ಆಲೂರು(ಬೆಂಗಳೂರು): ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ತಂಡದ ಪರ ಮಿಂಚು ಹರಿಸಿರುವ ಟೀಂ ಇಂಡಿಯಾ ಮಾಜಿ ಬೌಲರ್ ಎಸ್.ಶ್ರೀಶಾಂತ್ ಐದು ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಬಳಿಕ ದೇಶಿ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡಿರುವ ಶ್ರೀಶಾಂತ್ ಬರೋಬ್ಬರಿ 15 ವರ್ಷಗಳ ಬಳಿಕ ಐದು ವಿಕೆಟ್ ಪಡೆದುಕೊಂಡು ಮಿಂಚಿದ್ದಾರೆ. ಈ ಹಿಂದೆ 2006ರಲ್ಲಿ ವೇಗಿ ಐದು ವಿಕೆಟ್ ಪಡೆದುಕೊಂಡಿದ್ದರು.
ಇದನ್ನೂ ಓದಿ: ಪೃಥ್ವಿ ಶಾ ಸ್ಫೋಟಕ ಶತಕ: ಡೆಲ್ಲಿ ವಿರುದ್ಧ ಮುಂಬೈಗೆ 7 ವಿಕೆಟ್ ಜಯ
ಉತ್ತರ ಪ್ರದೇಶ ವಿರುದ್ಧ ಗ್ರೂಪ್ ಸಿ ವಿಭಾಗದ ಪಂದ್ಯ ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಶ್ರೀಶಾಂತ್ ಐದು ವಿಕೆಟ್ ಪಡೆದು ಮಿಂಚಿದ್ದಾರೆ. ತಾವು ಎಸೆದ 9.4 ಓವರ್ಗಳಲ್ಲಿ 65ರನ್ ನೀಡಿ 5 ವಿಕೆಟ್ ಪಡೆದುಕೊಂಡಿದ್ದು, ಉತ್ತರ ಪ್ರದೇಶದ ಆರಂಭಿಕ ಬ್ಯಾಟ್ಸಮನ್ ಗೋಸ್ವಾಮಿ, ಅಕ್ಷದೀಪ್ ನಾಥ್, ಭುವನೇಶ್ವರ್ ಕುಮಾರ್, ಶಿವಂ ಶರ್ಮಾ, ಮೊಶಿನ್ ಖಾನ್ ವಿಕೆಟ್ ಪಡೆದುಕೊಂಡಿದ್ದಾರೆ.
49.4 ಓವರ್ಗಳಲ್ಲಿ ಉತ್ತರ ಪ್ರದೇಶ 283ರನ್ಗಳಿಕೆ ಮಾಡಿದ್ದು, ಇದರ ಬೆನ್ನತ್ತಿರುವ ಕೇರಳ ತಂಡ ರಾಬಿನ್ ಉತ್ತಪ್ಪ ಅವರ 81ರನ್ಗಳ ನೆರವಿನಿಂದ 40 ಓವರ್ಗಳಲ್ಲಿ 223ರನ್ಗಳಿಕೆ ಮಾಡಿದ್ದು, ಕೊನೆಯ 10 ಓವರ್ಗಳಲ್ಲಿ 61ರನ್ಗಳ ಅವಶ್ಯಕತೆ ಇದೆ.