ಜೋಹಾನ್ಸ್ಬರ್ಗ್(ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾದ ಮಾಜಿ ವೇಗಿ ವರ್ನಾನ್ ಫಿಲಾಂಡರ್ ಸಹೋದರ ಟೈರೋನ್ ಫಿಲಾಂಡರ್ ಮೇಲೆ ಗುಂಡಿನ ದಾಳಿ ನಡೆಸಿ, ಕೊಲೆ ಮಾಡಿರುವ ಘಟನೆ ಕೇಪ್ಟೌನ್ನಲ್ಲಿ ನಡೆದಿದೆ.
-
I would like to confirm the following and wish that our family's wish to allow us to mourn be respected. Thank you all for the love and support🙏 https://t.co/ciyEt8VYLT
— Vernon Philander (@VDP_24) October 7, 2020 " class="align-text-top noRightClick twitterSection" data="
">I would like to confirm the following and wish that our family's wish to allow us to mourn be respected. Thank you all for the love and support🙏 https://t.co/ciyEt8VYLT
— Vernon Philander (@VDP_24) October 7, 2020I would like to confirm the following and wish that our family's wish to allow us to mourn be respected. Thank you all for the love and support🙏 https://t.co/ciyEt8VYLT
— Vernon Philander (@VDP_24) October 7, 2020
32 ವರ್ಷದ ಟೈರೋನ್ ನಿನ್ನೆ ಮಧ್ಯಾಹ್ನ ನೀರು ತುಂಬುತ್ತಿದ್ದ ವೇಳೆ ದುಷ್ಕರ್ಮಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿದ್ದಾನೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಅಲ್ಲಿನ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಫಿಲಾಂಡರ್, ಇಂತಹ ಕಷ್ಟದ ಸಮಯದಲ್ಲಿ ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕು ಎಂದು ನಾನು ಕೇಳಿಕೊಳ್ಳುತ್ತಿದ್ದೇನೆ. ತಮಗೆ ಧೈರ್ಯ ತುಂಬಿದವರಿಗೆ ಧನ್ಯವಾದಗಳು ಎಂದಿದ್ದಾರೆ. ಈ ಕೊಲೆ ಯಾವ ಕಾರಣಕ್ಕಾಗಿ ನಡೆದಿದೆ ಅನ್ನೋದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.
ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿ ನಂತರ ಫಿಲಾಂಡರ್ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದು, 64 ಟೆಸ್ಟ್, 30 ಏಕದಿನ ಮತ್ತು ಏಳು ಟಿ20 ಪಂದ್ಯಗಳನ್ನಾಡಿದ್ದಾರೆ.