ನವದೆಹಲಿ: ಬಾಂಗ್ಲಾದೇಶದ ವಿರುದ್ಧ ಮುಂದಿನ ತಿಂಗಳ ಆರಂಭಗೊಳ್ಳಲಿರುವ ಟಿ - 20 ಕ್ರಿಕೆಟ್ ಸರಣಿಗಾಗಿ 15 ಸದಸ್ಯರನ್ನೊಳಗೊಂಡ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಯುವ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಚಾನ್ಸ್ ಪಡೆದುಕೊಂಡಿದ್ದಾರೆ.
ವಿಕೆಟ್ ಕೀಪರ್ ಬ್ಯಾಟ್ಸಮನ್ ಆಗಿರುವ ಸಂಜು ಸ್ಯಾಮ್ಸನ್ ಬಹಳ ದಿನಗಳ ಬಳಿಕ ಮತ್ತೊಮ್ಮೆ ಟೀಂ ಇಂಡಿಯಾ ತಂಡದಲ್ಲಿ ಆಡುವ ಚಾನ್ಸ್ ಪಡೆದುಕೊಂಡಿದ್ದು, ಸಿಕ್ಕಿರುವ ಅವಕಾಶ ಮಿಸ್ ಮಾಡಿಕೊಳ್ಳಬೇಡಿ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಹಾಗೂ ಸಂಸದ ಗೌತಮ್ ಗಂಭೀರ್ ಕಿವಿಮಾತು ಹೇಳಿದ್ದಾರೆ.
-
This is well & truly through the gap by @IamSanjuSamson!!! Congratulations on being picked in the T20 squad. Soft hands, nimble feet and hopefully a sane head...go Sanju grab ur moment, long overdue. @BCCI
— Gautam Gambhir (@GautamGambhir) October 24, 2019 Go, grab your moment: Gambhir tells Samson" class="align-text-top noRightClick twitterSection" data="
Go, grab your moment: Gambhir tells Samson">This is well & truly through the gap by @IamSanjuSamson!!! Congratulations on being picked in the T20 squad. Soft hands, nimble feet and hopefully a sane head...go Sanju grab ur moment, long overdue. @BCCI
— Gautam Gambhir (@GautamGambhir) October 24, 2019
Go, grab your moment: Gambhir tells SamsonThis is well & truly through the gap by @IamSanjuSamson!!! Congratulations on being picked in the T20 squad. Soft hands, nimble feet and hopefully a sane head...go Sanju grab ur moment, long overdue. @BCCI
— Gautam Gambhir (@GautamGambhir) October 24, 2019
ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ಗೆ ಈ ಹಿಂದೆ ಅನೇಕ ಸಲ ಅವಕಾಶ ಸಿಗದಿದ್ದಾಗ ಆಕ್ರೋಶಗೊಂಡಿದ್ದ ಗಂಭೀರ್, ಆಯ್ಕೆ ಸಮಿತಿ ವಿರುದ್ಧ ಆಕ್ರೋಶ ಸಹ ಹೊರಹಾಕಿದ್ದರು. ಇದೀಗ ಆಯ್ಕೆ ಸಮಿತಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಇವರು ಟ್ವೀಟ್ ಮಾಡಿ ತಮ್ಮ ಸಂತೋಷ ಹೊರಹಾಕಿದ್ದಾರೆ. ಈ ಹಿಂದೆ ಜಿಂಬಾಬ್ವೆ ವಿರುದ್ಧ 2015ರಲ್ಲಿ ನಡೆದಿದ್ದ ಏಕೈಕ ಟಿ-20 ಪಂದ್ಯದಲ್ಲಿ ಕಣಕ್ಕಿಳಿದಿದ್ದ ಸಂಜು ಕೇವಲ 19ರನ್ಗಳಿಕೆ ಮಾಡಿದ್ದರು. ಈ ಪಂದ್ಯವನ್ನ ಟೀಂ ಇಂಡಿಯಾ 10ರನ್ಗಳ ಅಂತರದಿಂದ ಸೋತಿತ್ತು.
ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಎಂಎಸ್ ಧೋನಿ ಜಾಗದಲ್ಲಿ ಸಂಜು ಸ್ಯಾಮ್ಸನ್ಗೆ ಚಾನ್ಸ್ ನೀಡಿದ್ದು, ಒಂದು ವೇಳೆ ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ರೆ ಟೀಂ ಇಂಡಿಯಾದಲ್ಲಿ ಖಾಯಂ ಸದಸ್ಯರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಸದ್ಯ ಮುಕ್ತಾಯಗೊಂಡ ವಿಜಯ ಹಜಾರೆ ಟ್ರೋಪಿಯಲ್ಲಿ ಸಂಜು ಗೋವಾ ವಿರುದ್ಧ 212ರನ್ಗಳಿಕೆ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಜತೆಗೆ ಕಳೆದ ಐಪಿಎಲ್ನಲ್ಲೂ ಅದ್ಭುತ ಪ್ರದರ್ಶನ ನೀಡಿದ್ದಕ್ಕಾಗಿ ಆಯ್ಕ ಸಮಿತಿ ಅವರಿಗೆ ಮಣೆ ಹಾಕಿದೆ.
ಈ ಹಿಂದೆ ಯುವ ಆಟಗಾರ ಕೇರಳದ ಸಂಜು ಸ್ಯಾಮ್ಸನ್ ಏಕದಿನದಲ್ಲಿ 4ನೇ ಕ್ರಮಾಂಕಕ್ಕೆ ಸೂಕ್ತ ಎನ್ನುವ ಹರ್ಭಜನ್ ಸಿಂಗ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದ ಗೌತಿ, ದಕ್ಷಿಣ ಭಾರತದ ಈ ಕ್ರಿಕೆಟಿಗನ ಶೈಲಿ ಅದ್ಭುತವಾಗಿದೆ. ಈತ ಚಂದ್ರನ ದಕ್ಷಿಣ ಧ್ರುವದಲ್ಲಿ ಬೇಕಾದರೂ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾನೆ ಎಂದು ಸ್ಯಾಮ್ಸನ್ ಆಟವನ್ನು ವಿಶೇಷವಾಗಿ ಹೊಗಳಿ ಟ್ವೀಟ್ ಮಾಡಿದ್ದರು.