ಹೈದರಾಬಾದ್: ಜನಾಂಗೀಯವಾಗಿ ನಿಂದಿಸಿದ ತಪ್ಪಿತಸ್ಥರನ್ನು ಕೇವಲ ಮೈದಾನದಿಂದ ಹೊರ ಹಾಕಿದರೆ ಸಾಲದು, ಇಂತಹ ಕೃತ್ಯಕ್ಕೆ ಕಠಿಣ ಕಾನೂನುಗಳನ್ನು ಜಾರಿ ಮಾಡಿ ಶಾಶ್ವತ ಪರಿಹಾರ ಒದಗಿಸಿಕೊಡಬೇಕು ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.
ಭಾರತೀಯ ಕ್ರಿಕೆಟಿಗರಾದ ಸಿರಾಜ್ ಮತ್ತು ಬುಮ್ರಾರನ್ನು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಜನಾಂಗೀಯವಾಗಿ ನಿಂದಿಸಿದ ಪ್ರೇಕ್ಷಕರನ್ನು ಮೈದಾನದಿಂದ ಹೊರ ಕಳುಹಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ.
"ಇದು ಸ್ವೀಕಾರಾರ್ಹವಲ್ಲ. ಜನಾಂಗೀಯ ನಿಂದನೆ ಮೈದಾನದಲ್ಲಿರಬಾರದು ಮತ್ತು ಯಾರೊಬ್ಬರನ್ನು ಜನಾಂಗೀಯವಾಗಿ ನಿಂದಿಸುವುದು ಸ್ವೀಕಾರಕ್ಕೆ ಅರ್ಹವಲ್ಲ. ಈ ಘಟನೆಗಳು ಮುಂದೆ ಎಂದು ಮರುಕಳಿಸಬಾರದೆಂದರೆ ಕಠಿಣ ಕಾನೂನುಗಳು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಗಂಭೀರ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನಿಂದಿಸಿದವರನ್ನು ಕೇವಲ ಸ್ಟೇಡಿಯಂನಿಂದ ಹೊರ ಹಾಕುವುದು ಪರಿಹಾರವಲ್ಲ. ಈಗಾಗಲೇ ಹಿಂದೆಯೂ ಇಂತಹ ಘಟನೆ ನಡೆದಿದೆ. ನಿಮ್ಮ ಬಳಿ ಶಾಶ್ವತ ಪರಿಹಾರವಿಲ್ಲದಿದ್ದರೆ ಭವಿಷ್ಯದಲ್ಲಿ ಮತ್ತೆ ಮರುಕಳಿಸಬಹುದು. ಹಾಗಾಗಿ ಕಠಿಣ ಕಾನೂನು ಅಗತ್ಯವಿದೆ. ಅದೇ ರೀತಿ ಶಿಕ್ಷೆ ಕೂಡ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.
ಇದನ್ನು ಓದಿ:ಇದು ಗೂಂಡಾ ವರ್ತನೆಯ ಪರಮಾವಧಿ: ಜನಾಂಗೀಯ ನಿಂದನೆ ವಿರುದ್ಧ ಕೊಹ್ಲಿ ಕೆಂಡ