ಮುಂಬೈ: ಮೊಣಕಾಲಿನ ಗಾಯದಿಂದಾಗಿ 2021ರ ಐಪಿಎಲ್‌ಗೆ ಅಲಭ್ಯವಾಗಿರುವ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರ ಬದಲಿಯಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಗುರ್ಕೀರತ್ ಸಿಂಗ್ ಮನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ.
2017 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ರಿಂಕು ಕೆಕೆಆರ್ ಪರ ಒಟ್ಟು 11 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಅವರ ಬದಲಿ ಆಟಗಾರನಾಗಿ ಆಯ್ಕೆಯಾಗಿರುವ ಗುರ್ಕೀರತ್, 2020ರಲ್ಲಿ ಕೊನೆಯ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು. ಅವರ ಪ್ರದರ್ಶನ ತೃಪ್ತಿದಾಯಕವಾಗಿಲ್ಲದ ಕಾರಣ ಆರ್ಸಿಬಿ 2021ರ ಹರಾಜಿನ ವೇಳೆ ಬಿಡುಗಡೆಗೊಳಿಸಿತ್ತು.
-
NEWS: Gurkeerat Singh Mann signs up with @KKRiders as replacement for Rinku Singh. @Vivo_India #VIVOIPL
— IndianPremierLeague (@IPL) April 3, 2021 " class="align-text-top noRightClick twitterSection" data="
More details 👉 https://t.co/kd22VpfZwB pic.twitter.com/NBnpCkRHg6
">NEWS: Gurkeerat Singh Mann signs up with @KKRiders as replacement for Rinku Singh. @Vivo_India #VIVOIPL
— IndianPremierLeague (@IPL) April 3, 2021
More details 👉 https://t.co/kd22VpfZwB pic.twitter.com/NBnpCkRHg6NEWS: Gurkeerat Singh Mann signs up with @KKRiders as replacement for Rinku Singh. @Vivo_India #VIVOIPL
— IndianPremierLeague (@IPL) April 3, 2021
More details 👉 https://t.co/kd22VpfZwB pic.twitter.com/NBnpCkRHg6
ಇದೀಗ ಕೋಲ್ಕತಾ ನೈಟ್ ರೈಡರ್ಸ್ ಗುರ್ಕೀರತ್ ಅವರನ್ನು ಅವರ ಮೂಲಬೆಲೆ 50 ಲಕ್ಷ ರೂಪಾಯಿಗಳಿಗೆ ಒಪ್ಪಂದ ಮಾಡಿಕೊಂಡಿದೆ. 2021ರ ವಿವೋ ಐಪಿಎಲ್ ಗುರ್ಕೀರತ್ ಅವರ ಎಂಟನೇ ಐಪಿಎಲ್ ಋತುವಾಗಿದೆ.
ಪಂಜಾಬ್ ಬ್ಯಾಟ್ಸ್‌ಮನ್ ಈ ಹಿಂದೆ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ ಪರವೂ ಆಡಿದ್ದರು. ಒಟ್ಟಾರೆ 42 ಐಪಿಎಲ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.