ETV Bharat / sports

ಜುಲೈನಲ್ಲಿ 2ನೇ ಮಗು ಆಗಮನದ ನಿರೀಕ್ಷೆ.. ಸಂತಸ ಹಂಚಿಕೊಂಡ ಹರ್ಭಜನ್​-ಗೀತಾ ದಂಪತಿ! - ಕ್ರಿಕೆಟರ್ ಹರ್ಭಜನ್ ಸಿಂಗ್- ಗೀತಾ ಬಸ್ರಾ

ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಒಂದು ಪೋಟೋದಲ್ಲಿ ತಮ್ಮ ಮಗಳು ಹಿನಾಯಾ ಕೈಯಲ್ಲಿ "ಶೀಘ್ರದಲ್ಲೇ ನಾನು ಅಕ್ಕನಾಗಳಿದ್ದೇನೆ" ಎಂದು ಬರೆದಿರುವ ಟೀ ಶರ್ಟ್​ ಹಿಡಿಸಿ ಪೋಟೋಗೆ ಪೋಸ್​ ನೀಡಿಸಿದ್ದಾರೆ..

ಹರ್ಭಜನ್ ಸಿಂಗ್- ಗೀತಾ ಬಸ್ರಾ
ಹರ್ಭಜನ್ ಸಿಂಗ್- ಗೀತಾ ಬಸ್ರಾ
author img

By

Published : Mar 14, 2021, 8:46 PM IST

ಮುಂಬೈ: ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಎರಡನೇ ಮಗುವಿನ ತಂದೆಯಾಗುತ್ತಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ಭಜ್ಜಿ ಪತ್ನಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ಟ್ವಿಟರ್​ ಮತ್ತು ಇನ್‌ಸ್ಟಾಗ್ರಾಮ್​ನಲ್ಲಿ ಹರ್ಭಜನ್ ಪತ್ನಿ ಗೀತಾ ಬಸ್ರಾ ತಮ್ಮ ಬೇಬಿ ಬಂಪ್​ ಚಿತ್ರಗಳ ಜೊತೆಗೆ 'ಜುಲೈ 2021ಕ್ಕೆ' ತಮ್ಮ ಕುಟುಂಬಕ್ಕೆ ಮತ್ತೊಂದು ಮಗುವಿನ ಆಗಮನವಾಗಲಿದೆ ಎಂದು ಬರೆದುಕೊಂಡಿದ್ದಾರೆ.

ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಒಂದು ಪೋಟೋದಲ್ಲಿ ತಮ್ಮ ಮಗಳು ಹಿನಾಯಾ ಕೈಯಲ್ಲಿ "ಶೀಘ್ರದಲ್ಲೇ ನಾನು ಅಕ್ಕನಾಗಳಿದ್ದೇನೆ" ಎಂದು ಬರೆದಿರುವ ಟೀ ಶರ್ಟ್​ ಹಿಡಿಸಿ ಪೋಟೋಗೆ ಪೋಸ್​ ನೀಡಿಸಿದ್ದಾರೆ.

ಬಾಲಿವುಡ್ ನಟಿ ಗೀತಾ ಬಸ್ರಾ 2015ರಲ್ಲಿ ಹರ್ಭಜನ್ ಸಿಂಗ್​ರನ್ನು ವರಿಸಿದ್ದರು. ಈ ಜೋಡಿಗೆ 2016 ಜುಲೈ 28ರಂದು ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ಹಿನಾಯಾ ಹೀರ್ ಪ್ಲಾಹಾ ಎಂದು ನಾಮಕರಣ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.