ನವದೆಹಲಿ: ಐಪಿಎಲ್ ಮುಕ್ತಾಯಗೊಂಡ ಬಳಿಕ ಇನ್ನೇನು ಸದ್ಯದಲ್ಲೇ ಆರಂಭವಾಗಲಿರುವ ವಿಶ್ವಕಪ್ಗೆ ಟೀಂ ವಿರಾಟ್ ಕೊಹ್ಲಿ ನೇತೃತ್ವದ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ. ಈ ನಡುವೆ ವಿಶ್ವಕಪ್ಗೆ ಆಯ್ಕೆಯಾಗಿರುವ ಭಾರತ ತಂಡಕ್ಕೆ ಮತ್ತೊಬ್ಬ ವೇಗದ ಬೌಲರ್ ಕೊರತೆ ಕಾಡಲಿದೆ ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮೊಹಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ ಜೊತೆ ಬೆಂಬಲವಾಗಿ ಇನ್ನೊಬ್ಬ ವೇಗದ ಬೌಲರ್ ಅಗತ್ಯವಿತ್ತು. ಇಬ್ಬರು ಆಲ್ರೌಂಡರ್ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ವಿಜಯ್ ಶಂಕರ್ ಇದ್ದರೂ ಅವರ ಸಾಮರ್ಥ್ಯದ ಬಗ್ಗೆ ತಮಗೆ ಸಹಮತವಿಲ್ಲ ಎಂದು ಗೌತಿ ಹೇಳಿದ್ದಾರೆ.
ಇನ್ನು ಇಂಗ್ಲೆಂಡ್ನಲ್ಲಿ ಪಿಚ್ಗಳು ಪ್ಲಾಟ್ ಆಗಿರಲಿವೆ. ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಹೇಗೆ ಬೌಲಿಂಗ್ ಮಾಡಲಿದ್ದಾರೆ ಎಂಬುದು ತಂಡದ ಯಶಸ್ಸನ್ನು ನಿರ್ಣಯಿಸಲಿದೆ. ಅಲ್ಲದೇ ವಿಶ್ವಕಪ್ನಲ್ಲಿ ಬೃಹತ್ ಮೊತ್ತಗಳು ದಾಖಲಾಗಲಿವೆ ಎಂದು ಗಂಭೀರ್ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿದ್ದು, ಉತ್ತಮ ಬೌಲರ್ಗಳನ್ನು ಹೊಂದಿದೆ. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್, ಡೆವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ತಂಡಕ್ಕೆ ಮರಳಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ಆಸ್ಟ್ರೇಲಿಯಾವನ್ನು ಸೋಲಿಸುವುಸು ಸುಲಭವಲ್ಲ, ಮುಖ್ಯವಾದ ಪಂದ್ಯಗಳಲ್ಲಿ ಹೇಗೆ ಆಡಬೇಕೆನ್ನುವುದು ಆಸಿಸ್ಗೆ ಚೆನ್ನಾಗಿ ಗೊತ್ತು ಎಂಬುದು ಗಂಭೀರ್ ಮಾತಾಗಿದೆ.