ETV Bharat / sports

ಮನೆಕೆಲಸದಾಕೆಯ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಗೌತಮ್ ಗಂಭೀರ್ - Gautam Gambhir humanity work

49 ವರ್ಷದ ಒಡಿಸಾ ಮೂಲದ ಸರಸ್ವತಿ ಎಂಬುವವರು ಕಳೆದ 7 ವರ್ಷದಿಂದ ಗಂಭೀರ್​ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದರು. ಸಕ್ಕರೆ ಕಾಯಿಲೆ​ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ಇವರನ್ನು ಏಪ್ರಿಲ್​ 14ರಂದು ಶ್ರೀಗಂಗಾ ಆಸ್ಪತ್ರೆಗೆ ದಾಖಲಿಸಿದ್ದರು.

ಗೌತಮ್ ಗಂಭೀರ್
ಗೌತಮ್ ಗಂಭೀರ್
author img

By

Published : Apr 25, 2020, 8:28 AM IST

ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್​ ಆನಾರೋಗ್ಯದಿಂದ ಮೃತಪಟ್ಟ ಮನೆಕೆಲಸದಾಕೆಯ ಅಂತ್ಯಸಂಸ್ಕಾರವನ್ನು ತಾವೇ ನಿರ್ವಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ,

49 ವರ್ಷದ ಒಡಿಸಾ ಮೂಲದ ಸರಸ್ವತಿ ಎಂಬುವವರು ಕಳೆದ 7 ವರ್ಷದಿಂದ ಗಂಭೀರ್​ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಸಕ್ಕರೆ ಕಾಯಿಲೆ​ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ಇವರನ್ನು ಏಪ್ರಿಲ್​ 14ರಂದು ಶ್ರೀಗಂಗಾ ಆಸ್ಪತ್ರೆಗೆ ದಾಖಲಿಸಿದ್ದರು.

  • Taking care of my little one can never be domestic help. She was family. Performing her last rites was my duty. Always believed in dignity irrespective of caste, creed, religion or social status. Only way to create a better society. That’s my idea of India! Om Shanti pic.twitter.com/ZRVCO6jJMd

    — Gautam Gambhir (@GautamGambhir) April 23, 2020 " class="align-text-top noRightClick twitterSection" data=" ">

ಈ ವಿಚಾರವನ್ನು ಸರಸ್ವತಿ ಕುಟುಂಬಕ್ಕೆ ತಿಳಿಸಿದರಾದರೂ, ಅವರು ಲಾಕ್​ಡೌನ್​ ಇದ್ದದ್ದರಿಂದ ದೆಹಲಿಗೆ ಬರಲು ಸಾಧ್ಯವಾಗಿರಲಿಲ್ಲ. ಕೊನೆಗೂ ಸರಸ್ವತಿ ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್​ 23 ರಂದು ನಿಧರಾಗಿದ್ದರು. ಮಹಿಳೆಯ ಕುಟುಂಬವರು ಬಾರಲಾಗದ ಕಾರಣ ಸ್ವತಃ ಗಂಭೀರ್​ ಮುಂದೆ ಅಂತ್ಯಸಂಸ್ಕಾರ ನಡೆಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

"ನನ್ನ ಮಗನನ್ನು ನೋಡೊಕೊಳ್ಳುತ್ತಿದ್ದವರೂ ನಮ್ಮ ಮನೆಯ ಸದಸ್ಯರೇ ಆಗಿದ್ದರು. ಹೀಗಾಗಿ ಅವರ ಅಂತ್ಯ ಸಂಸ್ಕಾರ ನಡೆಸುವುದು ನನ್ನ ಕರ್ತವ್ಯವಾಗಿದೆ. ಜಾತಿ, ಧರ್ಮ, ಮತ ಅಥವಾ ಸಾಮಾಜಿಕ ಸ್ಥಾನವನ್ನು ಲೆಕ್ಕಿಸದೆ ಸದಾ ಮಾನವೀಯ ಮೌಲ್ಯವನ್ನು ನಂಬುತ್ತೇನೆ. ಉತ್ತಮ ಸಮಾಜ ನಿರ್ಮಿಸುವುದಕ್ಕೆ ಉತ್ತಮ ಮಾರ್ಗ, ಅದೇ ಭಾರತದ ಆಲೋಚನೆ ಕೂಡ! ಓಮ ಶಾಂತಿ" ಎಂದು ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.