ETV Bharat / sports

ಫೈನಲ್ ಪಂದ್ಯದಲ್ಲಿ ಮಿಂಚಿದ ಕನ್ನಡಿಗ: ಚಹಾಲ್ ಟಿವಿಯಲ್ಲಿ ಮನದಾಳ ಬಿಚ್ಚಿಟ್ಟ ಮನೀಷ್ ಪಾಂಡೆ

ದೀರ್ಘ ಸಮಯದ ನಂತರ ಟೀಂ ಇಂಡಿಯಾಕ್ಕೆ ಕಂಬ್ಯಾಕ್​ ಮಾಡಿ ಶುಕ್ರವಾರ ನಡೆದ ಶ್ರೀಲಂಕಾ ವಿರುದ್ಧದ ಅಂತಿಮ ಟಿ-20 ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕನ್ನಡಿಗ ಮನೀಷ್ ಪಾಂಡೆ, ತಮ್ಮ ಕಂಬ್ಯಾಕ್​ ಬಗ್ಗೆ ಚಹಾಲ್​ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Happy to contribute to team winning:Manish Pandey,ಮನೀಷ್ ಪಾಂಡೆ ಲೇಟೆಸ್ಟ್ ನ್ಯೂಸ್
ಚಹಾಲ್ ಟಿವಿಯಲ್ಲಿ ಮನದಾಳ ಬಿಚ್ಚಿಟ್ಟ ಮನೀಷ್ ಪಾಂಡೆ
author img

By

Published : Jan 11, 2020, 11:17 PM IST

ಪುಣೆ: ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕನ್ನಡಿಗ ಮನೀಷ್​ ಪಾಂಡೆ ಭಾರತ ತಂಡಕ್ಕೆ ಮರಳಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಡೆದ ಕೊನೇಯ ಟಿ20 ಪಂದ್ಯದಲ್ಲಿ ಬ್ಯಾಟಿಂಗ್​ನಲ್ಲಿ ಮಿಂಚಿದ ಮನೀಷ್​ 18 ಎಸೆತಗಳಲ್ಲಿ 31 ರನ್​ ಸಿಡಿಸಿ ತಂಡದ ಮೊತ್ತ ಹೆಚ್ಚಿಸಲು ನೆರವಾಗಿದ್ದರು. ನಂತರ ಫೀಲ್ಡಿಂಗ್​ನಲ್ಲಿ ಕಮಾಲ್​ ಮಾಡಿದ ಅವರು ಒಂದು ರನ್​ಔಟ್​ ಹಾಗೂ ಅಬ್ಬರದ ಬ್ಯಾಟಿಂಗ್​ ನಡೆಸುತ್ತಿದ್ದ ಮ್ಯಾಥ್ಯೂಸ್​ ಕ್ಯಾಚ್​ ಪಡೆದು ಅಮೋಘ ಪ್ರದರ್ಶನ ನೀಡಿದ್ರು.

  • ' class='align-text-top noRightClick twitterSection' data=''>

'ದೀರ್ಘ ಸಮಯದ ನಂತರ ಭಾರತ ತಂಡದ ಪರ ಆಡಲು ಅವಕಾಶ ಪಡೆದೆ. ತರಬೇತಿ ವೇಳೆ ಅವಕಾಶಗಳನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಮಾತನಾಡುತ್ತಿದ್ದೆ. ಇದೀಗ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದೇನೆ. ತುಂಬ ಸಮಯದ ನಂತರ ಆಡಿದ್ದು ಸಂತೋಷ ತಂದಿದೆ, ಅದರಲ್ಲೂ ಗೆಲುವಿನಲ್ಲಿ ಕೈಜೋಡಿಸಿರುವುದಕ್ಕೆ ಇನ್ನೂ ಖುಷಿಯಾಗಿದೆ' ಎಂದು ಚಹಾಲ್ ನಡೆಸಿಕೊಡುವ​ ಚಹಾಲ್​ ಟಿವಿ ಸಂದರ್ಶನದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಬ್ಯಾಟಿಂಗ್​ ಹಾಗೂ ಫೀಲ್ಡಿಂಗ್​ ಎರಡಕ್ಕೂ ನಾನು ತುಂಬಾ ಮಹತ್ವ ನೀಡುತ್ತೇನೆ. ಕೆಲವು ಸಂದರ್ಭದಲ್ಲಿ ಕ್ಯಾಚ್​ ಹಾಗೂ ರನ್​ಔಟ್​ಗಳು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಮನೀಷ್​ ಹೇಳಿದ್ದಾರೆ.

ಪಂದ್ಯದಲ್ಲಿ ಚಹಾಲ್​ ಕೂಡ ಅದ್ಭುತವಾಗಿ ರನ್​ಔಟ್​ ಮಾಡಿದ್ದರು. ಉತ್ತಮವಾಗಿ ರನೌಟ್​ ಮಾಡಿದ್ರಿ, ಆದರೆ ಏಕೆ ಕೆಳಗೆ ಬಿದ್ದಿರೆಂದು ಮನೀಶ್‌ ಕೇಳಿದ್ದಕ್ಕೆ ಉತ್ತರಿಸಿದ ಚಹಾಲ್, ನಾನು ಅಷ್ಟೊಂದು ಸ್ಟ್ರಾಂಗ್ ಇದ್ದೇನೆ ಅದಕ್ಕೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ. ಅಲ್ಲದೆ ಇದು 2016ರ ನಂತರ ಮಾಡಿದ ರನ್​ಔಟ್​ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.