೆ.
-
This one's for you, Agastya ❤️ Love this team! @mipaltan #Believe🖐🏼 #MIChampion5 pic.twitter.com/NPr81A0i1A
— hardik pandya (@hardikpandya7) November 10, 2020 " class="align-text-top noRightClick twitterSection" data="
">This one's for you, Agastya ❤️ Love this team! @mipaltan #Believe🖐🏼 #MIChampion5 pic.twitter.com/NPr81A0i1A
— hardik pandya (@hardikpandya7) November 10, 2020This one's for you, Agastya ❤️ Love this team! @mipaltan #Believe🖐🏼 #MIChampion5 pic.twitter.com/NPr81A0i1A
— hardik pandya (@hardikpandya7) November 10, 2020
ಮುಂಬೈ ಇಂಡಿಯನ್ಸ್ ಮಂಗಳವಾರ ಡೆಲ್ಲಿ ತಂಡವನ್ನು 5 ವಿಕೆಟ್ಗಳಿಂದ ಮಣಿಸುವ ಮೂಲಕ ಐಪಿಎಲ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿತು. ಇದಕ್ಕು ಮುನ್ನ ಮುಂಬೈ 2013, 2015, 2017 ಹಾಗೂ 2019ರಲ್ಲಿ ಚಾಂಪಿಯನ್ ಆಗಿದೆ. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಂತರ ಸತತ 2 ಬಾರಿ ಪ್ರಶಸ್ತಿ ಗೆದ್ದ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟ್ರೋಫಿಯನ್ನು ಎತ್ತಿನ ಹಿಡಿದಿರುವ ಫೋಟೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದು, ತಮ್ಮ ಮಗನಿಗೆ ಅರ್ಪಿಸುವುದಾಗಿ ಬರೆದುಕೊಂಡಿದ್ದಾರೆ. "ಇದು ನಿನಗಾಗಿ ಅಗಸ್ತ್ಯ. ಮುಂಬೈ ಇಂಡಿಯನ್ಸ್ ತಂಡವನ್ನು ಪ್ರೀತಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಜನವರಿ 1 ರಂದು ನಟಿ ಹಾಗೂ ಮಾಡೆಲ್ ನತಾಶಾ ಸ್ಟ್ಯಾಂಕೋವಿಕ್ ಅವರ ಜೊತೆ ಪಾಂಡ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆಗಸ್ಟ್ ತಿಂಗಳಲ್ಲಿ ಈ ಜೋಡಿಗೆ ಗಂಡು ಮಗು ಜನಿಸಿತ್ತು.