ನವದೆಹಲಿ: ತನ್ನ 360 ಡಿಗ್ರಿ ಬ್ಯಾಟಿಂಗ್ ಹಾಗೂ ಮೈದಾನದಲ್ಲಿ ಅಜಾತ ಶತ್ರುವಾಗಿ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳ ಮನಸ್ಸು ಕದ್ದಿರುವ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್ ಇಂದು 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಕ್ರಿಕೆಟ್ ಕಂಡ ವಿಧ್ವಂಸಕ ಬ್ಯಾಟ್ಸ್ಮನ್, ಅದ್ಭುತ ಫೀಲ್ಡರ್ ಹಾಗೂ ಚಾಣಕ್ಯ ವಿಕೆಟ್ ಕೀಪರ್ ಆಗಿರುವ ಎಬಿಡಿ ಕ್ರಿಕೆಟ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ. ಅವರು ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಹಾಗೂ 78 ಟಿ-20 ಪಂದ್ಯಗಳನ್ನಾಡಿದ್ದಾರೆ. ಅವರು 8765 ಟೆಸ್ಟ್ ರನ್, ಏಕದಿನ ಕ್ರಿಕೆಟ್ನಲ್ಲಿ 9,577 ರನ್ ಹಾಗೂ ಟಿ-20ಯಲ್ಲಿ 1672 ರನ್ ಸಿಡಿಸಿದ್ದಾರೆ.
-
Happy Birthday AB
— Royal Challengers Bangalore (@RCBTweets) February 17, 2021 " class="align-text-top noRightClick twitterSection" data="
A leader, mentor and most importantly a true entertainer on and off the field. Wishing you a very very Happy Birthday AB. 🤩🎂@ABdeVilliers17#PlayBold #HappyBirthdayAB #WeAreChallengers pic.twitter.com/ob07vEzgFU
">Happy Birthday AB
— Royal Challengers Bangalore (@RCBTweets) February 17, 2021
A leader, mentor and most importantly a true entertainer on and off the field. Wishing you a very very Happy Birthday AB. 🤩🎂@ABdeVilliers17#PlayBold #HappyBirthdayAB #WeAreChallengers pic.twitter.com/ob07vEzgFUHappy Birthday AB
— Royal Challengers Bangalore (@RCBTweets) February 17, 2021
A leader, mentor and most importantly a true entertainer on and off the field. Wishing you a very very Happy Birthday AB. 🤩🎂@ABdeVilliers17#PlayBold #HappyBirthdayAB #WeAreChallengers pic.twitter.com/ob07vEzgFU
ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಅವರು ಏಕದಿನ ಕ್ರಿಕೆಟ್ನಲ್ಲಿ ವೇಗದ ಅರ್ಧಶತಕ, ಶತಕ ಹಾಗೂ 150 ರನ್ ಸಿಡಿಸಿರುವ ದಾಖಲೆ ಎಬಿಡಿ ಅವರ ಹೆಸರಿನಲ್ಲಿದೆ. 2015 ರ ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಿಲಿಯರ್ಸ್ ಕೇವಲ 66 ಎಸೆತಗಳಲ್ಲಿ ಅಜೇಯ 162 ರನ್ ಸಿಡಿಸಿದ್ದರು. ಅವರ ಇನ್ನಿಂಗ್ಸ್ನಲ್ಲಿ 17 ಬೌಂಡರಿ ಹಾಗೂ 8 ಸಿಕ್ಸರ್ ಸೇರಿತ್ತು.
-
162* off 66 balls 👏
— ICC (@ICC) February 17, 2021 " class="align-text-top noRightClick twitterSection" data="
17 fours, eight sixes 🚀
Happy birthday to South Africa’s Mr 360, AB de Villiers, who put on a show at the SCG at the 2015 ICC Cricket World Cup. pic.twitter.com/GHspmq3DhM
">162* off 66 balls 👏
— ICC (@ICC) February 17, 2021
17 fours, eight sixes 🚀
Happy birthday to South Africa’s Mr 360, AB de Villiers, who put on a show at the SCG at the 2015 ICC Cricket World Cup. pic.twitter.com/GHspmq3DhM162* off 66 balls 👏
— ICC (@ICC) February 17, 2021
17 fours, eight sixes 🚀
Happy birthday to South Africa’s Mr 360, AB de Villiers, who put on a show at the SCG at the 2015 ICC Cricket World Cup. pic.twitter.com/GHspmq3DhM
ಇನ್ನು ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಅವರು ಲಕ್ಷಾಂತರ ಭಾರತೀಯ ಅಭಿಮಾನಿಗಳನ್ನು ಹೊಂದಿದ್ದಾರೆ. ಐಪಿಎಲ್ನಲ್ಲಿ 169 ಪಂದ್ಯಗಳನ್ನಾಡಿದ್ದು, 4,849 ರನ್ಗಳಿಸಿದ್ದಾರೆ. ಅವರು 3 ಶತಕ ಹಾಗೂ 38 ಅರ್ಧಶತಕ ಬಾರಿಸಿದ್ದಾರೆ.
ಎಬಿಡಿ ವೃತ್ತಿ ಜೀವನದ ಟಾಪ್ 3 ಇನ್ನಿಂಗ್ಸ್ಗಳು
- ವೆಸ್ಟ್ ಇಂಡೀಸ್ ವಿರುದ್ಧ 2015 ರಲ್ಲಿ 44 ಎಸೆತಗಳಲ್ಲಿ 149 ರನ್(16 ಸಿಕ್ಸರ್, 9 ಬೌಂಡರಿ)
- ವೆಸ್ಟ್ ಇಂಡೀಸ್ ವಿರುದ್ಧ 2015 ರ ವಿಶ್ವಕಪ್ನಲ್ಲಿ 66 ಎಸೆತಗಳಲ್ಲಿ ಅಜೇ 162( 17 ಬೌಂಡರಿ, 8 ಸಿಕ್ಸರ್)
- ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ನಲ್ಲಿ 220 ಎಸೆತಗಳಲ್ಲಿ 33 ರನ್(ಸೋಲುವ ಪಂದ್ಯವನ್ನು ಡ್ರಾ ಮಾಡಿಸಿದ್ದು)
ಇದನ್ನು ಓದಿ:ಟೆಸ್ಟ್ ಫಾರ್ಮೆಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಡು ಪ್ಲೆಸಿಸ್