ಚೆನ್ನೈ: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ಇಂದು ಚೆನ್ನೈನಲ್ಲಿ ಮಿನಿ ಹರಾಜು ನಡೆಯುತ್ತಿದ್ದು, ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಬರೋಬ್ಬರಿ 14.25 ಕೋಟಿ ರೂಗೆ ಸೇಲ್ ಆಗಿದ್ದಾರೆ.
"ಎಬಿಡಿ ನನ್ನ ಆರಾಧ್ಯ, ಕೊಹ್ಲಿ ಜತೆ ಬ್ಯಾಟ್ ಮಾಡುವುದು ಖುಷಿ": ಆರ್ಸಿಬಿ ಸೇರುವ ಇಂಗಿತ ಹೊರಹಾಕಿದ ಮ್ಯಾಕ್ಸ್ವೆಲ್!
ಆಸ್ಟ್ರೇಲಿಯಾದ ಆಲ್ರೌಂಡರ್ ಮ್ಯಾಕ್ಸ್ವೆಲ್ಗೆ 2020ರಲ್ಲಿ ಪಂಜಾಬ್ ತಂಡ 10.75 ಕೋಟಿ ರೂ. ನೀಡಿ ಖರೀದಿ ಮಾಡಿತ್ತು. ಆದರೆ, ಈ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಈ ಪ್ಲೇಯರ್ 13 ಪಂದ್ಯಗಳಿಂದ ಕೇವಲ 108 ರನ್ ಗಳಿಸಿದರು. ಹೀಗಾಗಿ ತಂಡ ಇವರನ್ನ ಕೈಬಿಟ್ಟಿತ್ತು. ಇವರ ಮೇಲೆ ಕಣ್ಣಿಟ್ಟಿದ್ದ ಸಿಎಸ್ಕೆ ಹಾಗೂ ಆರ್ಸಿಬಿ ಖರೀದಿ ಮಾಡಲು ಮುಂದಾದ್ವು. ಈ ವೇಳೆ ಕೆಕೆಆರ್, ಸಿಎಸ್ಕೆ ಹಾಗೂ ಆರ್ಸಿಬಿ ತಂಡಗಳು ಬಿಡ್ ಮಾಡಲು ಮುಂದಾದವು. ಮೊದಲಿಗೆ ಸಿಎಸ್ಕೆ 6.50 ಕೋಟಿಗೆ ಖರೀದಿ ಮಾಡಲು ಮುಂದಾದ್ವು. ಆದರೆ ಆರ್ಸಿಬಿ 12.25 ಕೋಟಿ ನೀಡುವುದಾಗಿ ಘೋಷಣೆ ಮಾಡಿದವು. ಇದರ ಬೆನ್ನಲ್ಲೇ ಸಿಎಸ್ಕೆ ಮತ್ತೊಮ್ಮೆ ಖರೀದಿ ಮಾಡಲು ಮುಂದಾಗುತ್ತಿದ್ದಂತೆ ಕೊನೆಯದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 14.25 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿವೆ.
-
#IPLAuction2021 | Glenn Maxwell is sold to Royal Challengers Bangalore for Rs 14.25 Crores: Indian Premier League
— ANI (@ANI) February 18, 2021 " class="align-text-top noRightClick twitterSection" data="
(file photo) pic.twitter.com/YT9RwixgqY
">#IPLAuction2021 | Glenn Maxwell is sold to Royal Challengers Bangalore for Rs 14.25 Crores: Indian Premier League
— ANI (@ANI) February 18, 2021
(file photo) pic.twitter.com/YT9RwixgqY#IPLAuction2021 | Glenn Maxwell is sold to Royal Challengers Bangalore for Rs 14.25 Crores: Indian Premier League
— ANI (@ANI) February 18, 2021
(file photo) pic.twitter.com/YT9RwixgqY
ಮ್ಯಾಕ್ಸ್ವೆಲ್ 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದರು. ಆರಂಭದಲ್ಲಿ ಕೆಕೆಆರ್ ಕೂಡ ಇವರನ್ನ ಖರೀದಿ ಮಾಡಲು ಮುಂದಾಗಿ 4.60 ಕೋಟಿ ರೂಗೆ ಖರೀದಿ ಮಾಡಲು ಮುಂದಾಗಿದ್ದವು. ಇನ್ನು ಸ್ವಿಟ್ ಸ್ಮಿತ್ ಖರೀದಿ ಮಾಡಲು ಉತ್ಸಾಹ ತೋರಿದ್ದ ಆರ್ಸಿಬಿ ಕೊನೆ ಕ್ಷಣದಲ್ಲಿ ಬಿಟ್ಟುಕೊಟ್ಟಿತು.