ಧರ್ಮಶಾಲಾ(ಹಿಮಾಚಲ ಪ್ರದೇಶ): ಹರಿಣಗಳ ವಿರುದ್ಧ ಸೆಪ್ಟೆಂಬರ್ 15ರಿಂದ ಆರಂಭಗೊಳ್ಳಲಿರುವ ಟಿ-20 ಕ್ರಿಕೆಟ್ ಸರಣಿಗಾಗಿ ಟೀಂ ಇಂಡಿಯಾ ಪೂರ್ವತಯಾರಿ ನಡೆಸುತ್ತಿದೆ. ಈ ಮಧ್ಯೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನೆಟ್ನಲ್ಲಿ ಬೆವರು ಹರಿಸುತ್ತಿದ್ದಾರೆ.
ಟಿ-20 ಸರಣಿ ಆರಂಭಗೊಳ್ಳಲು 4 ದಿನಗಳು ಬಾಕಿ ಉಳಿದಿವೆ. ಈಗಾಗಲೇ ನೆಟ್ನಲ್ಲಿ ಬ್ಯಾಟಿಂಗ್ ನಡೆಸುವ ಮೂಲಕ ಆಟಗಾರರು ಪ್ರಾಕ್ಟಿಸ್ ನಡೆಸಿದರು. ಹಾರ್ದಿಕ್ ಪಾಂಡ್ಯಗೆ ಸಹೋದರ ಕೃನಾಲ್ ಪಾಂಡ್ಯ ಬೌಲಿಂಗ್ ಮಾಡಿ ಗಮನ ಸೆಳೆದರು. ಈ ವೇಳೆ ಹಾರ್ದಿಕ್ ಭಾರಿ ಹೊಡೆತಕ್ಕೆ ಮುಂದಾಗುತ್ತಿದ್ದರು. ಜತೆಗೆ ಎಂಎಸ್ ಧೋನಿಯವರ ಆಕರ್ಷಕ ಹೆಲಿಕಾಪ್ಟರ್ ಶಾಟ್ ಸಿಡಿಸಿದ್ರು.
-
Pandya 🆚 Pandya in training
— hardik pandya (@hardikpandya7) September 11, 2019 " class="align-text-top noRightClick twitterSection" data="
I think I won that round big bro @krunalpandya24 😂😂
P.S: Sorry for almost knocking your head off 🤣🙏😘 pic.twitter.com/492chd1RZh
">Pandya 🆚 Pandya in training
— hardik pandya (@hardikpandya7) September 11, 2019
I think I won that round big bro @krunalpandya24 😂😂
P.S: Sorry for almost knocking your head off 🤣🙏😘 pic.twitter.com/492chd1RZhPandya 🆚 Pandya in training
— hardik pandya (@hardikpandya7) September 11, 2019
I think I won that round big bro @krunalpandya24 😂😂
P.S: Sorry for almost knocking your head off 🤣🙏😘 pic.twitter.com/492chd1RZh
ದ.ಆಫ್ರಿಕಾ ವಿರುದ್ಧದ ಟಿ-20 ಸೀರಿಸ್‌ಗಾಗಿ ಆಯ್ಕೆಗೊಂಡಿರುವ 15 ಸದಸ್ಯರನ್ನೊಳಗೊಂಡ ತಂಡದಲ್ಲಿ ಕೃನಾಲ್, ಹಾರ್ದಿಕ್ ಅವಕಾಶ ಪಡೆದುಕೊಂಡಿದ್ದಾರೆ. ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕಾದರೆ ಈ ಆಟಗಾರರು ಸದ್ಯದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕಾಗಿದೆ.
ಹರಿಣಗಳ ವಿರುದ್ಧದ ಸರಣಿಯಿಂದ ಹಿರಿಯ ಆಟಗಾರ ಎಂಎಸ್ ಧೋನಿ, ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆದುಕೊಂಡಿದ್ದಾರೆ.