ತಿರುವನಂತಪುರಂ(ಕೇರಳ): ಕೇರಳದ ಮೊದಲ ಟೆಸ್ಟ್ ಆಟಗಾರ ಟಿನು ಯೋಹಾನನ್ ಇದೀಗ ರಾಜ್ಯ ರಣಜಿ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಕೇರಳ ಕ್ರಿಕೆಟ್ ಅಸೋಸಿಯೇಷನ್ನ(ಕೆಸಿಎ) ಸೆಂಟರ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಟಿನು, ಇದೀಗ ಡೇವ್ ವಾಟ್ಮೋರ್ನಿಂದ ಅಧಿಕಾರಿ ವಹಿಸಿಕೊಂಡಿದ್ದಾರೆ.ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕೆಸಿಎ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಟಿನು, ಏಷ್ಯನ್ ಗೇಮ್ಸ್ ಗೋಲ್ಡ್ ಮೆಡಲಿಸ್ಟ್ ಟಿ.ಸಿ ಯೋಹಾನನ್ ಅವರ ಮಗನಾಗಿದ್ದು, ಟೀಂ ಇಂಡಿಯಾ ಪರ 2001ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟ್ ಆಡಿರುವ ಮೊದಲ ಕೇರಳದ ಪ್ಲೇಯರ್ ಆಗಿದ್ದಾರೆ.
ಮೂರು ಟೆಸ್ಟ್ ಪಂದ್ಯಗಳಲ್ಲಿ ಭಾರತ ಪ್ರತಿನಿಧಿಸಿದ್ದ ಇವರು, ಅನೇಕ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಭಾಗಿಯಾಗಿದ್ದು, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 145 ವಿಕೆಟ್ ಪಡೆದುಕೊಂಡಿದ್ದಾರೆ.