ETV Bharat / sports

ಬಿಬಿಎಲ್​ನ ಹೊಸ ನಿಯಮಗಳು ಟೂರ್ನಿ ದಾರಿತಪ್ಪಿಸುವ ಗಿಮಿಕ್ ​: ವಾಟ್ಸನ್​ ಕಿಡಿ - ಕ್ರಿಕೆಟ್ ಆಸ್ಟ್ರೇಲಿಯಾ

ಬಿಗ್ ಬ್ಯಾಶ್ ಲೀಗ್​​ 10ನೇ ಆವೃತ್ತಿಯಲ್ಲಿ ಸಿಎ ಪವರ್ ಸರ್ಜ್, ಎಕ್ಸ್ ಫ್ಯಾಕ್ಟರ್ ಪ್ಲೇಯರ್ ಮತ್ತು ಬ್ಯಾಷ್ ಬೂಸ್ಟ್ ಎಂಬ ಮೂರು ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಆದರೆ ಈ ನಿಯಮಗಳ ಕುರಿತು ವಾಟ್ಸನ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ..

ಶೇನ್ ವಾಟ್ಸನ್​
ಶೇನ್ ವಾಟ್ಸನ್​
author img

By

Published : Nov 18, 2020, 8:31 PM IST

ಮೆಲ್ಬೋರ್ನ್ ​: ಟೂರ್ನಿಯನ್ನು ಹೆಚ್ಚು ಆಕರ್ಷಿಸುವ ದೃಷ್ಟಿಯಿಂದ ಕ್ರಿಕೆಟ್​ ಆಸ್ಟ್ರೇಲಿಯಾ ಬಿಗ್​ಬ್ಯಾಶ್​​ನಲ್ಲಿ ಜಾರಿಗೆ ತಂದಿರುವ 3 ಹೊಸ ನಿಯಮಗಳ ವಿರುದ್ಧ ಮಾಜಿ ಆಲ್​ರೌಂಡರ್​ ಶೇನ್​ ವಾಟ್ಸನ್​ ಕಿಡಿಕಾರಿದ್ದಾರೆ.

ಬಿಗ್ ಬ್ಯಾಶ್ ಲೀಗ್​​ 10ನೇ ಆವೃತ್ತಿಯಲ್ಲಿ ಸಿಎ ಪವರ್ ಸರ್ಜ್, ಎಕ್ಸ್ ಫ್ಯಾಕ್ಟರ್ ಪ್ಲೇಯರ್ ಮತ್ತು ಬ್ಯಾಷ್ ಬೂಸ್ಟ್ ಎಂಬ ಮೂರು ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಆದರೆ, ಈ ನಿಯಮಗಳ ಕುರಿತು ವಾಟ್ಸನ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

''ಬಿಬಿಎಲ್‌ಗಾಗಿ ಪರಿಚಯಿಸಿರುವ ಮೂರು ಹೊಸ ಗಿಮಿಕ್‌ಗಳ ಬಗ್ಗೆ ನಾನು ಇಂದು ಓದಿದೆ. ಪವರ್ ಸರ್ಜ್, ಎಕ್ಸ್ ಫ್ಯಾಕ್ಟರ್ ಪ್ಲೇಯರ್ ಮತ್ತು ಬ್ಯಾಶ್​ ಬೂಸ್ಟ್ ಇವುಗಳು ಬೆಳೆಯುತ್ತಿರುವ ಟೂರ್ನಮೆಂಟ್​ ಅನ್ನು ದಾರಿ ತಪ್ಪಿಸುವ ಪ್ರಯತ್ನಗಳಂತಿವೆ" ಎಂದು ವೆಬ್​ಸೈಟ್​ಗೆ ಬರೆದಿರುವ ಲೇಖನದಲ್ಲಿ ತಿಳಿಸಿದ್ದಾರೆ.

"ಚಕ್ರಗಳು ಮುರಿಯದಿದ್ದರೂ ಅವುಗಳನ್ನು ಮರುಶೋಧಿಸಲು ಪ್ರಯತ್ನಿಸುತ್ತಿರುವ ಜನರು ನಮ್ಮ ಸುತ್ತ ಏಕಿದ್ದಾರೆ ಎಂದು ನನಗೆ ತಿಳಿಯುತ್ತಿಲ್ಲ" ಎಂದು ಬರೆಯುವ ಮೂಲಕ ಸಿಎ ಜಾರಿಗೆ ತರುವ ನಿಯಮಗಳು ಟೂರ್ನಿಗೆ ಮಾರಕ ಎನ್ನುವುದನ್ನು ತಿಳಿಸಿದ್ದಾರೆ.

ಬಿಗ್​ಬ್ಯಾಶ್​ನ ಜಾರಿಗೆ ತರಲೊರಟಿರುವ ನಿಯಮಗಳಲ್ಲಿ ಪವರ್ ಸರ್ಜ್ ಎಂದರೆ ಟಿ20 ಕ್ರಿಕೆಟ್‌ನ ಆರಂಭದಲ್ಲಿ 6 ಓವರ್ ಪವರ್‌ ಪ್ಲೇ ಬದಲಿಗೆ 4 ಓವರ್ ಪವರ್ ಪ್ಲೇ ನಡೆಸಿ 2 ಪವರ್‌ಪ್ಲೇ ಓವರ್‌ಗಳನ್ನು ಬ್ಯಾಟಿಂಗ್ ತಂಡ 10 ಓವರ್‌ಗಳ ಬಳಿಕ ತಮಗಿಷ್ಟ ಬಂದಾಗ ಕೇಳಿ ಪಡೆಯಬಹುದಾಗಿದೆ.

ಎಕ್ಸ್ ಫ್ಯಾಕ್ಟರ್ ಎಂದರೆ 10 ಓವರ್‌ಗಳ ಬಳಿಕ ಪ್ಲೇಯಿಂಗ್‌ 11ನಲ್ಲಿ ಇಲ್ಲದ ಆಟಗಾರರು ಅಂದರೆ 12, 13ನೇ ಬ್ಯಾಟಿಂಗ್ ಕ್ರಮಾಂಕದ ಆಟಗಾರರನ್ನೂ ಬ್ಯಾಟಿಂಗ್ ನಡೆಸದ ಅಥವಾ ಕೇವಲ ಒಂದೇ ಓವರ್​ ಬೌಲಿಂಗ್ ಮಾಡಿರುವ ಆಟಗಾರನ ಬದಲಿ ಆಟಗಾರರನ್ನು ಮೈದಾನಕ್ಕಿಳಿಸಲು ಅವಕಾಶ ಮಾಡಿಕೊಡುವುದು.

ಬ್ಯಾಶ್​ ಬೂಸ್ಟ್ ಅಂದರೆ ಚೇಸಿಂಗ್ ತಂಡ 10 ಓವರ್‌ ಮೊದಲು ಬ್ಯಾಟಿಂಗ್​ ಮಾಡಿದ ತಂಡಕ್ಕಿಂತ ಹೆಚ್ಚು ರನ್​ಗಳಿಸಿದರೆ ಒಂದು ಬೋನಸ್ ಅಂಕ ನೀಡುವುದು. ಈ ಮೂರು ನಿಯಮಗಳನ್ನು ಡಿಸೆಂಬರ್​ 10ರಿಂದ ನಡೆಯುವ ಟೂರ್ನಿಯಲ್ಲಿ ಸಿಎ ಜಾರಿಗೆ ತರಲು ಮುಂದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.