ಕೋಲ್ಕತ್ತಾ: ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮರು ಆಯ್ಕೆಯಾಗಲಿದ್ದಾರೆ.
ಸೆಪ್ಟೆಂಬರ್ 28 ರಂದು ಸಿಒಎ ಸಮಿತಿಯ ಸೂಚನೆಯ ಮೇರೆಗೆ ಸಿಎಬಿ ತನ್ನ 85ನೇ ವಾರ್ಷಿಕ ಸಾಮಾನ್ಯ ಸಭೆಯನ್ನ ಆಯೋಜಿಸಿದ್ದು. ಅಂದಿನಿಂದಲೆ ಗಂಗೂಲಿ ಎರಡನೇ ಬಾರಿಗೆ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ 5 ಜನರ ಸದಸ್ಯರ ಪ್ಯಾನಲ್ಗೆ ಅರ್ಜಿ ಸಲ್ಲಿಸಲು ಶನಿವಾರ ಅಂತಿಮ ದಿನವಾಗಿತ್ತು. ಆದರೆ ಗಂಗೂಲಿ ತಂಡದ ವಿರುದ್ಧ ಯಾರೊಬ್ಬರು ನಾಮಿನೇಷನ್ ಮಾಡಿಲ್ಲವಾದ್ದರಿಂದ ದ್ವಿತೀಯ ಬಾರಿಗೆ ಸಿಎಬಿಯ ಚುಕ್ಕಾಣಿ ಹಿಡಿಯಲು ಗಂಗೂಲಿ ಸಿದ್ದವಾಗಿದ್ದಾರೆ.
2014ರಲ್ಲಿ ಅಂದಿನ ಸಿಎಬಿ ಅಧ್ಯಕ್ಷ ಜಗನ್ಮೋಹನ್ ದಾಲ್ಮಿಯ ನಿಧನದ ನಂತರ ಸಿಎಬಿಯ ಜಂಟಿ ಕಾರ್ಯದರ್ಶಿ ಕೂಡ ಆಗಿರುವ ಗಂಗೂಲಿ ಅವರ 6 ವರ್ಷದ ಅವಧಿ ಪೂರ್ಣಗೊಳ್ಳಲು ಇನ್ನು 10 ತಿಂಗಳು ಬಾಕಿಯಿದ್ದು, ಆ ಸ್ಥಾನದಿಂದ ಅವರು ಇಳಿಯುವುದು ಕಡ್ಡಾಯವಾಗಿದೆ. ಇವರ ನಂತರ ಜಂಟಿ ಕಾರ್ಯದರ್ಶಿಯಾಗಿರುವ ದಾಲ್ಮಿಯ ಅವರ ಮಗ ಅಭಿಷೇಕ್ ಕಾರ್ಯದರ್ಶಿ ಹುದ್ದೇಗೇರಲಿದ್ದಾರೆ. ಆದರೆ ಗಂಗೂಲಿ ಎರಡನೇ ಬಾರಿಗೆ ಸಿಎಬಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.
ಗಂಗೂಲಿ 2019ರಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಒಂದು ವೇಳೆ ಈ ಒಪ್ಪಂದ 2020ಕ್ಕೆ ಮುಂದುರಿದರೆ ಗಂಗೂಲಿ ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್ ಆಧ್ಯಕ್ಷಗಿರಿಯನ್ನು ತ್ಯಜಿಸಬೇಕಾಗಬಹುದು. ಹೀಗೇನಾದರೂ ಆದಲ್ಲಿ ಕಾರ್ಯದರ್ಶಿಯಾಗಿರುವ ಅಭಿಷೇಕ್ ಸಿಎಬಿ ಅಧ್ಯಕ್ಷರಾಗಿ ಬಡ್ತಿ ಪಡೆಯಲಿದ್ದಾರೆ.
ಬೆಂಗಾಲ್ ಕ್ರಿಕೆಟ್ ಅಸೋಸಿಯಷನ್ ಪ್ಯಾನಲ್:
- ಸೌರವ್ ಗಂಗೂಲಿ: ಅಧ್ಯಕ್ಷ
- ನರೇಶ್ ಓಜಾ: ಉಪಾಧ್ಯಕ್ಷ
- ಅಭಿಷೇಕ್ ದಾಲ್ಮಿಯ: ಕಾರ್ಯದರ್ಶಿ
- ಡೆಬಬ್ರತಾ ದಾಸ್: ಜಂಟಿ ಕಾರ್ಯದರ್ಶಿ
- ದೆಬಾಸಿಶ್ ಗಂಗೂಲಿ: ಖಜಾಂಚಿ