ETV Bharat / sports

ವಿಶ್ವಕಪ್​ ಫೈನಲ್​​ನಲ್ಲಿ ಶತಕ ವಂಚಿತನಾಗಲು ಕಾರಣ ಧೋನಿ... ಎಂಟು ವರ್ಷದ ನಂತ್ರ ಗಂಭೀರ್​ ಬಿಚ್ಚಿಟ್ಟ ಸತ್ಯ! - ಗೌತಮ್​ ಗಂಭೀರ್​

2011ರ ವಿಶ್ವಕಪ್​ ಫೈನಲ್​ನಲ್ಲಿ ಗೌತಮ್​ ಗಂಭೀರ್​ ಶತಕವಂಚಿತನಾಗಲು ಯಾರು ಕಾರಣ ಎಂಬ ಮಹತ್ವದ ಅಂಶ ಇದೀಗ ಹೊರಹಾಕಿದ್ದಾರೆ.

ಗಂಭೀರ್​-ಎಂಎಸ್​ ಧೋನಿ
author img

By

Published : Nov 19, 2019, 3:38 AM IST

ಕೋಲ್ಕತ್ತಾ: 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್​ ಫೈನಲ್​​ನಲ್ಲಿ ಸಿಂಹಳೀಯರ ವಿರುದ್ಧ ಧೋನಿ ನೇತೃತ್ವದ ಟೀಂ ಇಂಡಿಯಾ 6ವಿಕೆಟ್​ಗಳ ಭರ್ಜರಿ ಗೆಲುವು ದಾಖಲು ಮಾಡಿ, ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್​ ಟ್ರೋಫಿಗೆ ಟೀಂ ಇಂಡಿಯಾ ಮುತ್ತಿಕ್ಕಿತ್ತು.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಈ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ವಿಶ್ವಕಪ್​ ಗೆದ್ದು ಈಗಾಗಲೇ ಬರೋಬ್ಬರಿ 8 ವರ್ಷಗಳ ಕಾಲ ಮುಗಿದು ಹೋಗಿವೆ. ಇದೀಗ ಅಂದಿನ ಆರಂಭಿಕ ಆಟಗಾರ ಗೌತಮ್​ ಗಂಭೀರ್ ತಾವು ಶತಕ ವಚಿತರಾಗಲು ಏನು ಕಾರಣ ಎಂಬ​ ಹೊಸ ರಹಸ್ಯ ಹೊರಹಾಕಿದ್ದಾರೆ. ಫೈನಲ್​​ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭದಲ್ಲೇ ವಿರೇಂದ್ರ ಸೆಹ್ವಾಗ್​ ಹಾಗೂ ಸಚಿನ್​ ತೆಂಡೂಲ್ಕರ್​ ವಿಕೆಟ್​ ಕಳೆದುಕೊಂಡ್ರು, ಆರಂಭಿಕರಾಗಿ ಕಣಕ್ಕಿಳಿದಿದ್ದ ಗೌತಮ್​ ಗಂಭೀರ್​​ 122 ಎಸೆತಗಳಲ್ಲಿ 97ರನ್​ಗಳಿಕೆ ಮಾಡಿ ಟೀಂ ಇಂಡಿಯಾ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ಆದರೆ ಇದೀಗ ತಾವು ಶತಕ ವಂಚಿತರಾಗಲು ಏನು ಕಾರಣ ಎಂಬ ರಹಸ್ಯ ಬಿಚ್ಚಿಟ್ಟಿದ್ದಾರೆ.

ಶ್ರೀಲಂಕಾ ನೀಡಿದ್ದ 275ರನ್​ ಟಾರ್ಗೆಟ್​ ಬೆನ್ನತ್ತಿದ್ದ ಗಂಭೀರ್​ಗೆ ತಾವು ಮೈದಾನದಲ್ಲಿ ಎಷ್ಟು ರನ್​ಗಳಿಕೆ ಮಾಡಿದ್ದೇನೆ ಎಂಬುದರ ಬಗ್ಗೆ ಅರಿವೇ ಇರಲಿಲ್ವಂತೆ. ನಾನು 97ರನ್​ಗಳಿಕೆ ಮಾಡಿದ್ದಾಗ ನನ್ನ ಬಳಿ ಬಂದ ಧೋನಿ ನೀನು ಈಗ 97ರನ್​ಗಳಿಕೆ ಮಾಡಿದ್ದು, ಇನ್ನು ಮೂರು ರನ್​​ ಹೊಡೆದ್ರೆ ಶತಕಗಳಿಸುತ್ತೀಯಾ ಎಂದಿದ್ದರು. ಆ ವೇಳೆ ನನಗೆ ವೈಯಕ್ತಿಕ ರನ್​ಗಳಿಕೆ ಮಾಡುವುದರ ಮೇಲೆ ಹೆಚ್ಚು ಗಮನ ಹೋಯ್ತು. ಇದೇ ಕಾರಣಕ್ಕಾಗಿ ನಾನು ಒತ್ತಡಕ್ಕೊಳಗಾಗಿ ಅದೇ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿದೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ಧೋನಿ ನನಗೆ ಆ ವೇಳೆ ನೆನಪು ಮಾಡದೇ ಹೋಗಿದ್ದರೆ ನಾನು ಶತಕ ಸಿಡಿಸುತ್ತಿದ್ದೆ. ಜತೆಗೆ ನನ್ನ ಕ್ರಿಕೆಟ್​ ಜೀವನ ಮತ್ತಷ್ಟು ಸುಂದರವಾಗಿ ಇರುತ್ತಿತ್ತು ಎಂದು ನೆನಪು ಮಾಡಿಕೊಂಡಿರುವ ಗಂಭೀರ್​, ಸುಮಾರು 8 ವರ್ಷಗಳ ಬಳಿಕ ಈ ರೀತಿಯ ಹೇಳಿಕೆ ನೀಡಿದ್ದಾರೆ.

Intro:Body:

ವಿಶ್ವಕಪ್​ ಫೈನಲ್​​ನಲ್ಲಿ ಶತಕ ವಂಚಿತನಾಗಲು ಕಾರಣ ಧೋನಿ... ಎಂಟು ವರ್ಷದ ನಂತ್ರ ಗಂಭೀರ್​ ಬಿಚ್ಚಿಟ್ಟ ಸತ್ಯ! 

ಕೋಲ್ಕತ್ತಾ: 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್​ ಫೈನಲ್​​ನಲ್ಲಿ ಸಿಂಹಳೀಯರ ವಿರುದ್ಧ ಧೋನಿ ನೇತೃತ್ವದ ಟೀಂ ಇಂಡಿಯಾ 6ವಿಕೆಟ್​ಗಳ ಭರ್ಜರಿ ಗೆಲುವು ದಾಖಲು ಮಾಡಿ, ಬರೋಬ್ಬರಿ 28  ವರ್ಷಗಳ ಬಳಿಕ ವಿಶ್ವಕಪ್​ ಟ್ರೋಫಿಗೆ ಟೀಂ ಇಂಡಿಯಾ ಮುತ್ತಿಕ್ಕಿತ್ತು. 

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಈ ಫೈನಲ್​ ಪಂದ್ಯದಲ್ಲಿ ಟೀಂ ಇಂಡಿಯಾ ವಿಶ್ವಕಪ್​ ಗೆದ್ದು ಈಗಾಗಲೇ ಬರೋಬ್ಬರಿ 8 ವರ್ಷಗಳ ಕಾಲ ಮುಗಿದು ಹೋಗಿವೆ. ಇದೀಗ ಅಂದಿನ ಆರಂಭಿಕ ಆಟಗಾರ ಗೌತಮ್​ ಗಂಭೀರ್​ ಹೊಸ ರಹಸ್ಯ ಹೊರಹಾಕಿದ್ದಾರೆ. ಫೈನಲ್​​ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭದಲ್ಲೇ ವಿರೇಂದ್ರ ಸೆಹ್ವಾಗ್​ ಹಾಗೂ ಸಚಿನ್​ ತೆಂಡೂಲ್ಕರ್​ ವಿಕೆಟ್​ ಕಳೆದುಕೊಂಡ್ರು, ಆರಂಭಿಕರಾಗಿ ಕಣಕ್ಕಿಳಿದಿದ್ದ ಗೌತಮ್​ ಗಂಭೀರ್​​ 122 ಎಸೆತಗಳಲ್ಲಿ 97ರನ್​ಗಳಿಕೆ ಮಾಡಿ ಟೀಂ ಇಂಡಿಯಾ ಗೆಲುವಿನಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ಆದರೆ ಇದೀಗ ತಾವು ಶತಕ ವಂಚಿತರಾಗಲು ಏನು ಕಾರಣ ಎಂಬ ರಹಸ್ಯ ಬಿಚ್ಚಿಟ್ಟಿದ್ದಾರೆ.

ಶ್ರೀಲಂಕಾ ನೀಡಿದ್ದ 275ರನ್​ ಟಾರ್ಗೆಟ್​ ಬೆನ್ನತ್ತಿದ್ದ ಗಂಭೀರ್​ಗೆ ತಾವು ಮೈದಾನದಲ್ಲಿ ಎಷ್ಟು ರನ್​ಗಳಿಕೆ ಮಾಡಿದ್ದೇನೆ ಎಂಬುದರ ಬಗ್ಗೆ ಅರಿವೇ ಇರಲಿಲ್ವಂತೆ. ನಾನು 97ರನ್​ಗಳಿಕೆ ಮಾಡಿದ್ದಾಗ ನನ್ನ ಬಳಿ ಬಂದ ಧೋನಿ ನೀನು ಈಗ 97ರನ್​ಗಳಿಕೆ ಮಾಡಿದ್ದು, ಇನ್ನು ಮೂರು ರನ್​​ ಹೊಡೆದ್ರೆ ಶತಕಗಳಿಸುತ್ತೀಯಾ ಎಂದಿದ್ದರು. ಆ ವೇಳೆ ನನಗೆ ವೈಯಕ್ತಿಕ ರನ್​ಗಳಿಕೆ ಮಾಡುವುದರ ಮೇಲೆ ಹೆಚ್ಚು ಗಮನ ಹೋಯ್ತು. ಇದೇ ಕಾರಣಕ್ಕಾಗಿ ನಾನು ಒತ್ತಡಕ್ಕೊಳಗಾಗಿ ಅದೇ ಓವರ್​​ನಲ್ಲಿ ವಿಕೆಟ್​ ಒಪ್ಪಿಸಿದೆ ಎಂದು ತಿಳಿಸಿದ್ದಾರೆ. 

ಒಂದು ವೇಳೆ ಧೋನಿ ನನಗೆ ಆ ವೇಳೆ ನೆನಪು ಮಾಡದೇ ಹೋಗಿದ್ದರೆ ನಾನು ಶತಕ ಸಿಡಿಸುತ್ತಿದ್ದೆ. ಜತೆಗೆ ನನ್ನ ಕ್ರಿಕೆಟ್​ ಜೀವನ ಮತ್ತಷ್ಟು ಸುಂದರವಾಗಿ ಇರುತ್ತಿತ್ತು ಎಂದು ನೆನಪು ಮಾಡಿಕೊಂಡಿರುವ ಗಂಭೀರ್​, ಸುಮಾರು 8 ವರ್ಷಗಳ ಬಳಿಕ ಈ ರೀತಿಯ ಹೇಳಿಕೆ ನೀಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.