ETV Bharat / sports

ವಿಶ್ವ ಕ್ರಿಕೆಟ್​ನ ಶ್ರೇಷ್ಠ ವಿಕೆಟ್​ ಕೀಪರ್ ಹೆಸರಿಸಿದ ಆ್ಯಡಂ ಗಿಲ್​ಕ್ರಿಸ್ಟ್​ - ಕುಮಾರ್​ ಸಂಗಕ್ಕಾರ

ಟಿವಿ ನಿರೂಪಕಿ ಮಡೋನಾ ಟಿಕ್ಸೀರಾ ಅವರೊಂದಿಗೆ ನಡೆಸಿದ ಇನ್​​ಸ್ಟಾಗ್ರಾಂ​ ಲೈವ್​ ಸಂವಾದದಲ್ಲಿ ಗಿಲ್​ಕ್ರಿಸ್ಟ್​​​​ಗೆ ಮಡೋನಾ, ಧೋನಿ, ದಕ್ಷಿಣ ಆಫ್ರಿಕಾ ಮಾರ್ಕ್​ ಬೌಷರ್​, ಶ್ರೀಲಂಕಾದ ಕುಮಾರ್​ ಸಂಗಕ್ಕಾರ, ಕಿವೀಸ್​ನ ಬ್ರೆಂಡನ್​​ ಮೆಕಲಮ್ ಇವರಲ್ಲಿ ಯಾರು ಅತ್ಯುತ್ತಮ ವಿಕೆಟ್​ ಕೀಪರ್​ ಎಂದು ಪ್ರಶ್ನಿಸಿದ್ದಕ್ಕೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಎಂಎಸ್​ ಧೋನಿಯನ್ನು ಹೆಸರಿಸಿದ್ದಾರೆ.

ಆ್ಯಡಂ ಗಿಲ್​ಕ್ರಿಸ್ಟ್​
ಆ್ಯಡಂ ಗಿಲ್​ಕ್ರಿಸ್ಟ್​
author img

By

Published : Aug 6, 2020, 12:53 PM IST

ನವದೆಹಲಿ: ವಿಶ್ವ ಕ್ರಿಕೆಟ್​ನಲ್ಲಿ ಅತ್ಯುತ್ತಮ ವಿಕೆಟ್​ ಕೀಪರ್​ ಯಾರು ಎಂದ ತಕ್ಷಣ ಕಣ್ಣ ಮುಂದೆ ಬರುವವರೆ ಆಸ್ಟ್ರೇಲಿಯಾದ ಮಾಜಿ ವಿಕೆಟ್​ ಕೀಪರ್​ ಆ್ಯಂಡಂ ಗಿಲ್​ಕ್ರಿಸ್ಟ್​. ಆದರೆ, ಅವರ ಪ್ರಕಾರ ಅತ್ಯುತ್ತಮ ವಿಕೆಟ್​ ಕೀಪರ್​ ಭಾರತದ ಎಂಎಸ್​ ಧೋನಿಯಾಗಿದ್ದಾರೆ.

ಟಿವಿ ನಿರೂಪಕಿ ಮಡೋನಾ ಟಿಕ್ಸೀರಾ ಅವರೊಂದಿಗೆ ನಡೆಸಿದ ಇನ್​​ಸ್ಟಾಗ್ರಾಂ ಲೈವ್​ ಸಂವಾದದಲ್ಲಿ ಗಿಲ್​ಕ್ರಿಸ್ಟ್​​​ಗೆ ಮಡೋನಾ, ಧೋನಿ, ದಕ್ಷಿಣ ಆಫ್ರಿಕಾ ಮಾರ್ಕ್​ ಬೌಷರ್​, ಶ್ರೀಲಂಕಾದ ಕುಮಾರ್​ ಸಂಗಕ್ಕಾರ, ಕಿವೀಸ್​ನ ಬ್ರೆಂಡನ್​​ ಮೆಕಲಮ್ ಇವರಲ್ಲಿ ಯಾರು ಅತ್ಯುತ್ತಮ ವಿಕೆಟ್​ ಕೀಪರ್​ ಎಂದು ಪ್ರಶ್ನಿಸಿದ್ದಕ್ಕೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಎಂಎಸ್​ ಧೋನಿಯನ್ನು ಹೆಸರಿಸಿದ್ದಾರೆ.

ನಾನು ಬಹಳಷ್ಟು ಭಾರತೀಯರ ಬೆಂಬಲದೊಂದಿಗೆ ಒಬ್ಬ ಭಾರತೀಯನ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಅರ್ಥಮಾಡಿಕೊಂಡಿದ್ದೇನೆ. ಆದ್ದರಿಂದ ಸಹಜವಾಗಿ ಧೋನಿ ಸಂಗಕ್ಕಾರ, ಬ್ರೆಂಡನ್​ ಮೆಕಲಮ್​ಗಿಂತ ಅತ್ಯುತ್ತಮ ವಿಕೆಟ್​ ಕೀಪರ್​ ಆಗಿದ್ದಾರೆ ಎಂದು ಅವರು ಉತ್ತರಿಸಿದ್ದಾರೆ.

ಭಾರತಕ್ಕೆ ಧೋನಿ ಕೊಡುಗೆ ಸಾಕಷ್ಟಿದೆ. ಅವರ ವೃತ್ತಿ ಜೀವನದ ಬೆಳೆವಣಿಗೆಯನ್ನು ನೋಡಲು ಇಷ್ಟಪಡುತ್ತೇನೆ. ಧೋನಿ ಒಬ್ಬ ಅದ್ಭುತ ಶೈಲಿಯ ಕ್ರಿಕೆಟ್​ ಹುಟ್ಟುಹಾಕಿದರು. ಅದನ್ನು ಎಲ್ಲರೂ ಇಷ್ಟ ಪಟ್ಟರು ಹಾಗೂ ಅನುಸರಿಸಲು ಮುಂದಾದರು. ಅವರು ಕ್ರಿಕೆಟ್​ನಲ್ಲಿ ತಮ್ಮನ್ನು ತಾವೂ ನಿರ್ವಹಿಸಿಕೊಂಡ ರೀತಿ ಅದ್ಭುತವಾದದ್ದು ಎಂದು ಗಿಲ್​ಕ್ರಿಸ್ಟ್​ ಬಣ್ಣಿಸಿದ್ದಾರೆ.

ಎಂಎಸ್​ ಧೋನಿ
ಎಂಎಸ್​ ಧೋನಿ

ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಬಲಿ ಪಡೆದ ದಾಖಲೆ ದಕ್ಷಿಣ ಆಫ್ರಿಕಾದ ಮಾರ್ಕ್​ ಬೌಷರ್​ ಹೆಸರಿನಲ್ಲಿದೆ. ಅವರು ಒಟ್ಟಾರೆ ವೃತ್ತಿ ಜೀವನದಲ್ಲಿ 998 ಮಂದಿಯನ್ನು ಪೆವಿಲಿಯನ್​ಗಟ್ಟಿದ್ದಾರೆ. 2ನೇ ಸ್ಥಾನದಲ್ಲಿ ಗಿಲ್​ಕ್ರಿಸ್ಟ್​ ಇದ್ದು, 905 ಬಲಿ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ ಎಂಎಸ್​ ಧೋನಿ ಇದ್ದಾರೆ. ಅವರು 829 ಬಲಿ ಪಡೆದಿದ್ದಾರೆ. ಆದರೆ, ಸ್ಟಂಪಿಂಗ್​ ವಿಚಾರದಲ್ಲಿ ಧೋನಿ ಎಲ್ಲ ವಿಕೆಟ್​ ಕೀಪರ್​ಗಿಂತಲೂ ಭಾರಿ ಮುಂದಿದ್ದಾರೆ. ಧೋನಿ ಒಟ್ಟಾರೆ 195 ಸ್ಟಂಪ್​ ಔಟ್​ ಮಾಡಿದ್ದಾರೆ. ಧೋನಿ ಬಿಟ್ಟರೆ ಸಂಗಕ್ಕಾರ(139) ಹಾಗೂ ಕಲುವಿತರಣ್​(101) ಹೆಚ್ಚು ಸ್ಟಂಪಿಂಗ್ ಮಾಡಿರುವ ವಿಕೆಟ್ ಕೀಪರ್​​ಗಳಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.