ETV Bharat / sports

‘ಲಾಕ್​ಡೌನ್​ನಲ್ಲಿದ್ದು ಜನರ ಮಾನಸಿಕ ಸ್ಥಿತಿ ಹದಗೆಟ್ಟಿದೆ’...  ಧೋನಿ ನಿವೃತ್ತಿ ಕುರಿತ ಟ್ವೀಟ್​ ವಿರುದ್ಧ ಸಾಕ್ಷಿ ಗರಂ

ಬುಧವಾರ #DhoniRetires ಎಂಬ ಹ್ಯಾಶ್​​ ಟ್ಯಾಗ್​ನೊಡನೆ ಕೆಲವರು ಟ್ವೀಟ್ ಮಾಡುತ್ತಿದ್ದರು. ಇದಕ್ಕೆ ಧೋನಿ ಅಭಿಮಾನಿಗಳು ಹಾಗೂ ಧೋನಿ ಪತ್ನಿ ಸಾಕ್ಷಿ ಆಕ್ರೋಶಬರಿತ ಟ್ವೀಟ್​ ಮಾಡಿದ್ದಾರೆ.

author img

By

Published : May 28, 2020, 1:32 PM IST

ಮಹೇಂದ್ರ ಸಿಂಗ್​ ಧೋನಿ ನಿವೃತ್ತಿ
ಮಹೇಂದ್ರ ಸಿಂಗ್​ ಧೋನಿ ನಿವೃತ್ತಿ

ಮುಂಬೈ: 2020 ಟಿ20 ವಿಶ್ವಕಪ್​ ಮುಂದೂಡುವ ಸುದ್ದಿ ಹರಡುತ್ತಿದ್ದಂತೆ ಕೊನೆಯ ವಿಶ್ವಕಪ್​ ಆಡುವ ಕನಸಿನಲ್ಲಿರುವ ಧೋನಿ ವೃತ್ತಿ ಬದುಕು ಮುಗಿದೆ ಹೋಯಿತು ಎನ್ನುವ ಅರ್ಥದಲ್ಲಿ ಭಾರತೀಯ ಅಭಿಮಾನಿಗಳು ಟ್ವೀಟ್​ ಮಾಡುತ್ತಿದ್ದಾರೆ.

ಬುಧವಾರ #DhoniRetires ಎಂಬ ಹ್ಯಾಶ್​​ ಟ್ಯಾಗ್​ನೊಡನೆ ಟ್ವೀಟ್ ಮಾಡುತ್ತಿದ್ದರು. ಇದಕ್ಕೆ ಧೋನಿ ಅಭಿಮಾನಿಗಳು ಹಾಗೂ ಧೋನಿ ಪತ್ನಿ ಸಾಕ್ಷಿ ಆಕ್ರೋಶಬರಿತ ಟ್ವೀಟ್​ ಮಾಡಿದ್ದಾರೆ.

‘ಇದು ಕೇವಲ ಸುಳ್ಳು ಸುದ್ದಿ, ಲಾಕ್ ಡೌನ್​ನಲ್ಲಿ ಜನರ ಮಾನಸಿಕ ಸ್ಥಿತಿ ಹದಗೆಟ್ಟಿದೆ ಎಂದು ನನಗೆ ತಿಳಿದಿದೆ’ ಎಂದು ಸಾಕ್ಷಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಆದರೆ ಸ್ವಲ್ಪ ಹೊತ್ತಿಗೆ ಆ ಟ್ವೀಟ್​ ಡಿಲೀಟ್​ ಮಾಡಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ
ಮಹೇಂದ್ರ ಸಿಂಗ್​ ಧೋನಿ

ಧೋನಿ ನಿವೃತ್ತಿ ವದಂತಿ ಬಗ್ಗೆ ಸಾಕ್ಷಿ ಟ್ವೀಟ್​ ಮೂಲಕ ಕಿಡಿ ಕಾರುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಸಾಮಾಜಿಕ ಜಾಲಾತಾಣದಲ್ಲಿ ಧೋನಿ ನಿವೃತ್ತಿಯ ಟ್ವೀಟ್​ಗಳು ಭಾರಿ ವೈರಲ್​ ಆಗಿದ್ದವು, ಅಂದೂ ಕೂಡ ಸಾಕ್ಷಿ, ಇದನ್ನು ಸುಳ್ಳು ಸುದ್ದಿ ಎಂದು ಟ್ವೀಟ್​ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರು.

2019ರ ವಿಶ್ವಕಪ್ ಸೆಮಿಫೈನಲ್​ ನಂತರ ಧೋನಿ ನಿವೃತ್ತಿ ವಿಚಾರ ಭಾರಿ ಚರ್ಚೆಯಾಗುತ್ತಿದೆ. 2020ರ ಐಪಿಎಲ್​ ನಲ್ಲಿ ಆಡಲಿದ್ದಾರೆ. ಇದರಲ್ಲಿ ಉತ್ತಮ ಪ್ರದರ್ಶನ ತೋರಿ ನಂತರ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡಕ್ಕೆ ಮರಳಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಕೊರೊನಾ ವೈರಸ್​ನಿಂದ ಐಪಿಎಲ್​ ಹಾಗೂ ವಿಶ್ವಕಪ್​ ಮುಂದೂಡಲಾಗುತ್ತಿದ್ದು ಧೋನಿ ಅಭಿಮಾನಿಗಳಿಗೆ ನಿರಾಶೆಯನ್ನುಂಟು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.