ETV Bharat / sports

ಅಶ್ವಿನ್​ ಕ್ಲಾಸ್​ ಪ್ಲೇಯರ್​, ಆತ ವೈಟ್​ಬಾಲ್​ ಕ್ರಿಕೆಟ್​ ಆಡದಿರುವುದು ದುರದೃಷ್ಟಕರ: ಗಂಭೀರ್​ - gambhir ashwin news

ಐಪಿಎಲ್​ ಮತ್ತು ಸುದೀರ್ಘ ಮಾದರಿಯು ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಅಶ್ವಿನ್ ಅವರನ್ನು ಸೀಮಿತ ಓವರ್​ ತಂಡಕ್ಕೆ ಆಯ್ಕೆ ಮಾಡದಿರುವುದಕ್ಕೆ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್ ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿಚಂದ್ರನ್  ಅಶ್ವಿನ್
ರವಿಚಂದ್ರನ್ ಅಶ್ವಿನ್
author img

By

Published : Feb 23, 2021, 3:10 PM IST

ಮುಂಬೈ: ಭಾರತ ತಂಡದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್​ ಒಬ್ಬ ಕ್ಲಾಸ್​ ಪ್ಲೇಯರ್ ಆಗಿದ್ದು, ಪ್ರಸ್ತುತ ಆತ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಆಡದಿರುವುದು ದುರದೃಷ್ಟಕರ ಎಂದು ಮಾಜಿ ಕ್ರಿಕೆಟಿಗರ ಗೌತಮ್ ಗಂಭೀರ್​ ತಿಳಿಸಿದ್ದಾರೆ.

ಕಳೆದ ಆಸ್ಟ್ರೇಲಿಯಾ ಪ್ರವಾಸದ ವೇಳೆ ರವಿಚಂದ್ರನ್ ಅಶ್ವಿನ್ ಗಾಯಗೊಂಡು ನಾಲ್ಕನೇ ಟೆಸ್ಟ್​ನಿಂದ ಹೊರಬೀಳುವ ಮುನ್ನ ಮೂರು ಪಂದ್ಯಗಳಿಂದ 12 ವಿಕೆಟ್ ಪಡೆದಿದ್ದರು. ಅಲ್ಲದೇ ಸಿಡ್ನಿ ಟೆಸ್ಟ್​ನಲ್ಲಿ ಹನುಮ ವಿಹಾರಿ ಜೊತೆ 43 ಓವರ್​ಗಳ ಕಾಲ ಬ್ಯಾಟಿಂಗ್ ನಡೆಸಿ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ತಮ್ಮ ಅದ್ಭುತ ಪ್ರದರ್ಶನ ಮುಂದುವರಿಸಿದ್ದಾರೆ. ಅಶ್ವಿನ್​ ಮೊದಲ ಟೆಸ್ಟ್​ ಪಂದ್ಯದಲ್ಲಿ 9 ಹಾಗೂ ಎರಡನೇ ಟೆಸ್ಟ್‌ ಪಂದ್ಯದಲ್ಲಿ 8 ವಿಕೆಟ್ ಜೊತೆಗೆ ಶತಕ ಸಿಡಿಸಿ ಬ್ಯಾಟಿಂಗ್​ನಲ್ಲೂ ಮಿಂಚುವ ಮೂಲಕ ಭಾರತ ತಂಡ 317 ರನ್‌ಗಳ ಜಯ ಸಾಧಿಸಲು ನೆರವಾಗಿದ್ದರು.

ಐಪಿಎಲ್​ ಮತ್ತು ಸುದೀರ್ಘ ಮಾದರಿಯು ಕ್ರಿಕೆಟ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಅಶ್ವಿನ್ ಅವರನ್ನು ಸೀಮಿತ ಓವರ್​ ತಂಡಕ್ಕೆ ಆಯ್ಕೆ ಮಾಡದಿರುವುದಕ್ಕೆ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್ ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ 400 ವಿಕೆಟ್‌ಗಳ ಸಮೀಪದಲ್ಲಿರುವ ಮತ್ತು 5 ಬಾರಿ ಶತಕ ಬಾರಿಸಿದ ಒಬ್ಬ ಆಟಗಾರ ವೈಟ್‌ಬಾಲ್‌ ಕ್ರಿಕೆಟ್‌ನ ಭಾಗವಾಗದಿರುವುದು ತುಂಬಾ ದುರದೃಷ್ಟಕರ ಸಂಗತಿ. ಅವರು ಕ್ಲಾಸ್​ ಪ್ಲೇಯರ್​ ಎಂದು ಅಶ್ವಿನ್ ಎಂದು ಗಂಭೀರ್​ ಸ್ಟಾರ್​ ಸ್ಪೋರ್ಟ್ಸ್​ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ತಿಳಿಸಿದ್ದಾರೆ.

ಅವರು ತಮ್ಮ ಬೌಲಿಂಗ್​ ವಿಭಿನ್ನತೆಯನ್ನು ಹೊಂದಿರುವ ಒಬ್ಬ ಅತ್ಯುತ್ತಮ ಗುಣಮಟ್ಟವುಳ್ಳ ಬೌಲರ್​ ಆಗಿದ್ದಾರೆ. ಸಾಕಷ್ಟು ಕ್ರಿಕೆಟ್​ ಆಡಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ ದೀರ್ಘ ಸಮಯದಿಂದ ಆಡಿದ್ದರು. ಇನ್ನೂ ಅವರು ಪ್ರಭಾವ ಬೀರುತ್ತಿರುವುದು ನಂಬಲಾಸಾಧ್ಯವಾಗಿದೆ ಎಂದು ಗಂಭೀರ್​ ಹೇಳಿದ್ದಾರೆ.

ಇದನ್ನು ಓದಿ:ವಿಜಯ ಹಜಾರೆ ಟ್ರೋಫಿಯಲ್ಲಿ ಆಡಿದ್ದ ಬಿಹಾರ ಆಟಗಾರನಿಗೆ ಕೋವಿಡ್​ 19 ಪಾಸಿಟಿವ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.