ಹೈದರಾಬಾದ್: ಟೀಂ ಇಂಡಿಯಾ ಕಂಡಿರುವ ಕೆಲವೇ ಯಶಸ್ವಿ ನಾಯಕರ ಸಾಲಿನಲ್ಲಿ ಬೆಂಗಾಲ್ ಟೈಗರ್ ಸೌರವ್ ಗಂಗೂಲಿ ಕೂಡ ನಿಲ್ಲುತ್ತಾರೆ. ಆಕ್ರಮಣಕಾರಿ ಆಟದಿಂದಲೇ ಎದುರಾಳಿಗಳಿಗೆ ಭಯ ಹುಟ್ಟಿಸಿದ್ದ ದಾದಾ, ತಮ್ಮ ನಾಯಕತ್ವದಲ್ಲಿ ಅದೇ ರೀತಿಯ ಆಟಕ್ಕೆ ಹೆಚ್ಚಿನ ಒತ್ತು ನೀಡಿದವರು.

48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸೌರವ್ ಗಂಗೂಲಿ, 2000 ರಿಂದ 20005ರವರೆಗೆ ಟೀಂ ಇಂಡಿಯಾ ತಂಡದ ನಾಯಕತ್ವದ ಜವಾಬ್ದಾರಿ ನಿಭಾಯಿಸಿದ್ದು, 2003ರಲ್ಲಿ ಟೀಂ ಇಂಡಿಯಾ ತಂಡವನ್ನ ವಿಶ್ವಕಪ್ ಫೈನಲ್ಗೆ ತೆಗೆದುಕೊಂಡು ಹೋಗಿದ್ದರು. 49 ಟೆಸ್ಟ್ ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿದ್ದ ದಾದಾ, 21ರಲ್ಲಿ ಜಯ, 13 ಸೋಲು ಹಾಗೂ 15 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದಾರೆ. 146 ಏಕದಿನ ಪಂದ್ಯಗಳ ಪೈಕಿ 76 ಪಂದ್ಯಗಳಲ್ಲಿ ತಂಡ ಗೆದ್ದಿದೆ.
-
#HappyBirthdayDada#DadaOpensWithMayank
— BCCI (@BCCI) July 7, 2020 " class="align-text-top noRightClick twitterSection" data="
The most awaited episode is out. DO NOT MISS this special segment where @mayankcricket gets @SGanguly99 to reveal some of the most fascinating behind the scenes stories.
🎬🎥 https://t.co/RDNhQoP6pA pic.twitter.com/7vk0NTREmV
">#HappyBirthdayDada#DadaOpensWithMayank
— BCCI (@BCCI) July 7, 2020
The most awaited episode is out. DO NOT MISS this special segment where @mayankcricket gets @SGanguly99 to reveal some of the most fascinating behind the scenes stories.
🎬🎥 https://t.co/RDNhQoP6pA pic.twitter.com/7vk0NTREmV#HappyBirthdayDada#DadaOpensWithMayank
— BCCI (@BCCI) July 7, 2020
The most awaited episode is out. DO NOT MISS this special segment where @mayankcricket gets @SGanguly99 to reveal some of the most fascinating behind the scenes stories.
🎬🎥 https://t.co/RDNhQoP6pA pic.twitter.com/7vk0NTREmV
ಟೀಂ ಇಂಡಿಯಾ ತಂಡಕ್ಕೆ ಹೊಸ ರೂಪ ಕೊಟ್ಟ ಶ್ರೇಯ ಇವರಿಗೆ ಸಲ್ಲುತ್ತಿದ್ದು, ಅಗ್ರೆಸ್ಸೀವ್ ಆಟಗಾರ ಎಂದು ಹೇಳಿದರೆ ತಪ್ಪಾಗಲಾರದು. ಜುಲೈ 8, 1972ರಂದು ಹುಟ್ಟಿದ್ದ ಗಂಗೂಲಿ ಇಂದು 48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಂಗಾಳದ ಪ್ರಿನ್ಸ್ ಎಂದೇ ಕರೆಯಿಸಿಕೊಳ್ಳುವ ದಾದಾ 1996ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದು, ಅದೇ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು.

2002ರಲ್ಲಿ ನಾಟ್ ವೆಸ್ಟ್ ಸರಣಿ ಗೆದ್ದಾಗ ಗ್ಯಾಲರಿಯಲ್ಲಿದ್ದ ಗಂಗೂಲಿ ಶರ್ಟ್ ಬಿಚ್ಚಿ ಎದುರಾಳಿ ತಂಡದ ಆಟಗಾರ ಫ್ಲಿಂಟಾಫ್ಗೆ ತಿರುಗೇಟು ನೀಡಿದ್ದರು. 113 ಟೆಸ್ಟ್ ಪಂದ್ಯಗಳಿಂದ 7,212ರನ್, 311 ಏಕದಿನ ಪಂದ್ಯಗಳಿಂದ 11,363ರನ್ ಸಿಡಿಸಿದ್ದಾರೆ. ಸದ್ಯ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಗಂಗೂಲಿಗೆ ಹುಟ್ಟುಹಬ್ಬದ ಶುಭಾಶಯಗಳು.