ETV Bharat / sports

ಅಪರಿಚಿತರಾಗಿ ಬಂದು ಐಪಿಎಲ್​ನಲ್ಲಿ ಪ್ರಜ್ವಲಿಸುತ್ತಿರುವ ಯುವ ಭಾರತೀಯ ಕ್ರಿಕೆಟಿಗರು

ರವಿ ಬಿಷ್ಣೋಯ್, ರಾಹುಲ್ ತೆವಾಟಿಯಾ, ದೇವದತ್ ಪಡಿಕ್ಕಲ್, ಟಿ ನಟರಾಜನ್​, ಕಾರ್ತಿಕ್ ತ್ಯಾಗಿ ಮುಂತಾದ ಯುವ ಕ್ರಿಕೆಟಿಗರು ಐಪಿಎಲ್​ನಲ್ಲಿ ತಮ್ಮ ಪ್ರತಿಭೆ ಮತ್ತು ಕೌಶಲ್ಯದಿಂದ ಕ್ರಿಕೆಟ್​ ಪಂಡಿತರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.

author img

By

Published : Oct 22, 2020, 7:30 PM IST

Unknown Indian names make a mark this IPL
ಐಪಿಎಲ್ 2020 ಯುವ ಪ್ರತಿಭೆಗಳು

ಮುಂಬೈ: ವಿಶ್ವದಲ್ಲೇ ಅತ್ಯುತ್ತಮ ಟಿ-20 ಲೀಗ್ ಆಗಿರುವ ಐಪಿಎಲ್​ ಹಿಂದಿನ ಆವೃತ್ತಿಗಳಂತೆ ಭಾರತೀಯ ಕ್ರಿಕೆಟ್​ಗೆ ಯುವ ಪ್ರತಿಭೆಗಳನ್ನು ಕೊಡುಗೆಯಾಗಿ ನೀಡಿದೆ.

ನಗದು ಸಮೃದ್ಧ ಲೀಗ್​ ನೀಡಿದ ಅವಕಾಶಗಳನ್ನು ಯುವ ಕ್ರಿಕೆಟಿಗರು ಎಷ್ಟರ ಮಟ್ಟಿಗೆ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆಂದರೆ 2 ತಿಂಗಳ ಹಿಂದೆ ಅವರು ಯಾರೆಂದು ತಿಳಿದಿರಲಿಲ್ಲ, ಇಂದು ಅವರ ಹೆಸರು ವಿಶ್ವ ಕ್ರಿಕೆಟ್​ನಲ್ಲಿ ರಾರಾಜಿಸುತ್ತಿದೆ. ಅದಕ್ಕೆ ಐಪಿಎಲ್​ ಒಂದು ಮೆಟ್ಟಿಲಾಗಿ ಕಾರ್ಯನಿರ್ವಹಿಸುವ ಜೊತೆಗೆ ಅಂತಹ ಗುಂಪುಗಳನ್ನು ದೊಡ್ಡ ಸಂಖ್ಯೆಯನ್ನಾಗಿಸಲು ಸಹಕರಿಸುತ್ತಿದೆ ಎಂದರೆ ತಪ್ಪಾಗಲಾರದು.

ರವಿ ಬಿಷ್ಣೋಯ್, ರಾಹುಲ್ ತೆವಾಟಿಯಾ, ದೇವದತ್ ಪಡಿಕ್ಕಲ್, ಟಿ ನಟರಾಜನ್​, ಕಾರ್ತಿಕ್ ತ್ಯಾಗಿ ಮುಂತಾದ ಯುವ ಕ್ರಿಕೆಟಿಗರು ಐಪಿಎಲ್​ನಲ್ಲಿ ತಮ್ಮ ಪ್ರತಿಭೆ ಮತ್ತು ಕೌಶಲ್ಯದಿಂದ ಕ್ರಿಕೆಟ್​ ಪಂಡಿತರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.

ರವಿ ಬಿಷ್ಣೋಯ್

ರವಿ ಬಿಷ್ಣೋಯ್
ರವಿ ಬಿಷ್ಣೋಯ್

ಲೆಗ್ ಸ್ಪಿನ್ನರ್ ಆಗಿರುವ ರವಿ ಬಿಷ್ಣೋಯ್ 2019ರ ಅಂಡರ್​ 19 ವಿಶ್ವಕಪ್​ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದರು. ಅವರನ್ನು ಕಿಂಗ್ಸ್​ ಇಲೆವೆನ್ ಪಂಜಾಬ್​ ಕಳೆದ ಐಪಿಎಲ್​ನಲ್ಲಿ ಖರೀದಿಸಿತ್ತು. ಈಗಾಗಲೆ 13ನೇ ಆವೃತ್ತಿಯ ಐಪಿಎಲ್​ನಲ್ಲಿ 10 ಪಂದ್ಯಗಳಿಂದ 9 ವಿಕೆಟ್ ಪಡೆದಿರುವ ಅವರು ಪಂಜಾಬ್​ನ ಟಾಪ್​ ಬೌಲರ್​ಗಳಲ್ಲಿ ಒಬ್ಬರಾಗಿದ್ದಾರೆ.

ಬಿಷ್ಣೋಯ್ ಈ ಋತುವಿನಲ್ಲಿ ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೋವ್, ರಿಷಭ್ ಪಂತ್, ಇಯಾನ್ ಮಾರ್ಗನ್, ಸೇರಿದಂತೆ ಕೆಲವು ಟಾಪ್ ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ. ಕೋಚ್​ ಅನಿಲ್ ಕುಂಬ್ಳೆ ಬೌಲಿಂಗ್ ಶೈಲಿಯನ್ನು ಹೊಂದಿರುವ ಫ್ಲಿಪ್ಪರ್ಸ್, ಟಾಪ್​ ಸ್ಪಿನ್ನರ್ಸ್ ಮತ್ತು ಪರಿಣಾಮಕಾರಿ ಗೂಗ್ಲಿಗಳನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ.

ದೇವದತ್ ಪಡಿಕ್ಕಲ್

ದೇವದತ್ ಪಡಿಕ್ಕಲ್
ದೇವದತ್ ಪಡಿಕ್ಕಲ್

ಕರ್ನಾಟಕದ ದೇವದತ್ ಪಡಿಕ್ಕಲ್ ಕಳೆದ ವರ್ಷವೇ ಆರ್​ಸಿಬಿಯಲ್ಲಿ ಅವಕಾಶ ಪಡೆದಿದ್ದರೂ ಅವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ, 2019ರ ದೇಶಿ ಋತುವಿನಲ್ಲಿ ರನ್​ಗಳ ಹೊಳೆಯನ್ನೇ ಹರಿಸಿದ ಯುವ ಕ್ರಿಕೆಟಿಗ 13ನೇ ಆವೃತ್ತಿಯಲ್ಲಿ ಕೊಹ್ಲಿ, ಎಬಿಡಿಗೆ ಸರಿ ಸಮಾನವಾಗಿ ರನ್​ಗಳಿಸುತ್ತಿದ್ದಾರೆ. ಅವರು ಈಗಾಗಲೆ 10 ಪಂದ್ಯಗಳಲ್ಲಿ 3 ಅರ್ಧಶತಕ ಸಹಿತ 321 ರನ್​ಗಳಿಸುವ ಮೂಲಕ 20 ವರ್ಷದ ಆಟಗಾರ ತಮ್ಮ ಪದಾರ್ಪಣೆ ಆವೃತ್ತಿಯನ್ನ ಸ್ಮರಣೀಯವನ್ನಾಗಿಸಿಕೊಳ್ಳುತ್ತಿದ್ದಾರೆ.

ರಾಹುಲ್ ತೆವಾಟಿಯಾ

ರಾಹುಲ್ ತೆವಾಟಿಯಾ
ರಾಹುಲ್ ತೆವಾಟಿಯಾ

ಐಪಿಎಲ್​ನಲ್ಲಿ ದಿಢೀರ್ ಪ್ರಸಿದ್ಧಿಯಾದ ಆಟಗಾರ ಎಂದರೆ ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ. ಈ ಹಿಂದಿನ 3 ಆವೃತ್ತಿಗಳಲ್ಲಿ ಆಡಿದ್ದರೂ ಸಹ ಅವರ ಹೆಸರು ಯಾರಿಗೂ ತಿಳಿದಿರಲಿಲ್ಲ. ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶೆಲ್ಡಾನ್ ಕಾಟ್ರೆಲ್​ಗೆ ಒಂದೇ ಓವರ್​ನಲ್ಲಿ 5 ಸಿಕ್ಸರ್​ ಸಿಡಿಸಿದ ನಂತರ ಅವರ ಹೆಸರು ಕ್ರಿಕೆಟ್​ ಜಗತ್ತಿನಲ್ಲಿ ರಾತ್ರೋ ರಾತ್ರಿ ಸ್ಟಾರ್ ಆದರು. ಜೊತೆಗೆ 223 ರನ್​​ಗಳನ್ನ ಬೆನ್ನಟ್ಟಿ ದಾಖಲೆಯ ಜಯ ಸಾಧಿಸಲು ನೆರವಾಗಿದ್ದರು. ಈ ತೆವಾಟಿಯಾ ಕೂಡ ರಾಜಸ್ಥಾನ್ ತಂಡದ ಮೌಲ್ಯಯುತ ಆಟಗಾರನಾಗಿ ತಮ್ಮ ಆಲ್​ರೌಂಡರ್​ ಪ್ರದರ್ಶನವನ್ನು ಎಲ್ಲಾ ಪಂದ್ಯಗಳಲ್ಲೂ ತೋರುತ್ತಾ ಬಂದಿದ್ದಾರೆ.

ಟಿ.ನಟರಾಜನ್

ರಾಹುಲ್ ತೆವಾಟಿಯಾ
ರಾಹುಲ್ ತೆವಾಟಿಯಾ

ತಮಿಳುನಾಡಿನ ಸಣ್ಣ ಹಳ್ಳಿಯ 29 ವರ್ಷದ ಟಿ ನಟರಾಜನ್ ಈ ಋತುವಿನಲ್ಲಿ ಸನ್​ರೈಸರ್ಸ್​ನ ಟಾಪ್ ಬೌಲರ್ ಆಗಿದ್ದಾರೆ. ಭುವನೇಶ್ವರ್ ಕುಮಾರ್​ ಅವರ ಗೈರು ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಅವರು 8.46 ಎಕಾನಮಿಯಲ್ಲಿ ಟೂರ್ನಿಯಲ್ಲಿ 11 ವಿಕೆಟ್ ಪಡೆದಿದ್ದಾರೆ. ವಿಶೇಷವೆಂದರೆ ನಟರಾಜನ್ ಈ ಋತುವಿನಲ್ಲಿ ಅತಿ ಹೆಚ್ಚು ಯಾರ್ಕರ್​ ಮಾಡಿರುವ ಬೌಲರ್ ಆಗಿದ್ದು, ಆರ್ಚರ್, ಬುಮ್ರಾ ಅವರನ್ನೇ ಹಿಂದಿಕ್ಕಿದ್ದಾರೆ.

ಕಾರ್ತಿಕ್ ತ್ಯಾಗಿ

ರಾಜಸ್ಥಾನ್​ ರಾಯಲ್ಸ್ ತಂಡದಲ್ಲಿರುವ ಕಾರ್ತಿಕ್ ತ್ಯಾಗಿ ಕೂಡ ಈ ಬಾರಿ ಐಪಿಎಲ್​ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ತ್ಯಾಗಿ ಅಂಡರ್​ 19 ಪ್ರತಿಭೆಯಾಗಿದ್ದು, 2020ರ ವಿಶ್ವಕಪ್​ನಲ್ಲಿ 11 ವಿಕೆಟ್ ಪಡೆದು ಮಿಂಚಿದ್ದರು. ಈಗಾಗಲೆ ತಮ್ಮ ಪ್ರತಿಭೆಯಿಂದ ಬ್ರೆಟ್​ ಲೀ, ಇಶಾಂತ್ ಶರ್ಮಾರೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಅದರಲ್ಲೂ ವಿಂಡೀಸ್ ಲೆಜೆಂಡ್ ಇಯಾನ್ ಬಿಷಪ್ ಯುವ ಪೇಸರ್​ನ ಬೌಲಿಂಗ್ ಕೌಶಲ್ಯವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.