ETV Bharat / sports

ಕೊರೊನಾ ವೈರಸ್​ ತಡೆಗೆ ದಿಟ್ಟ ನಿರ್ಧಾರ.... ಮೋದಿಯನ್ನು ಹಾಡಿ ಹೊಗಳಿದ ಶೋಯಬ್​ ಅಖ್ತರ್​ - Shoaib akthar

ಭಾರತ ಮತ್ತು ಪಾಕಿಸ್ತಾನ ನಡೆಯದಿರಲು ಮೋದಿ ಕಾರಣ ಎಂದು ಸದಾ ಆರೋಪಿಸುವ ಪಾಕಿಸ್ತಾನ ಕ್ರಿಕೆಟಿಗರ ನಡುವೆ ಮೋದಿಯನ್ನು ಅಖ್ತರ್​ ಈ ಒಂದು ಕಾರಣಕ್ಕೆ ಹೊಗಳಿದ್ದಾರೆ. ಕೊರೊನಾ ವೈರಸ್​ ತಡೆಗೆ ಮೋದಿ ದೇಶದ ಆರ್ಥಿಕತೆ ಕುಸಿಯುತ್ತಿರುವುದನ್ನು ಲೆಕ್ಕಿಸದೇ ಲಾಕ್​ಡೌನ್​ ಏರುವ ಮೂಲಕ ದೇಶದ ನಾಗರಿಕರ ಜೀವಕ್ಕೆ ಮನ್ನಣೆ ನೀಡಿರುವುದಕ್ಕೆ ಅಖ್ತರ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶೋಯಭ್ ಅಖ್ತರ್​
ಶೋಯಭ್ ಅಖ್ತರ್​
author img

By

Published : Apr 27, 2020, 3:47 PM IST

ಲಾಹೋರ್​: ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಬಹುಪಾಲು ಪಾಕ್​ ಕ್ರಿಕೆಟಿಗರು ತೆಗೆಳುವುದರಲ್ಲೇ ಕಾಲ ಕಳೆಯುವಾಗ ಮಾಜಿ ಕ್ರಿಕೆಟಿಗ ಶೋಯಬ್​ ಅಖ್ತರ್​ ಮೋದಿಯನ್ನು ಹಾಡಿ ಹೊಗಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡೆಯದಿರಲು ಮೋದಿ ಕಾರಣವೆಂದು ಸದಾ ಆರೋಪಿಸುವ ಪಾಕಿಸ್ತಾನ ಕ್ರಿಕೆಟಿಗರ ನಡುವೆ ಮೋದಿಯನ್ನು ಅಖ್ತರ್​ ಈ ಒಂದು ಕಾರಣಕ್ಕೆ ಹೊಗಳಿದ್ದಾರೆ. ಕೊರೊನಾ ವೈರಸ್​ ತಡೆಗೆ ಮೋದಿ ದೇಶದ ಆರ್ಥಿಕತೆ ಕುಸಿಯುತ್ತಿರುವುದನ್ನು ಲೆಕ್ಕಿಸದೇ ಲಾಕ್​ಡೌನ್​ ಹೇರುವ ಮೂಲಕ ದೇಶದ ನಾಗರಿಕರ ಜೀವಕ್ಕೆ ಮನ್ನಣೆ ನೀಡಿರುವುದಕ್ಕೆ ಅಖ್ತರ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

" ನರೇಂದ್ರ ಮೋದಿ ಬಗ್ಗೆ ರಾಜಕೀಯವಾಗಿ ಸಾಕಷ್ಟು ಭಿನ್ನಾಭಿಪ್ರಾಯವಿರಬಹುದು, ಆದರೆ, ಅವರು ಕೊರೊನಾ ವಿರುದ್ಧ ತೆಗೆದುಕೊಂಡಿರುವ ನಿರ್ಧಾರಗಳನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ. ಲಾಕ್​ಡೌನ್​ನಿಂದ ಸಾಕಷ್ಟು ಆರ್ಥಿಕವಾಗಿ ನಷ್ಟವಾಗುವುದೆಂದು ತಿಳಿದಿದ್ದರೂ, ದೇಶದ ಜನರ ಪ್ರಾಣಕ್ಕೆ ಹೆಚ್ಚು ಹೊತ್ತು ನೀಡಿದ್ದಾರೆ. ಇದಕ್ಕೆ ಅವರಿಗೊಂದು ಸಲಾಮ್​ " ಎಂದು ಮೋದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಕೊರೊನಾ ವಿರುದ್ಧ ಹೋರಾಟಕ್ಕೆ ದೇಣಿಗೆ ಸಂಗ್ರಹಿಸಲು ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಆಯೋಜನೆ ಮಾಡಬೇಕು. ಇದರ ಬ್ರಾಡ್​ಕಾಸ್ಟ್​ನಿಂದ ಬರುವ ಹಣವನ್ನು ಸಮನಾಗಿ ಹಂಚಿಕೊಳ್ಳಬಹುದು ಎಂದು ಸಲಹೆ ನೀಡಿದ್ದರು. ಆದರೆ, ಈ ಸಲಹೆಯನ್ನು ನಯವಾಗಿ ತಿರಸ್ಕರಿಸಿದ್ದ 1983 ವಿಶ್ಚಕಪ್​ ವಿಜೇತ ತಂಡದ ನಾಯಕ ಕಪಿಲ್​ ದೇವ್​ ನಮಗೆ ಕ್ರಿಕೆಟ್​ ಆಡುವುದರಿಂದ ಬರುವ ದುಡ್ಡು ಭಾರತಕ್ಕೆ ಬೇಕಾಗಿಲ್ಲ ಎಂದಿದ್ದರು.

ಜೊತೆಗೆ ಗಡಿಯಲ್ಲಿ ನಡೆಸುವ ಚಟುವಟಿಕೆಗಳನ್ನು ನಿಲ್ಲಿಸಿ, ಅದರಿಂದ ಉಳಿಯುವ ಹಣದಿಂದ ಆಸ್ಪತ್ರೆಗಳನ್ನು ನಿರ್ಮಿಸಿ, ಅದಕ್ಕೂ ಮಿಗಿಲಾಗಿ ಇಂತಹ ಸಂದರ್ಭದಲ್ಲಿ ಕ್ರಿಕೆಟ್​ಗಿಂತ ಶಾಲಾ-ಕಾಲೇಜುಗಳ ಆರಂಭವೇ ಮುಖ್ಯ ಎಂದು ತಿರುಗೇಟು ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.