ETV Bharat / sports

ಈಡನ್ ಗಾರ್ಡನ್‌ಗೆ ಗಂಗೂಲಿ ಭೇಟಿ: ಸೈಯದ್ ಮುಷ್ತಾಕ್ ಅಲಿ ಟೂರ್ನಿ ಸಿದ್ಧತೆಗಳ ಬಗ್ಗೆ ಚರ್ಚೆ

author img

By

Published : Dec 31, 2020, 7:57 AM IST

ಬುಧವಾರ ಈಡನ್ ಗಾರ್ಡನ್‌ಗೆ ಭೇಟಿ ನೀಡಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ‘ಸೈಯದ್ ಮುಷ್ತಾಕ್ ಅಲಿ’ ಟ್ರೋಫಿಯ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

Ganguly visits Eden Gardens
ಈಡನ್ ಗಾರ್ಡನ್‌ಗೆ ಗಂಗೂಲಿ ಭೇಟಿ

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಬುಧವಾರ ಈಡನ್ ಗಾರ್ಡನ್‌ಗೆ ಭೇಟಿ ನೀಡಿ ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸಿದ್ಧತೆಗಳ ಬಗ್ಗೆ ಕ್ರಿಕೆಟ್ ಅಸೋಸಿಯೇಷನ್ ​​ಆಫ್ ಬಂಗಾಳ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಅವರೊಂದಿಗೆ ಚರ್ಚಿಸಿದ್ದಾರೆ.

ಗಂಗೂಲಿ, ಬಂಗಾಳ ತರಬೇತುದಾರ ಅರುಣ್ ಲಾಲ್ ಅವರೊಂದಿಗೆ ತಂಡದ ಸಿದ್ಧತೆಗಳ ಬಗ್ಗೆ ಚರ್ಚಿಸಿ, ಕ್ರಿಕೆಟಿಗರೊಂದಿಗೆ ಕೂಡ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ಭಾರತದ ಮಾಜಿ ಬ್ಯಾಟ್ಸ್‌ಮನ್ ವಿ.ವಿ.ಎಸ್.ಲಕ್ಷ್ಮಣ್ ಮಾತನಾಡಿ, ಬಂಗಾಳವು ಉತ್ತಮ ಸಂಪರ್ಕದಲ್ಲಿದ್ದು, ಚುಟುಕು ಕ್ರಿಕೆಟ್​ ಟೂರ್ನಿಗೆ ಸಿದ್ಧವಾಗಿದೆ ಎಂದು ಹೇಳಿದ್ದರು.

"ಬಂಗಾಳ ಆಟಗಾರರು ನಿಜವಾಗಿಯೂ ಉತ್ತಮವಾಗಿ ತಯಾರಾಗಿದ್ದಾರೆಂದು ನಾನು ಭಾವಿಸುತ್ತೇನೆ. ಬ್ಯಾಟ್ಸ್‌ಮನ್‌ಗಳು ಚೆಂಡನ್ನು ಹೊಡೆಯುವ ರೀತಿ ನನಗೆ ತುಂಬಾ ಸಂತೋಷವಾಯಿತು. ಹೆಚ್ಚು ಸ್ಪರ್ಧಾತ್ಮಕವಾಗಿದ್ದ ಬಂಗಾಳ ಟಿ-20 ಚಾಲೆಂಜ್ ಉತ್ತಮ ಸಂಪರ್ಕದಲ್ಲಿರಲು ಸಹಾಯ ಮಾಡಿತು. ಫಾರ್ಮ್​ನಲ್ಲಿರುವ ಹಲವು ಆಟಗಾರರು ಉತ್ತಮ ಪ್ರದರ್ಶನ ತೋರಲಿದ್ದು, ಬಂಗಾಳ ಪಂದ್ಯಾವಳಿಯನ್ನು ಗೆಲ್ಲುತ್ತದೆ ಎಂದು ಭಾವಿಸುತ್ತೇನೆ" ಎಂದು ಲಕ್ಷ್ಮಣ್ ಹೇಳಿದ್ದಾರೆ.

Ganguly visits Eden Gardens
ವಿವಿಎಸ್ ಲಕ್ಷ್ಮಣ್

"ನಾಯಕತ್ವವು ಅಭಿಮನ್ಯು ಈಶ್ವರನ್ ಅವರ ಪ್ರದರ್ಶನಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುವುದಿಲ್ಲ. ಹೆಚ್ಚುವರಿ ಜವಾಬ್ದಾರಿ ಇನ್ನೂ ಉತ್ತಮವಾಗಿರುತ್ತದೆ ಎಂದು ನಾನು ನಂಬಿದ್ದೇನೆ. ಅದನ್ನೇ ಅವರು ಬಂಗಾಳಕ್ಕಾಗಿ ಇಷ್ಟು ವರ್ಷಗಳಿಂದ ಮಾಡುತ್ತಿದ್ದಾರೆ. ಅವರು ಈ ಟೂರ್ನಿಯಲ್ಲಿ ಹೆಚ್ಚು ರನ್​ ಗಳಿಸುವವರಾಗಿದ್ದಾರೆ. ಕೇವಲ ಬಂಗಾಳ ಅಷ್ಟ್ರೇ ಅಲ್ಲ, ಅವಕಾಶ ಸಿಕ್ಕಾಗಲೆಲ್ಲ ಭಾರತ ಎ ತಂಡದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅದಕ್ಕಾಗಿಯೇ ಈ ತಂಡವನ್ನು ಮುನ್ನಡೆಸುವ ಹೆಚ್ಚುವರಿ ಜವಾಬ್ದಾರಿ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುವುದಿಲ್ಲ" ಎಂದು ಹೇಳಿದ್ದಾರೆ.

ಓದಿ ಟೆಸ್ಟ್ ಕ್ರಿಕೆಟ್​ನಲ್ಲಿ ರಹಾನೆ ಶತಕ ಬಾರಿಸಿದ ಪಂದ್ಯಗಳಲ್ಲಿ ಭಾರತಕ್ಕೆ ಸೋಲೇ ಇಲ್ಲ!

ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ನಾಕೌಟ್ ಪಂದ್ಯಗಳನ್ನು ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣವು ಆಯೋಜಿಸಲಿದೆ. ಕ್ವಾರ್ಟರ್ ಫೈನಲ್ (ಜನವರಿ 26-27), ಸೆಮಿಫೈನಲ್ (ಜನವರಿ 29) ಮತ್ತು ಜನವರಿ 31 ರಂದು ನಡೆಯುವ ಪಂದ್ಯಗಳು ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಬಿಸಿಸಿಐ ತನ್ನ ಅಂಗಸಂಸ್ಥೆಗಳಿಗೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.