ETV Bharat / sports

ವಿಶ್ವಕಪ್‌ನಲ್ಲಿ ಫಿನಿಕ್ಸ್‌ ಪಕ್ಷಿಯಾಗುವುದೇ ಆಸೀಸ್‌... ಕಾಂಗರೂಗಳಿಗೆ ಹೊಸ ಮೇಷ್ಟ್ರು ನೇಮಕ

author img

By

Published : Feb 9, 2019, 5:16 PM IST

ತಮ್ಮ ನಾಯಕತ್ವದಲ್ಲೇ 2 ಸಾರಿ ವಿಶ್ವಕಪ್‌ ಗೆದ್ದುಕೊಟ್ಟಿದ್ದ ರಿಕಿ ಪಾಂಟಿಂಗ್‌, ಈ ಸಾರಿಯ ವರ್ಲ್ಡ್‌ ಕಪ್‌ಗೆ ಕಾಂಗ್ರೋ ತಂಡವನ್ನ ಕಟ್ಟೋದಕ್ಕಾಗಿ ಸಹಾಯಕ ಕೋಚ್​ ಆಗಿ ನೇಮಕಗೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡಕ್ಕೆ ಸಹಾಯಕ ಕೋಚ್​ ಆಗಿ ಪಾಂಟಿಂಗ್​

ಸಿಡ್ನಿ: ಇಂಗ್ಲೆಂಡ್​​ನಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್‌ಗೆ ಈಗಾಗಲೇ ಎಲ್ಲಾ ತಂಡಗಳು ಭರ್ಜರಿಯಾಗಿಯೇ ತಯಾರಿ ನಡೆಸುತ್ತಿವೆ. ಆದರೆ ನಾಲ್ಕು ಸಾರಿ ವಿಶ್ವಕಪ್​ ಕಪ್‌ ಗೆದ್ದ ಆಸ್ಟ್ರೇಲಿಯಾ ತಂಡ ಇನ್ನೂ ಹೇಳಿಕೊಳ್ಳುವಂತೆ ಸಿದ್ಧತೆ ನಡೆಸಿರಲಿಲ್ಲ. ಇದೀಗ ಆಸ್ಟ್ರೇಲಿಯಾ ತಂಡವನ್ನ ಮತ್ತೆ ಕಟ್ಟೋದಕ್ಕೆ ಮಾಜಿ ಕ್ರಿಕೆಟರ್‌ ರಿಕಿ ಪಾಂಟಿಂಗ್‌ ಬರ್ತಿದ್ದಾರೆ.

ತಮ್ಮ ನಾಯಕತ್ವದಲ್ಲೇ 2 ಸಾರಿ ವಿಶ್ವಕಪ್‌ ಗೆದ್ದುಕೊಟ್ಟಿದ್ದ ರಿಕಿ ಪಾಂಟಿಂಗ್‌, ಈ ಸಾರಿಯ ವರ್ಲ್ಡ್‌ ಕಪ್‌ಗೆ ಆಸೀಸ್​ ತಂಡವನ್ನ ಕಟ್ಟೋದಕ್ಕಾಗಿ ಸಹಾಯಕ ಕೋಚ್​ ಆಗಿ ನೇಮಕಗೊಂಡಿದ್ದಾರೆ. ಬಾಲ್ ಟ್ಯಾಪರಿಂಗ್‌ನಿಂದ ಸಭ್ಯರ ಆಟಕ್ಕೆ ಕಳಂಕ ತಂದಿದ್ದ ಆಸ್ಟ್ರೇಲಿಯಾ ಪ್ಲೇಯರ್ಸ್‌ ದೇಶದ ಮಾನ ಹರಾಜು ಹಾಕಿದ್ದರು. ಕ್ರಿಕೆಟ್‌ ಪ್ರೇಮಿಗಳಿಂದ ನಿಂದನೆಗೊಳಗಾಗಿದ್ದರು. ಇದರ ಮಧ್ಯೆಯೇ ಟೀಂ ಇಂಡಿಯಾ ವಿರುದ್ಧ ತವರು ನೆಲದಲ್ಲೇ ಸೋತು ಸುಣ್ಣವಾಗಿದ್ದಲ್ಲದೇ, ಟೀಕಾಕಾರರ ಬಾಯಿಗೆ ಆಹಾರವಾಗಿದ್ದರು. ಆಸ್ಟ್ರೇಲಿಯಾ ತಂಡವನ್ನ ಹೇಗಾದರೂ ಹಳಿಗೆ ಮರಳಿಸುವ ದೊಡ್ಡ ಹೊಣೆಗಾರಿಕೆ ಪಾಂಟಿಂಗ್‌ ಹೆಗಲೇರಿದೆ. ಬರುವ ವಿಶ್ವಕಪ್​ ವೇಳೆೆಯೊಳಗೇ ಎಲ್ಲ ವೈಫಲ್ಯಗಳನ್ನ ಒವರ್‌ಕಮ್ ಮಾಡಿ ತಂಡ ಒಳ್ಳೇ ಫಾರ್ಮ್‌ನಲ್ಲಿ ರೂಪಗೊಳ್ಬೇಕಿದ್ರೇ, ಪಾಂಟಿಂಗ್‌ ಆಯ್ಕೆಯೇ ಸರಿಯಾದದು ಅನ್ನೋ ತೀರ್ಮನಾಕ್ಕೆ ಬಂದಿದೆ ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ.

ಬ್ಯಾಟಿಂಗ್​ ಸಾಮರ್ಥ್ಯವನ್ನಷ್ಟೇ ಅಲ್ಲ, ತಂಡ ವಿಶ್ವಕಪ್‌ ಗೆಲ್ಬೇಕಾದ್ರೇ ಏನೆಲ್ಲ ಇರಬೇಕೆಂಬುದು ಪಾಂಟಿಂಗ್‌ಗೆ ಚೆನ್ನಾಗಿಯೇ ಗೊತ್ತಿದೆ. ರಿಕಿ ಟ್ರಿಕ್ಸ್‌ ವರ್ಕೌಟ್‌ ಮಾಡಿದ್ರೇ ಕಾಂಗ್ರೋಗಳಂತೂ ಒಳ್ಳೇ ಪೈಪೋಟಿ ನೀಡೋದರಲ್ಲಿ ಹಿಂದೆ ಬೀಳಲ್ಲ. ಮೇ 30ರಿಂದ ಇಂಗ್ಲೆಂಡ್​ನಲ್ಲಿ ವಿಶ್ವಕಪ್​ ಟೂರ್ನಿ ನಡೆಯಲಿದೆ. ಇದಕ್ಕಾಗಿ ಕಾಂಗ್ರೋಗಳ ಮುಖ್ಯ ಕೋಚ್​ ಜಸ್ಟೀನ್​ ಲ್ಯಾಂಗರ್​ ಜತೆ ಸೇರಿ ಮಾಜಿ ಕ್ರಿಕೆಟರ್‌ ರಿಕಿ ಪಾಂಟಿಂಗ್‌ ಕಾರ್ಯ ನಿರ್ವಹಿಸಲಿದ್ದಾರೆ.

44 ವರ್ಷದ ಪಾಂಟಿಗ್ 2017-18ರ ವರೆಗೂ ಆಸ್ಟ್ರೇಲಿಯಾ ಟಿ20 ತಂಡದ ಸಹಾಯಕ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡವು 2003 ಹಾಗೂ 2007ರಲ್ಲಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ರಿಕಿ ಪಾಂಟಿಂಗ್ 1999ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಹಾಗಾಗಿ ಪಾಂಟಿಂಗ್‌ ಅನುಭವ ತಂಡಕ್ಕೆ ಸ್ಫೂರ್ತಿಯನ್ನ ತುಂಬುತ್ತೆ ಅನ್ನೋ ವಿಶ್ವಾಸವನ್ನ ಜಸ್ಟೀನ್ ಲ್ಯಾಂಗರ್‌ ಹೊಂದಿದ್ದಾರೆ.

undefined

Intro:Body:

ಸಿಡ್ನಿ: ಇಂಗ್ಲೆಂಡ್​​ನಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್‌ಗೆ ಈಗಾಗಲೇ ಎಲ್ಲಾ ತಂಡಗಳು ಭರ್ಜರಿಯಾಗಿಯೇ ತಯಾರಿ ನಡೆಸ್ತಿವೆ. ಆದ್ರೇ, ನಾಲ್ಕು ಸಾರಿ ವರ್ಲ್ಡ್‌ ಕಪ್‌ ಗೆದ್ದ ಆಸ್ಟ್ರೇಲಿಯಾ ತಂಡ ಇನ್ನೂ ಹೇಳಿಕೊಳ್ಳುವಂತೆ ಸಿದ್ಧತೆ ನಡೆಸಿರಲಿಲ್ಲ. ಆದ್ರೇ, ಈಗ ಕಾಂಗ್ರೋ ತಂಡವನ್ನ ಮತ್ತೆ ಕಟ್ಟೋದಕ್ಕೆ ಮಾಜಿ ಕ್ರಿಕೆಟರ್‌ ರಿಕಿ ಪಾಂಟಿಂಗ್‌ ಬರ್ತಿದ್ದಾರೆ.

ತಮ್ಮ ನಾಯಕತ್ವದಲ್ಲೇ 2 ಸಾರಿ ವಿಶ್ವಕಪ್‌ ಗೆದ್ದುಕೊಟ್ಟಿದ್ದ ರಿಕಿ ಪಾಂಟಿಂಗ್‌, ಈ ಸಾರಿಯ ವರ್ಲ್ಡ್‌ ಕಪ್‌ಗೆ ಕಾಂಗ್ರೋ ತಂಡವನ್ನ ಕಟ್ಟೋದಕ್ಕಾಗಿ ಸಹಾಯಕ ಕೋಚ್​ ಆಗಿ ನೇಮಕಗೊಂಡಿದ್ದಾರೆ. ಬಾಲ್ ಟ್ಯಾಪರಿಂಗ್‌ನಿಂದ ಸಭ್ಯರ ಆಟಕ್ಕೆ ಕಳಂಕ ತಂದಿದ್ದ ಕಾಂಗ್ರೋ ಪ್ಲೇಯರ್ಸ್‌ ದೇಶದ ಮಾನ ಹರಾಜು ಹಾಕಿದ್ದರು. ಕ್ರಿಕೆಟ್‌ ಪ್ರೇಮಿಗಳಿಂದ ನಿಂದನೆಗೊಳಗಾಗಿದ್ದರು. ಇದರ ಮಧ್ಯೆಯೇ ಟೀಂ ಇಂಡಿಯಾ ವಿರುದ್ಧ ತವರು ನೆಲದಲ್ಲೇ ಸೋತು ಸುಣ್ಣವಾಗಿದ್ದಲ್ಲದೇ, ಟೀಕಾಕಾರರ ಬಾಯಿಗೆ ಆಹಾರವಾಗಿದ್ದರು. ಆಸ್ಟ್ರೇಲಿಯಾ ತಂಡವನ್ನ ಹೇಗಾದ್ರೂ ಹಳಿಗೆ ಮರಳಿಸುವ ದೊಡ್ಡ ಹೊಣೆಗಾರಿಕೆ ಪಾಂಟಿಂಗ್‌ ಹೆಗಲೇರಿದೆ. ಬರುವ ವಿಶ್ವಕಪ್​ ವೇಳೆೆಯೊಳಗೇ ಎಲ್ಲ ವೈಫಲ್ಯಗಳನ್ನ ಒವರ್‌ಕಮ್ ಮಾಡಿ ತಂಡ ಒಳ್ಳೇ ಫಾರ್ಮ್‌ನಲ್ಲಿ ರೂಪಗೊಳ್ಬೇಕಿದ್ರೇ, ಪಾಂಟಿಂಗ್‌ ಆಯ್ಕೆಯೇ ಸರಿಯಾದದು ಅನ್ನೋ ತೀರ್ಮನಾಕ್ಕೆ ಬಂದಿದೆ  ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ.  

ಬ್ಯಾಟಿಂಗ್​ ಸಾಮರ್ಥ್ಯವನ್ನಷ್ಟೇ ಅಲ್ಲ, ತಂಡ ವಿಶ್ವಕಪ್‌ ಗೆಲ್ಬೇಕಾದ್ರೇ ಏನೆಲ್ಲ ಇರಬೇಕೆಂಬುದು ಪಾಂಟಿಂಗ್‌ಗೆ ಚೆನ್ನಾಗಿಯೇ ಗೊತ್ತಿದೆ. ರಿಕಿ ಟ್ರಿಕ್ಸ್‌ ವರ್ಕೌಟ್‌ ಮಾಡಿದ್ರೇ ಕಾಂಗ್ರೋಗಳಂತೂ ಒಳ್ಳೇ ಪೈಪೋಟಿ ನೀಡೋದರಲ್ಲಿ ಹಿಂದೆ ಬೀಳಲ್ಲ. ಮೇ 30ರಿಂದ ಇಂಗ್ಲೆಂಡ್​ನಲ್ಲಿ ವಿಶ್ವಕಪ್​ ಟೂರ್ನಿ ನಡೆಯಲಿದೆ. ಇದಕ್ಕಾಗಿ ಕಾಂಗ್ರೋಗಳ ಮುಖ್ಯ ಕೋಚ್​ ಜಸ್ಟೀನ್​ ಲ್ಯಾಂಗರ್​ ಜತೆ ಸೇರಿ ಮಾಜಿ ಕ್ರಿಕೆಟರ್‌ ರಿಕಿ ಪಾಂಟಿಂಗ್‌ ಕಾರ್ಯ ನಿರ್ವಹಿಸಲಿದ್ದಾರೆ.

44 ವರ್ಷದ ಪಾಂಟಿಗ್ 2017-18ರ ವರೆಗೂ ಆಸ್ಟ್ರೇಲಿಯಾ ಟಿ20 ತಂಡದ ಸಹಾಯಕ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡವು 2003 ಹಾಗೂ 2007ರಲ್ಲಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು ರಿಕಿ ಪಾಂಟಿಂಗ್ 1999ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದರು. ಹಾಗಾಗಿ ಪಾಂಟಿಂಗ್‌ ಅನುಭವ ತಂಡಕ್ಕೆ ಸ್ಫೂರ್ತಿಯನ್ನ ತುಂಬುತ್ತೆ ಅನ್ನೋ ವಿಶ್ವಾಸವನ್ನ ಜಸ್ಟೀನ್ ಲ್ಯಾಂಗರ್‌ ಹೊಂದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.