ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಮತ್ತು ರೋಹಿತ್ ಶರ್ಮಾ, ಗಂಗೂಲಿ ಅವರನ್ನ ಭೇಟಿ ಮಾಡಿದ್ದಾರೆ.
-
All smiles at the Senior Selection Committee meeting earlier this afternoon as the teams for the forthcoming T20I & Test series against Bangladesh were announced #TeamIndia 🇮🇳🇮🇳📸📸 pic.twitter.com/BxA1S6Hc0Z
— BCCI (@BCCI) October 24, 2019 " class="align-text-top noRightClick twitterSection" data="
">All smiles at the Senior Selection Committee meeting earlier this afternoon as the teams for the forthcoming T20I & Test series against Bangladesh were announced #TeamIndia 🇮🇳🇮🇳📸📸 pic.twitter.com/BxA1S6Hc0Z
— BCCI (@BCCI) October 24, 2019All smiles at the Senior Selection Committee meeting earlier this afternoon as the teams for the forthcoming T20I & Test series against Bangladesh were announced #TeamIndia 🇮🇳🇮🇳📸📸 pic.twitter.com/BxA1S6Hc0Z
— BCCI (@BCCI) October 24, 2019
ಭಾರತ ಮತ್ತು ಬಾಂಗ್ಲಾದೇಶ ವಿರುದ್ಧ ಟಿ-20 ಮತ್ತು ಟೆಸ್ಟ್ ಸರಣಿಗೆ ಆಟಗಾರರನ್ನ ಆಯ್ಕೆ ಮಾಡುವ ಸಲುವಾಗಿ ಸೇರಿದ್ದ ಸಭೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಜರಾಗಿದ್ದರು.
ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್, ಬಿಸಿಸಿಐ ನೂತನ ಕಾರ್ಯದರ್ಶಿ ಜೈ ಶಾ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾಗಿಯಾಗಿದ್ದರು.
ಈಗಾಗಲೇ ಬಾಂಗ್ಲಾ ವಿರುದ್ಧದ ಟಿ-20 ಮತ್ತು ಟೆಸ್ಟ್ ಸರಣಿಗೆ 15 ಆಟಗಾರರ ತಂಡವನ್ನ ಬಿಸಿಸಿಐ ಘೋಷಣೆ ಮಾಡಿದೆ. ಟಿ-20 ಸರಣಿಯಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್ ಶರ್ಮಾಗೆ ನಾಯಕನ ಸ್ಥಾನ ನೀಡಲಾಗಿದೆ.