ETV Bharat / sports

ಕ್ರಿಕೆಟ್​ ಅಸೋಸಿಯೇಷನ್ ವಿಸರ್ಜನೆಗೆ ಗಂಭೀರ್ ಒತ್ತಾಯ...ಡಿಡಿಸಿಎ ಸಾಮಾನ್ಯ ಸಭೆಯಲ್ಲಿ ಘರ್ಷಣೆ - ಡಿಡಿಸಿಎ ವಿಸರ್ಜಿಸುವಂತೆ ಗಂಭೀರ್ ಮನವಿ

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ವಿಸರ್ಜಿಸಬೇಕು ಎಂದು ಮಾಜಿ ಕ್ರಿಕೆಟರ್​ ಗೌತಮ್​ ಗಂಭೀರ್,​ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿಗೆ ಮನವಿ ಮಾಡಿದ್ದಾರೆ.

ಡಿಡಿಸಿಎ ಸಾಮಾನ್ಯ ಸಭೆಯಲ್ಲಿ ಘರ್ಷಣೆ, Gambhir said to dissolve DDCA
ಕ್ರಿಕೆಟ್​ ಅಸೋಸಿಯೇಷನ್ ವಿಸರ್ಜಿಸುವಂತೆ ಗಂಭೀರ್ ಮನವಿ
author img

By

Published : Dec 30, 2019, 11:57 AM IST

ನವದೆಹಲಿ: ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್(ಡಿಡಿಸಿಎ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘರ್ಷಣೆ ಸಂಭವಿಸಿದೆ. ಈ ನಡುವೆ, ಡಿಡಿಸಿಎ ವಿಸರ್ಜನೆ ಮಾಡಿ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟರ್​ ಮತ್ತು ಸಂಸದ ಗೌತಮ್​ ಗಂಭೀರ್ ಆಗ್ರಹಿಸಿದ್ದಾರೆ.

ನಿನ್ನೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ. ಸಭೆಯಲ್ಲಿ ಘರ್ಷಣೆ ನಡೆದ ವಿಡಿಯೋವನ್ನ ಟ್ವೀಟ್​ ಮಾಡಿರುವ ಗೌತಮ್​ ಗಂಭೀರ್​, ಕೆಲವು ವಂಚಕರು ಸಂಘಟನೆಯನ್ನು ಹೇಗೆ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ನೋಡಿ. ಬಿಸಿಸಿಐ ಕೂಡಲೇ ಡಿಡಿಸಿಎ ವಿಸರ್ಜಿಸುವುದರ ಜೊತೆಗೆ ಘರ್ಷಣೆಯಲ್ಲಿ ಭಾಗಿಯಾದವರನ್ನು ಜೀವಿತಾವಧಿಯವರೆಗೆ ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ಅಂಗೀಕರಿಸಿದ ನಿರ್ಧಾರವನ್ನ ಸದಸ್ಯರು ಒಪ್ಪದ ಕಾರಣ ಈ ಘಟನೆ ನಡೆದಿದೆ. ಘರ್ಷಣೆಯಲ್ಲಿ ಡಿಡಿಸಿಎ ಜಂಟಿ ಕಾರ್ಯದರ್ಶಿ ರಾಜನ್ ಮಂಚಂದಾ ಕೂಡ ಇದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ನಡೆದ ನಂತರ ರಜತ್ ಶರ್ಮಾ ಡಿಡಿಸಿಎ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಸಭೆಯಲ್ಲಿ ಐದು ಅಂಶಗಳನ್ನ ನಿರ್ಣಯಿಸಿ ಅಳವಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೆಲವು ಚರ್ಚೆ ನಡೆಸಿದ್ದೇವೆ. ಆದರೆ, ಆ ಚರ್ಚೆ ಪ್ರಸ್ತಾಪಿಸಲು ಯೋಗ್ಯವಾಗಿಲ್ಲ ಎಂದು ಡಿಡಿಸಿಎ ನಿರ್ದೇಶಕ ಸಂಜಯ್ ಭಾರದ್ವಾಜ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Intro:पुर्वी दिल्लीः दिल्ली एवं जिला क्रिकेट संघ (डीडीसीए) की वार्षिक आम बैठक (एजीएम) की बैठक में पदाधिकारियों के बीच झड़प और हाथापाई हुई ।
रविवार को अरुण जेटली स्टेडियम में आयोजित वार्षिक बैठक में दो गुटों के बीच मारपीट की नोबत आ गई ।

झडप की तस्वीर सोशल साइट पर खूब वॉयरल वाइरल हो रहा है ।
Body:
पुर्वी दिल्ली के सांसद व पूर्व क्रिकेटर गौतम गंभीर ने भी हाथापाई का वीडियो ट्वीट कर इस घटना की निंदा करते हुए लिखा की देखिए कितने मुट्ठी भर बदमाश एक संस्था का उपहास बना रहे हैं ।

गंभीर ने मांग करते हुए कहा कि बीसीसीआई को डीडीसीए को तुरंत भंग कर देना चाहिए साथ ही इस हाथापाई में शामिल लोगों पर प्रतिबंध या शामिल लोगों को आजीवन प्रतिबंध कर देना चाहिए ।

Conclusion:आप को बता दें कि डीडीसीए में कई महीनों से विवाद चल रहा है इसी विवाद की वजह से डीडीसीए चैयरमैन के पद से रजत शर्मा ने इस्तीफा दे दिया था ।
ETV Bharat Logo

Copyright © 2025 Ushodaya Enterprises Pvt. Ltd., All Rights Reserved.