ನವದೆಹಲಿ : ಉತ್ತಮ ನಾಯಕನಾದವನು ತಂಡದ ಆಟಗಾರರ ಆಲೋಚನೆಗೆ ಹೊಂದಿಕೊಳ್ಳಬೇಕು ಎಂದು ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಹೇಳಿದ್ದಾರೆ. 2003ರ ನಾಟ್ವೆಸ್ಟ್ ಫೈನಲ್ ವೇಳೆ ಸೆಹ್ವಾಗ್ರಿಂದ ಕಲಿತ ನಾಯಕತ್ವದ ಪಾಠವನ್ನು ದಾದಾ ನೆನಪು ಮಾಡಿಕೊಂಡಿದ್ದಾರೆ.
"ನಾವು ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 325ರನ್ಗಳನ್ನು ಚೇಸ್ ಮಾಡುತ್ತಿದ್ದೆವು. ಮೈದಾನಕ್ಕೆ ಬಂದಾಗ ನಾನು ತುಂಬಾ ಬೇಸರದಲ್ಲಿದ್ದೆ. ಆದರೆ, ಸೆಹ್ವಾಗ್ ನಾವು ಗೆಲ್ಲುತ್ತೇವೆ ಎಂದರು. ನಾವು ಉತ್ತಮ ಆರಂಭ ಪಡೆದೆವು. (12 ಓವರ್ಗಳಲ್ಲಿ 82). ಆ ಸಂದರ್ಭದಲ್ಲಿ ನಾನು ಈವರೆಗೆ ಹೊಸ ಚೆಂಡಿನಲ್ಲಿ ಆಡಿದ ಬೌಲರ್ಗಳನ್ನು ನೋಡಿದ್ದೇವೆ. ಸಿಂಗಲ್ ಕಡೆ ಗಮನ ಕೊಡು, ವಿಕೆಟ್ ಕಳೆದುಕೊಳ್ಳುವುದು ಬೇಡ ಎಂದು ಸೆಹ್ವಾಗ್‌ಗೆ ಹೇಳಿದೆ"
"ಆ ಸಂದರ್ಭದಲ್ಲಿ ರೋನಿ ಇರಾನಿ ತಮ್ಮ ಮೊದಲ ಓವರ್ ಎಸೆಯಲು ಬಂದರು. ಸೆಹ್ವಾಗ್ ಮೊದಲ ಎಸೆತ ಬೌಂಡರಿಗಟ್ಟಿದರು. ತಕ್ಷಣ ನಾನು ಅವರ ಬಳಿ ಬಂದು ಒಂದು ಬೌಂಡರಿ ಬಂದಿದೆ. ಈಗ ಸಿಂಗಲ್ ತೆಗೆದಿಕೋ ಎಂದೆ. ಆದರೆ, ಆತ ನನ್ನ ಮಾತನ್ನು ಕೇಳಲಿಲ್ಲ. ಎರಡನೇ ಎಸೆತವನ್ನು ಬೌಂಡರಿ ಬಾರಿಸಿದ, ಮತ್ತೆ ಮೂರನೇ ಎಸೆತವನ್ನೂ ಕೂಡ ಬೌಂಡರಿ ಬಾರಿಸಿದ. ನನಗೆ ತುಂಬಾ ಕೋಪ ಬಂತು. ಆದರೆ, ಸೆಹ್ವಾಗ್ 5ನೇ ಎಸೆತವನ್ನೂ ಕೂಡ ಬೌಂಡರಿ ಬಾರಿಸಿದರು" ಎಂದು ಗಂಗೂಲಿ ಯುಟ್ಯೂಬ್ ಸಂಭಾಷಣೆ ವೇಳೆ ಹೇಳಿದ್ದಾರೆ.
ಸೆಹ್ವಾಗ್ ಅವರಂತಹ ನೈಸರ್ಗಿಕ ಆಟವನ್ನು ತಡೆಯುವುದು ಅರ್ಥಹೀನ ಎಂದು ನನಗೆ ಅಂದು ಅರಿವಾಯಿತು ಎಂದು ದಾದಾ ಹೇಳಿಕೊಂಡಿದ್ದಾರೆ. "ಅವರ(ಸೆಹ್ವಾಗ್) ನೈಸರ್ಗಿಕ ಶೈಲಿಯೇ ಆಕ್ರಮಣಕಾರಿ ಆಗಿರುವುದರಿಂದ ಅವರನ್ನು ತಡೆಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ನಾನು ಅಂದು ಅರಿತುಕೊಂಡೆ. ಅಲ್ಲದೆ ನಾಯಕನಾದವನು ಆಟಗಾರನ ಆಲೋಚನೆಗೆ ಹೊಂದಿಕೊಳ್ಳಬೇಕು ಎಂಬ ಪಾಠವನ್ನು ಸೆಹ್ವಾಗ್ರಿಂದ ಕಲಿತೆ" ಎಂದು ಹೇಳಿದ್ದಾರೆ
ಇದನ್ನು ಓದಿ:ರಿಷಭ್ ಪಂತ್ ಒಬ್ಬ ಪರಿಪೂರ್ಣ ಮ್ಯಾಚ್ ವಿನ್ನರ್ : ಸೌರವ್ ಗಂಗೂಲಿ