ETV Bharat / sports

ಕೊರೊನಾ​ ಸೋಂಕಿನಿಂದ ಮುಶ್ರಫ್​ ಮೊರ್ತಾಜಾ ಗುಣಮುಖ

ಜೂನ್​ 20ರಂದು ಮೊರ್ತಾಜಾ ಮೊದಲ ಬಾರಿಗೆ ಕೋವಿಡ್​ ಟೆಸ್ಟ್​ಗೆ​ ಒಳಪಟ್ಟಿದ್ದು ಪಾಸಿಟಿವ್​ ವರದಿ ಬಂದಿತ್ತು. ಮತ್ತೆ ಜುಲೈ 5ರಂದು ನಡೆಸಿದ್ದ ಪರೀಕ್ಷೆಯಲ್ಲೂ ಪಾಸಿಟಿವ್​ ವರದಿ ಬಂದಿತ್ತು. ನಂತರ ಮನೆಯಲ್ಲಿ ಸ್ವಯಂ ಐಸೋಲೇಷನ್​ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು.

author img

By

Published : Jul 15, 2020, 1:07 PM IST

ಮುಶ್ರಫ್​ ಮೊರ್ತಾಜಾ
ಮುಶ್ರಫ್​ ಮೊರ್ತಾಜಾ

ಢಾಕಾ: ಎರಡು ಬಾರಿಯ ಕೋವಿಡ್​ ಟೆಸ್ಟ್​ನಲ್ಲೂ ಪಾಸಿಟಿವ್​ ವರದಿ ಬಂದು ಆಘಾತಕ್ಕೊಳಗಾಗಿದ್ದ ಬಾಂಗ್ಲಾದೇಶ ಕ್ರಿಕೆಟ್​ ತಂಡದ ಮಾಜಿ ನಾಯಕ ಮುಶ್ರಫ್​ ಮೊರ್ತಾಜಾ ಚೇತರಿಸಿಕೊಂಡಿದ್ದಾರೆ.

ಜೂನ್​ 20ರಂದು ಮೊರ್ತಾಜಾ ಮೊದಲ ಬಾರಿಗೆ ಕೋವಿಡ್​ ಟೆಸ್ಟ್​ಗೆ​ ಒಳಪಟ್ಟಿದ್ದು ಪಾಸಿಟಿವ್​ ವರದಿ ಬಂದಿತ್ತು. ಮತ್ತೆ ಜುಲೈ 5ರಂದು ನಡೆಸಿದ್ದ ಪರೀಕ್ಷೆಯಲ್ಲೂ ಪಾಸಿಟಿವ್​ ವರದಿ ಬಂದಿತ್ತು. ನಂತರ ಮನೆಯಲ್ಲಿ ಸ್ವಯಂ ಐಸೋಲೇಷನ್​ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು.

ಇದೀಗ ತಾವು ಕೊರೊನಾ ಸೋಂಕಿನಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಮಂಗಳವಾರ ನಡೆಸಿದ ಕೋವಿಡ್​ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ ಎಂದು ಫೇಸ್​ಬುಕ್​ನಲ್ಲಿ ಹೇಳಿಕೊಂಡಿದ್ದಾರೆ.

"ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ದೇವರ ಕೃಪೆ ಮತ್ತು ಎಲ್ಲರ ಆಶೀರ್ವಾದ ನನ್ನ ಮೇಲಿರುವುದರಿಂದ ನನಗೆ ಕೊರೊನಾ ವೈರಸ್ ಫಲಿತಾಂಶದಲ್ಲಿ ನೆಗೆಟಿವ್ ವರದಿ ಬಂದಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ನನ್ನ ಬೆಂಬಲಕ್ಕೆ ನಿಂತು, ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ" ಎಂದು ಮೊರ್ತಾಜಾ ಬರೆದುಕೊಂಡಿದ್ದಾರೆ.

ಮುಶ್ರಫ್​ ಮೊರ್ತಾಜಾ
ಮುಶ್ರಫ್​ ಮೊರ್ತಾಜಾ

ನಾನು ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದು ವೈರಸ್​ನಿಂದ ಸಂಪೂರ್ಣ ಗುಣಮುಖನಾಗಿದ್ದೇನೆ. ಯಾರೆಲ್ಲಾ ಈ ಸೋಂಕಿಗೆ ಒಳಗಾಗಿದ್ದೀರೋ ಅವರೆಲ್ಲಾ ಸಕಾರಾತ್ಮಕವಾಗಿರಿ. ಎಲ್ಲರೂ ದೇವರ ಮೇಲೆ ನಂಬಿಕೆಯಿಡಿ ಮತ್ತು ನಿಮಗಳಿಗೆ ಬದ್ಧರಾಗಿರಿ. ನಾವೆಲ್ಲರೂ ಒಟ್ಟಾಗಿ ಕೊರೊನಾ​ ವಿರುದ್ಧ ಹೋರಾಡೋಣ ಎಂದಿದ್ದಾರೆ.

ಆದರೆ ಕಳೆದ ಎರಡು ವಾರದಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಮೊರ್ತಾಜಾ ಪತ್ನಿ ಸುಮೋನಾ ಹಕ್ ಇನ್ನೂ ಸೋಂಕಿನಿಂದ ಗುಣಮುಖರಾಗಿಲ್ಲ. ಅವಳ ಪರವಾಗಿ ನಿಮ್ಮ ಪ್ರಾರ್ಥನೆಯಿರಲಿ ಎಂದು ಮನವಿ ಮಾಡಿದ್ದಾರೆ.

ಸೋಂಕಿಗೊಳಗಾಗಿದ್ದ ಇತರೆ ಬಾಂಗ್ಲಾದೇಶ ಕ್ರಿಕೆಟಿಗರಾದ ನಜ್ಮುಲ್​ ಇಸ್ಲಾಮ್ ಹಾಗೂ ನಫೀಸ್​ ಇಕ್ಬಾಲ್​ ಕೂಡ ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.