ETV Bharat / sports

ಕ್ರಿಕೆಟ್​​ ದೇವರಿಗೆ ಕ್ರಿಕೆಟ್​ ಪಾಠ ಹೇಳಿಕೊಟ್ಟಿದ್ದ ವೇಯ್ಟರ್​... ಈತನನ್ನು ಹುಡುಕಿ ಸಚಿನ್​ ಬೇಡಿಕೆ ಈಡೇರಿಸಿದ ನೆಟ್ಟಿಗರು

19 ವರ್ಷಗಳ ಹಿಂದೆ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರ ಬ್ಯಾಟಿಂಗ್​ ದೋಷ ಕಂಡು ಹಿಡಿದು ಟಿಪ್ಸ್​​ ನೀಡಿದ್ದ ವೇಯ್ಟರ್​ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಸಚಿನ್​ ತಮ್ಮನ್ನು ಇನ್ನೂ ನೆನಪಿಟ್ಟುಕೊಂಡಿರುವುದಕ್ಕೆ ಆಶ್ಚರ್ಯ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ.

a man found who gave tips to  sachin Tendulkar

author img

By

Published : Dec 15, 2019, 8:06 PM IST

Updated : Dec 16, 2019, 1:09 PM IST

ಚೆನ್ನೈ: 19 ವರ್ಷಗಳ ಹಿಂದೆ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರ ಬ್ಯಾಟಿಂಗ್​ ದೋಷ ಕಂಡು ಹಿಡಿದು ಟಿಪ್ಸ್​​ ನೀಡಿದ್ದ ವೇಯ್ಟರ್​ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಸಚಿನ್​ ತಮ್ಮನ್ನು ಇನ್ನೂ ನೆನಪಿಟ್ಟುಕೊಂಡಿರುವುದಕ್ಕೆ ಆಶ್ಚರ್ಯ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ.

ಸಚಿನ್​ ಸಂದರ್ಶನವೊಂದರಲ್ಲಿ ಮಾತನಾಡುತ್ತಾ,"19 ವರ್ಷಗಳ ಹಿಂದೆ ಚೆನ್ನೈನ ಕೋರಮಂಡಲ್​ ಹೋಟೆಲ್​ಗೆ ಕಾಫಿ ಕುಡಿಯಲು ತೆರಳಿದ್ದ ಸಂದರ್ಭದಲ್ಲಿ ಅಲ್ಲಿ ವೇಯ್ಟರ್​ ಒಬ್ಬ ನನ್ನ ಬ್ಯಾಟಿಂಗ್​ ದೋಷದ ಕುರಿತು ನನಗೆ ಮಾಹಿತಿ ನೀಡಿದ್ದ. ನನ್ನ ಪ್ರತಿ ಪಂದ್ಯ ವೀಕ್ಷಿಸುವುದಾಗಿ ತಿಳಿಸಿದ. ಆತ ನಾನು ಧರಿಸುವ ಆರ್ಮ್​ ಗಾರ್ಡ್​ ಸರಿಯಿಲ್ಲ. ಇದರಿಂದ ನೀವು ಬ್ಯಾಟಿಂಗ್​ ಮಾಡುವಾಗ ನಿಮ್ಮ ಬ್ಯಾಟ್​ ಸ್ವಿಂಗ್​ ಬದಲಾಗುತ್ತಿದೆ. ಇದರಿಂದ ನೀವೂ ಸಲೀಸಾಗಿ ಬ್ಯಾಟ್ ಬೀಸಲು ಸಾಧ್ಯವಾಗುತ್ತಿಲ್ಲ" ಎಂದಿದ್ದರು.

ಗುರುಪ್ರಸಾದ್​ ಜೊತೆ ಈಟಿವಿ ಭಾರತ್​​ ಸಂದರ್ಶನ..

"ಆತನ ​ ಮಾತು ಕೇಳಿದಾಗ ಆಶ್ಚರ್ಯವಾಯಿತು. ಆತನ ಮಾತಿನಂತೆ ನನ್ನ ಆರ್ಮ್ ಗಾರ್ಡ್‌ನ ಮರುವಿನ್ಯಾಸಗೊಳಿಸಿದೆ. ಇದಾದ ನಂತರ ನನ್ನ ಬ್ಯಾಟಿಂಗ್​ನಲ್ಲಿ ವ್ಯತ್ಯಾಸಗಳು ಕಾಣಿಸಲಾರಂಭಿಸಿದವು. ನನ್ನ ಕ್ರಿಕೆಟ್​ ಜೀವನದಲ್ಲಿ ನನ್ನ ತಪ್ಪನ್ನು ಗುರುತಿಸಿ, ಇಂತಹ ಮಹತ್ವದ ಸಲಹೆ ನೀಡಿದ ಏಕೈಕ ವ್ಯಕ್ತಿ ಆತ. ಒಮ್ಮೆ ಆತನನ್ನು ನಾನು ಕಾನಬೇಕೆಂದಿದ್ದೇನೆ. ಅವರನ್ನು ಹುಡುಕಲು ಸಹಾಯ ಮಾಡಿ" ಎಂದು ಸಚಿನ್ ಸಂದರ್ಶನದ ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ​ಮಾಡಿ​ ನೆಟ್ಟಿಗರನ್ನು ಕೇಳಿಕೊಂಡಿದ್ದರು.

ಟ್ವಿಟರ್​ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಚಿನ್​ಗೆ ಸಹಾಯ ಮಾಡಿದ್ದ ವ್ಯಕ್ತಿ ಪತ್ತೆಯಾಗಿದ್ದಾರೆ. ತನ್ನನ್ನು ಇನ್ನೂ ಅವರು ನೆನೆಪಿಟ್ಟುಕೊಂಡಿರುವುದಕ್ಕೆ ಆತ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  • A chance encounter can be memorable!
    I had met a staffer at Taj Coromandel, Chennai during a Test series with whom I had a discussion about my elbow guard, after which I redesigned it.
    I wonder where he is now & wish to catch up with him.

    Hey netizens, can you help me find him? pic.twitter.com/BhRanrN5cm

    — Sachin Tendulkar (@sachin_rt) December 14, 2019 " class="align-text-top noRightClick twitterSection" data=" ">
ಅಂದು ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಗುರುಪ್ರಸಾದ್ ಈಟಿವಿ ಭಾರತ ಜೊತೆ ಮಾತನಾಡಿದ್ದು, "ಸಚಿನ್​ ನನ್ನನ್ನು 19 ವರ್ಷಗಳ ನಂತರ ನೆನೆಪಿಸಿಕೊಂಡು ಮಾತನಾಡಿದ್ದಾರೆ ಎಂದರೆ ಅದು ಸಾಮಾನ್ಯ ವಿಷಯವಲ್ಲ. ಸಚಿನ್​ ತೆಂಡೂಲ್ಕರ್​ ಟ್ವೀಟ್​ ಮಾಡಿರುವ ವಿಚಾರ ತಿಳಿದು ನನ್ನ ಸಹೋದರಿಯರು ಹಾಗೂ ನನ್ನ ಸ್ನೇಹಿತರು ನನೆಗೆ ತಿಳಿಸಿದರು. ಹಾಗಾಗಿ ಸಚಿನ್​ ದೊಡ್ಡತನ ಮೆಚ್ಚಲೇಬೇಕು ಅಂತಾ ಗುರುಪ್ರಸಾದ್‌ ಹೇಳಿಕೊಂಡಿದ್ದಾರೆ.
ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ಕಾಣಲು ಬಯಸುತ್ತಾರೆ. ಆದರೆ, ವಿಶ್ವಶ್ರೇಷ್ಠ ಕ್ರಿಕೆಟಿಗ ನನ್ನನ್ನು ನೋಡಲು ಬಯಸಿದ್ದಾರೆಂದರೆ ಅವರ ಅಭಿಮಾನಿಯಾದ ನನಗೆ ಇನ್ನೇನು ಬೇಕು. ನಾನು ಕೂಡ ಸಚಿನ್​ರನ್ನು ನೋಡಲು ತುಂಬಾ ಉತ್ಸುಕನಾಗಿದ್ದೇನೆ ಎಂದು ಗುರುಪ್ರಸಾದ್​ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

Intro:Body:Conclusion:
Last Updated : Dec 16, 2019, 1:09 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.