ETV Bharat / sports

ದ್ರಾವಿಡ್ - ಸಚಿನ್ ಮಾರ್ಗದರ್ಶನ ಸಿಕ್ರೆ ರೋಹಿತ್​ ಅತ್ಯುತ್ತಮ ಟೆಸ್ಟ್​ ಬ್ಯಾಟ್ಸ್​ಮನ್ ಆಗ್ತಾರೆ: ಗಂಭೀರ್​ ಸಲಹೆ - undefined

ರೋಹಿತ್​​ ಶರ್ಮಾ ಅತ್ಯುತ್ತಮ ಬ್ಯಾಟ್ಸ್​ಮನ್​ ಆದರೆ, ಟೆಸ್ಟ್​ ಕ್ರಿಕೆಟ್​ನಲ್ಲೂ ಅವರು ಅತ್ಯುತ್ತಮರಾಗಬೇಕಾದರೆ ದ್ರಾವಿಡ್​ - ಸಚಿನ್​ ಮಾರ್ಗದರ್ಶನದ ಅಗತ್ಯತೆ ಇದೆ ಎಂದು ಗೌತಮ್​ ಗಂಭೀರ್​ ಅಭಿಪ್ರಾಯಪಟ್ಟಿದ್ದಾರೆ

ರೋಹಿತ್​​ ಶರ್ಮಾ
author img

By

Published : Aug 6, 2019, 9:29 PM IST

ನವದೆಹಲಿ: ಭಾರತ ತಂಡದ ರೋಹಿತ್​ ಶರ್ಮಾಗೆ ರಾಹುಲ್​ ದ್ರಾವಿಡ್​ ಅಥವಾ ಸಚಿನ್​ ತೆಂಡೂಲ್ಕರ್​ ಅವರಂತಹ ಟೆಸ್ಟ್​ ತಜ್ಞರು ಮೆಂಟರ್​ ಆದರೆ, ಹಿಟ್​ಮ್ಯಾನ್​ ವಿಶ್ವಶ್ರೇಷ್ಠ ಟೆಸ್ಟ್​ ಬ್ಯಾಟ್ಸ್​ಮನ್​ ಆಗಲಿದ್ದಾರೆ ಎಂದು ಭಾರತ ತಂಡದ ಮಾಜಿ ಆಟಗಾರ ಗಂಭೀರ್​ ಅಭಿಪ್ರಾಯ ಪಟ್ಟಿದ್ದಾರೆ.

ರೋಹಿತ್​ ಶರ್ಮಾ ಇತ್ತೀಚೆಗೆ ಮುಗಿದ ವಿಶ್ವಕಪ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. 9 ಪಂದ್ಯಗಳಿಂದ 5 ಸೆಂಚುರಿ ಸಹಿತ 648 ರನ್​ಗಳಿಸಿದ್ದರು. ಇನ್ನು ಪ್ರಸ್ತುತ ನಡೆಯುತ್ತಿರುವ ವಿಂಡೀಸ್​ ವಿರುದ್ಧದ ಟಿ-20 ಸರಣಿಯಲ್ಲಿ ಎರಡು ಪಂದ್ಯಗಳಲ್ಲೂ ಭಾರತದ ಪರ ಗರಿಷ್ಠ ಸ್ಕೋರರ್​ ಆಗಿದ್ದರು.

ರೋಹಿತ್​ ನಿಜಕ್ಕೂ ಸೀಮಿತ ಓವರ್​ಗಳ ಪಂದ್ಯಗಳಲ್ಲಿ ಅತ್ಯುತ್ತಮ ಬ್ಯಾಟ್ಸ್​ಮನ್.​ ಆದರೆ, ಟೆಸ್ಟ್​ ಕ್ರಿಕೆಟ್​ಗೆ ಹೋಲಿಸಿದರೆ ಅವರ ಪ್ರದರ್ಶನ ತೀರಾ ಕಳಪೆಯಾಗಿದೆ. ರೋಹಿತ್​ ಶರ್ಮಾಗೆ ರಾಹುಲ್ ದ್ರಾವಿಡ್​ ಅಥವಾ ಸಚಿನ್​ ತೆಂಡೂಲ್ಕರ್​ ಅಂತಹವರು ಕೆಲವು ತಿಂಗಳು ಮಾರ್ಗದರ್ಶಕರಾದರೆ ರೋಹಿತ್​ ನಿಜಕ್ಕೂ ಟೆಸ್ಟ್​ನಲ್ಲೂ ತಮ್ಮ ಪ್ರತಿಭೆ ಹೊರಹಾಕಿಲಿದ್ದಾರೆ ಎಂದು ಗೌತಿ ಅಭಿಪ್ರಾಯವಾಗಿದೆ.

ರೋಹಿತ್​ಗೆ ಟೆಸ್ಟ್​ ಕ್ರಿಕೆಟ್​ಗೆ ಒಗ್ಗಿಸಿಕೊಳ್ಳಲಾಗುತ್ತಿಲ್ಲ. ಅವರಿಗೆ ಟೆಸ್ಟ್​ನಲ್ಲಿ ಫಾರ್ಮ್​ ಕಂಡುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಕೆಲವು ಮಾತುಗಳನ್ನು ಹೇಳಿಕೊಡಬೇಕಿದೆ. ಇಬ್ಬರು ಲೆಜೆಂಡರಿ ಕ್ರಿಕೆಟಿಗರ ಮಾರ್ಗದರ್ಶನದಿಂದ ಸೀಮಿತ ಓವರ್​ಗಳ ಪ್ರದರ್ಶನವನ್ನು ರೋಹಿತ್​ ಟೆಸ್ಟ್​ ಕ್ರಿಕೆಟ್​ಗೆ ವರ್ಗಾಯಿಸಿಕೊಳ್ಳಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವಿಂಡೀಸ್​ ವಿರುದ್ಧದ ಟಿ20ಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರವ ಪಂತ್ ಬಗ್ಗೆಯೂ ಮಾತನಾಡಿದ್ದು, ಪಂತ್​ಗೆ ಧೋನಿ ಗೈರಿನಲ್ಲಿ ತಮ್ಮ ಪ್ರದರ್ಶನ ತೋರಲು ಅದ್ಭುತ ಅವಕಾಶ ಸಿಕ್ಕಿದೆ. ಅದನ್ನು ಉಪಯೋಗಿಸಿಕೊಳ್ಳಬೇಕಿದೆ. ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಆದರೆ, ನನ್ನ ಪ್ರಕಾರ ಯುವ ಆಟಗಾರರರಿಗೆ ಹೆಚ್ಚಿನ ಅವಕಾಶ ನೀಡಬೇಕು. ಹಾಗೆ ಆ ಅವಕಾಶಗಳನ್ನು ಪಂತ್​ ಅವರಂತಹ ಯುವಕರು ಸದುಪಯೋಗ ಪಡಿಸಿಕೊಳ್ಳುವತ್ತ ಗಮನ ನೀಡಿದರೆ ಒಳಿತು ಎಂದಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.