ETV Bharat / sports

ಆರ್ಟಿಕಲ್​ 370 ರದ್ದು: ಭಾರತದ ವಿರುದ್ಧ ಕಿಡಿ ಕಾರಿದ ಶೋಯೆಬ್ ಅಖ್ತರ್!

ಆರ್ಟಿಕಲ್​ 370 ರದ್ದು ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ನಿರ್ಧಾರದ ವಿರುದ್ಧ ಪಾಕಿಸ್ತಾನದ ಮಾಜಿ ವೇಗದ ಬೌಲರ್​ ಶೋಯೆಬ್​ ಅಖ್ತರ್​ ಮಾತನಾಡಿದ್ದು, ಕೇಂದ್ರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೋಯೆಬ್ ಅಖ್ತರ್/Shoaib Akhtar
author img

By

Published : Aug 12, 2019, 10:03 PM IST

ಕರಾಚಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್​ 370 ರದ್ದುಗೊಂಡಿರುವ ಕುರಿತು ಪಾಕಿಸ್ತಾನದ ಮಾಜಿ ವೇಗದ ಬೌಲರ್​ ಶೋಯೆಬ್ ಅಖ್ತರ್​ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ನಿಮ್ಮೆಲ್ಲರಿಗೂ ಈದ್ ಮುಬಾರಕ್​​... ಕಾಶ್ಮೀರ​ ಭಾರತದಿಂದ ತುಳಿತಕ್ಕೊಳಗಾಗುತ್ತಿದ್ದು, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಅಖ್ತರ್​,ನೀವೂ ತ್ಯಾಗ ಮಾಡಿದ್ದೀರಿ, ನಿಮ್ಮ ಹೋರಾಟಕ್ಕೆ ನಾವು ಸಾಥ್​ ನೀಡುತ್ತೇವೆ. ಯಾವ ಉದ್ದೇಶವನ್ನಿಟ್ಟುಕೊಂಡು ನೀವು ಜೀವನ ನಡೆಸುತ್ತಿದ್ದೀರಿ? ಎಂದು ಅಖ್ತರ್​ ಕೇಳಿದ್ದಾರೆ.

ಭಾರತದ ನಡೆ ಖಂಡಿಸಿರುವ ಪಾಕ್​ ಸರ್ಕಾರ ಈಗಾಗಲೇ ದ್ವಿಪಕ್ಷೀಯ ವ್ಯವಹಾರ ಕಡಿದುಕೊಂಡಿದ್ದು, ಉಭಯ ದೇಶಗಳ ನಡುವೆ ಸಂಚಾರ ಮಾಡುತ್ತಿದ್ದ ಸಂಜೋತಾ ಎಕ್ಸ್​ಪ್ರೆಸ್​​, ದೆಹಲಿ-ಲಾಹೋರ್​ ಬಸ್​ ಸೇವೆ ಕೂಡ ಸ್ಥಗಿತಗೊಳಿಸಿದೆ.

Intro:Body:

ಆರ್ಟಿಕಲ್​ 370 ರದ್ದು: ಭಾರತದ ವಿರುದ್ಧ ಕಿಡಿ ಕಾರಿದ ಶೋಯೆಬ್ ಅಖ್ತರ್! 

ಕರಾಚಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್​ 370 ರದ್ದುಗೊಂಡಿದ್ದು, ಇನ್ಮುಂದೆ ಜಮ್ಮು-ಕಾಶ್ಮೀರ್​ ಹಾಗೂ ಲಡಾಕ್​ ಕೇಂದ್ರಾಡಳಿತ ಪ್ರದೇಶಗಳಾಗಲಿವೆ. ಕೇಂದ್ರದ ನಿರ್ಧಾರಕ್ಕೆ ನೆರೆಯ ಪಾಕ್​ ವಿರೋಧ ವ್ಯಕ್ತಪಡಿಸಿದೆ. 

ಇದೀಗ ಇದೇ ವಿಷಯವನ್ನಿಟ್ಟುಕೊಂಡು ಪಾಕಿಸ್ತಾನದ ಮಾಜಿ ವೇಗದ ಬೌಲರ್​ ಶೋಯೆಬ್ ಅಖ್ತರ್​ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಕಾಶ್ಮೀರ್​ ಪ್ರದೇಶ ಭಾರತದಿಂದ ತುಳಿತಕ್ಕೊಳಗಾಗುತ್ತಿದ್ದು, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಅಖ್ತರ್​,ನೀವೂ ತ್ಯಾಗವನ್ನ ಮಾಡಿದ್ದೀರಿ, ನಿಮ್ಮ ಹೋರಾಟಕ್ಕೆ ನಾವು ಸಾಥ್​ ನೀಡುತ್ತೇವೆ. ಯಾವ ಉದ್ದೇಶವನ್ನಿಟ್ಟುಕೊಂಡು ನೀವೂ ಬದುಕ್ಕಿದ್ದೀರಿ ಎಂದು ಅಖ್ತರ್​ ಹೇಳಿದ್ದಾರೆ. 

ಭಾರತದ ನಡೆ ಖಂಡಿಸಿರುವ ಪಾಕ್​ ಸರ್ಕಾರ ಈಗಾಗಲೇ ದ್ವಿಪಕ್ಷೀಯ ವ್ಯವಹಾರ ಕಡಿದುಕೊಂಡಿದ್ದು, ಉಭಯ ದೇಶಗಳ ನಡುವೆ ಸಂಚಾರ ಮಾಡ್ತಿದ್ದ ಸಂಜೋತಾ ಎಕ್ಸ್​ಪ್ರೆಸ್​​,ಡೆಲ್ಲಿ-ಲಾಹೋರ್​ ಬಸ್​ ಸೇವೆ ಕೂಡ ಸ್ಥಗಿತಗೊಳಿಸಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.