ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್‌ವೆಲ್ ಅಬ್ಬರದ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದರು. ತಾವು ಎದುರಿಸಿದ 31 ಎಸೆತಗಳಲ್ಲಿ 70 ರನ್ಗಳಿಕೆ ಮಾಡಿರುವ ಅವರು, ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದರು.
ಇಂದಿನ ಪಂದ್ಯದಲ್ಲಿ ಅವರು 8 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದರು. ನ್ಯೂಜಿಲ್ಯಾಂಡ್ ತಂಡದ ಜೇಮ್ಸ್ ನೀಶಮ್ ಎಸೆದ 17ನೇ ಓವರ್ಗಲ್ಲಿ 2 ಸಿಕ್ಸರ್ ಸೇರಿದಂತೆ 28ರನ್ಗಳಿಕೆ (4,6,4,4,4,6)ಮಾಡಿರುವ ಮ್ಯಾಕ್ಸ್‌ವೆಲ್, ಎಲ್ಲ ಎಸೆತಗಳನ್ನೂ ಬೌಂಡರಿ ಗೆರೆ ದಾಟಿಸಿದ್ದಾರೆ.
ಜತೆಗೆ ಇದೇ ಓವರ್‌ನಲ್ಲಿ ಅವರು ಸಿಡಿಸಿದ ಸಿಕ್ಸರ್ವೊಂದು ನೇರವಾಗಿ ಪ್ರೇಕ್ಷಕರು ಕುಳಿತುಕೊಳ್ಳುವ ಸ್ಟ್ಯಾಂಡ್ನ ಆಸನಕ್ಕೆ ಬಡಿಯಿತು. ಪರಿಣಾಮ ಆಸನ ಮುರಿದು ಹೋಗಿದೆ.
-
Maxwell vs Neesham
— PUBG (@pubg75112241) March 3, 2021 " class="align-text-top noRightClick twitterSection" data="
4 6 4 4 4 6
RCB blood >>>>>>>>>> pic.twitter.com/71WWMsoo2W
">Maxwell vs Neesham
— PUBG (@pubg75112241) March 3, 2021
4 6 4 4 4 6
RCB blood >>>>>>>>>> pic.twitter.com/71WWMsoo2WMaxwell vs Neesham
— PUBG (@pubg75112241) March 3, 2021
4 6 4 4 4 6
RCB blood >>>>>>>>>> pic.twitter.com/71WWMsoo2W
ಇದನ್ನೂ ಓದಿ: ಪೂಜಾರ ಬಗ್ಗೆ ಟೀಕೆ ಸರಿಯಲ್ಲ, ಆತ ವಿಶ್ವದರ್ಜೆಯ ಬ್ಯಾಟ್ಸ್ಮನ್: ವಿರಾಟ್ ಕೊಹ್ಲಿ
ಮ್ಯಾಕ್ಸ್‌ವೆಲ್ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದು, ಇದೀಗ ತಂಡಕ್ಕೆ ಆನೆಬಲ ಬಂದತಾಗಿದೆ.
ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 208 ರನ್ಗಳಿಕೆ ಮಾಡಿ, ಎದುರಾಳಿ ತಂಡಕ್ಕೆ ಬೃಹತ್ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ 17.1 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 144 ರನ್ಗಳಿಕೆ ಮಾಡುವಲ್ಲಿ ಮಾತ್ರ ಶಕ್ತವಾಯಿತು. ಜತೆಗೆ 64 ರನ್ಗಳ ಸೋಲು ಕಂಡಿದೆ.