ನವದೆಹಲಿ: ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಕ್ರಿಕೆಟರ್ ವೃತ್ತಿಯಿಂದ ರಾಜಕಾರಣಿಯಾಗಿಯಾಗಿ ಬದಲಾಗಿರುವ ಗಂಭೀರ್ ಕೋಟ್ಯಂತರ ಭಾರತೀಯರ ಕನಸಾಗಿರುವ ರಾಮ ಮಂದಿರಕ್ಕೆ ತಮ್ಮ ಹಾಗೂ ತಮ್ಮ ಕುಟುಂಬದ ಪರವಾಗಿ ಈ ದೇಣಿಗೆ ನೀಡಿರುವುದಾಗಿ ತಿಳಿಸಿದ್ದಾರೆ.
"ಅದ್ಭುತವಾದ ರಾಮ ದೇವಾಲಯ ಎಲ್ಲಾ ಭಾರತೀಯರ ಕನಸಾಗಿದೆ. ದೀರ್ಘಕಾಲದಿಂದ ಇದ್ದ ಸಮಸ್ಯೆ ಅಂತಿಮವಾಗಿ ಬಗೆಹರಿದಿದೆ. ಇದು ದೇಶದಲ್ಲಿ ಏಕತೆ ಮತ್ತು ಶಾಂತಿಗೆ ದಾರಿ ಮಾಡಿಕೊಡಲಿದೆ. ಈ ಪ್ರಯತ್ನಕ್ಕೆ ನನ್ನ ಮತ್ತು ನನ್ನ ಕುಟುಂಬದಿಂದ ಒಂದು ಸಣ್ಣ ಕೊಡುಗೆಯಾಗಿ ಈ ಹಣ ನೀಡುತ್ತಿದ್ದೇನೆ" ಎಂದು ಪೂರ್ವ ದೆಹಲಿ ಸಂಸದರಾಗಿರುವ ಗಂಭೀರ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅಲ್ಲದೆ ಈ ಮಹತ್ವವಾದ ಕಾರ್ಯಕ್ಕೆ ದೆಹಲಿ ಬಿಜೆಪಿ ಘಟಕ ನಗರದಾದ್ಯಂತ ಕೂಪನ್‌ಗಳ ಮೂಲಕ ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
10, 100 ಮತ್ತು 1000 ರೂ.ಗಳ ಕೂಪನ್‌ಗಳನ್ನು ಸಾಧ್ಯವಾದಷ್ಟು ಮನೆಗಳಿಂದ ದೇಣಿಗೆ ಸಂಗ್ರಹಿಸಲು ಬಳಸಲಾಗುತ್ತದೆ" ಎಂದು ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಲ್ಜೀತ್ ಚಹಲ್ ಹೇಳಿದ್ದಾರೆ.
1000ಕ್ಕಿಂತ ಹೆಚ್ಚಿನ ದೇಣಿಗೆ ನೀಡುವವರು ಚೆಕ್ಗಳ ಮೂಲಕ ನೀಡಬೇಕಾಗುತ್ತದೆ. ಶ್ರೀರಾಮ ದೇವಾಲಯದೊಂದಿಗೆ ಆಳವಾದ ಭಕ್ತಿ ಹೊಂದಿರುವವರು ಒಂದು ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನೀಡಲು ಸಿದ್ಧರಿರುವ ಅನೇಕ ಜನರಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಧೋನಿ ಜೊತೆ ನನ್ನನ್ನು ಹೋಲಿಸಬೇಡಿ: ನನ್ನದೇ ಹೆಸರು ಮಾಡಲು ಬಯಸಿದ್ದೇನೆ ಎಂದ ಪಂತ್