ETV Bharat / sports

ಆಸ್ಟ್ರೇಲಿಯಾ ಟೂರ್​ಗೆ ರೋಹಿತ್​ ಆಯ್ಕೆ ವಿಚಾರ... ಗಂಗೂಲಿ ತಿಳಿಸಿದ್ರು ಮಹತ್ವದ ಮಾಹಿತಿ! - ಇಂಡಿಯಾ ವರ್ಸಸ್​ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ರೋಹಿತ್​​ ಶರ್ಮಾ ಹೊರಗುಳಿದಿದ್ದು, ಇದರ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವವಾಗಿವೆ. ಇದೇ ವಿಚಾರವಾಗಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಮಾತನಾಡಿದ್ದಾರೆ.

Ganguly
Ganguly
author img

By

Published : Nov 3, 2020, 3:32 PM IST

ನವದೆಹಲಿ: ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ, ಟಿ -20 ಹಾಗೂ ಟೆಸ್ಟ್​ ಸರಣಿಗಾಗಿ ಟೀಂ ಇಂಡಿಯಾ ಆಯ್ಕೆಯಾಗಿದ್ದು, ಆರಂಭಿಕ ಆಟಗಾರ ರೋಹಿತ್​ ಶರ್ಮಾಗೆ ಅವಕಾಶ ನೀಡಿಲ್ಲ. ಇದರ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿರುವ ಮಧ್ಯೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

Rohit Sharma
ರೋಹಿತ್​ ಶರ್ಮಾ

ರೋಹಿತ್​ ಶರ್ಮಾ ಸಂಪೂರ್ಣವಾಗಿ ಫಿಟ್​ ಆಗಿದ್ರೆ ಆಯ್ಕೆ ಸಮಿತಿ ಖಂಡಿತವಾಗಿ ಇದರ ಬಗ್ಗೆ ಇನ್ನೊಮ್ಮೆ ಪರಾಮರ್ಶೆ ನಡೆಸಲಿದೆ ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ. ಬಿಸಿಸಿಐ ಕಾಯ್ದು ನೋಡುವ ನಿರ್ಧಾರಕ್ಕೆ ಮುಂದಾಗಿದ್ದು, ಅವರ ಫಿಟ್ನೆಸ್​​ ಮೇಲೆ ಎಲ್ಲವೂ ನಿಂತುಕೊಂಡಿದೆ ಎಂದಿದ್ದಾರೆ. ಸದ್ಯ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಆಡುತ್ತಿರುವ ರೋಹಿತ್ ಶರ್ಮಾ ಕಳೆದ ಕೆಲ ಪಂದ್ಯಗಳಿಂದ ಕಣಕ್ಕಿಳಿದಿಲ್ಲ. ಹೀಗಾಗಿ ತಂಡವನ್ನ ಪೊಲಾರ್ಡ್ ಮುನ್ನಡೆಸುತ್ತಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದ ವೇಳೆಗೆ ರೋಹಿತ್ ಶರ್ಮಾ ಫಿಟ್​ ಆಗಲಿ ಎಂಬುದು ನಮ್ಮ ಆಶಯ. ಒಂದು ವೇಳೆ, ಅವರು ಸಂಪೂರ್ಣವಾಗಿ ಫಿಟ್ ಆದ್ರೆ ಖಂಡಿತವಾಗಿ ತಂಡ ಸೇರಿಕೊಳ್ಳಲಿದ್ದಾರೆ ಎಂದಿದ್ದಾರೆ. ರೋಹಿತ್ ಶರ್ಮಾ ಹಾಗೂ ಇಶಾಂತ್​ ಶರ್ಮಾ ಅವರ ಫಿಟ್ನೆಸ್​ ಬಗ್ಗೆ ನಾವು ನಿಗಾ ಇರಿಸಿದ್ದೇವೆ ಎಂದಿರುವ ಗಂಗೂಲಿ, ಆಸ್ಟ್ರೇಲಿಯಾದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.