ETV Bharat / sports

ತಂದೆ ಆಸೆಯಂತೆ ಸೇನೆ ಸೇರಬೇಕಿದ್ದ ಯುವಕ ಇಂದು ಕ್ರಿಕೆಟ್​ ತಂಡದ ನಾಯಕ! - under 19 indian cricket team captain

ಅಂಡರ್​ 19 ಏಷ್ಯಾ ಕಪ್​​ನ ಭಾರತ ಕ್ರಿಕೆಟ್​ ತಂಡಕ್ಕೆ ಧ್ರುವ್​ ಚಂದ್​ ಜುರೆಲ್​ನನ್ನು ಕ್ಯಾಪ್ಟನ್ ಆಗಿ ಬಿಸಿಸಿಐ ಆಯ್ಕೆ ಮಾಡಿದೆ. ಆದರೆ, ಧ್ರುವ್​ ತಂದೆ ತಮ್ಮ ಮಗ ಸೇನೆಗೆ ಸೇರಬೇಕೆಂದು ಬಯಸಿದ್ದರು. ಧ್ರುವ್​ ಕುಟುಂಬಸ್ಥರು 'ಈಟಿವಿ ಭಾರತ'ದೊಂದಿಗೆ ಈ ಕುರಿತು ಮಾತನಾಡಿರುವ ಎಕ್ಸ್​ಕ್ಲ್ಯೂಸಿವ್​ ಸಂದರ್ಶನ ಇಲ್ಲಿದೆ...

dhruv
author img

By

Published : Aug 1, 2019, 3:02 AM IST

ಆಗ್ರಾ(ಯು.ಪಿ): ಸೇನೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಧ್ರುವ್​ ಚಂದ್​ ಜುರೆಲ್ ಅವರ ತಂದೆ, ತಮ್ಮ ಮಗ ಕೂಡಾ ಸೇನೆಯಲ್ಲಿ ಅಧಿಕಾರಿಯಾಗಬೇಕೆಂಬ ಆಸೆ ಹೊಂದಿದ್ದರು. ಅದೇ ರೀತಿ ಅವರನ್ನು ಬೆಳೆಸಿದ್ದರು. ಆದ್ರೆ ಇಂದು ಧ್ರುವ್​ ಭಾರತದ ಅಂಡರ್​ 19 ಕ್ರಿಕೆಟ್​ ತಂಡಕ್ಕೆ ನಾಯಕನಾಗಿದ್ದಾರೆ.

ಧ್ರುವ್​ಗೆ ತನ್ನ 9ನೇ ವಯಸ್ಸಿನಲ್ಲೇ ಕ್ರಿಕೆಟ್​ನತ್ತ ಆಸಕ್ತಿ ಮೂಡಿತು. ಆತನ ಆಟ ನೋಡಿದ ಜನ ಕೂಡಾ ಆತನನ್ನು ಪ್ರೋತ್ಸಾಹಿಸಿದರು.

ಕ್ರಿಕೆಟ್​ ಕುರಿತು ಧ್ರುವ್​ನ ಆಸಕ್ತಿ ಗಮನಿಸಿದ ತಂದೆ, ಆತನಿಗೆ ಸೂಕ್ತ ತರಬೇತಿ ಕೊಡಿಸಿದರು. ಬಳಿಕ ಕ್ರಿಕೆಟ್​ ಅಕಾಡೆಮಿ ಸೇರಿದ್ದ ಧ್ರುವ್​ ಚಂದ್​ ಜುರೆಲ್ ಉತ್ತಮ ಕ್ರಿಕೆಟ್ ಆಟಗಾರನಾಗಿ ಬೆಳೆದು ನಿಂತರು. ತಮ್ಮ ಮಗನನ್ನು ಸೇನೆಗೆ ಸೇರಿಸಬೇಕೆಂಬ ಆಸೆ ಹೊಂದಿದ್ದ ತಂದೆ-ತಾಯಿ ಇದೀಗ ಆತನನ್ನು ಕ್ರಿಕೆಟರ್​ ಆಗಿ ಕಾಣುತ್ತಿದ್ದಾರೆ.

ಅಂಡರ್​ 19 ಏಷಿಯಾ ಕಪ್​​ನ ಭಾರತ ಕ್ರಿಕೆಟ್​ ತಂಡಕ್ಕೆ ಧ್ರುವ್​ ಅವರನ್ನು ಕ್ಯಾಪ್ಟನ್ ಆಗಿ ಬಿಸಿಸಿಐ ಆಯ್ಕೆ ಮಾಡಿದೆ. ಈಟಿವಿ ಭಾರತದೊಂದಿಗೆ ಮಾತನಾಡಿರುವ ಧ್ರುವ್ ತಂದೆ ನೇಮ್​ ಸಿಂಗ್, ತಾಯಿ ರಜನಿ ಹಾಗೂ ಅಕ್ಕ ನೀರೂ ಈ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.

ಕಾರ್ಗಿಲ್​ ಯುದ್ಧದಲ್ಲಿ ಹೋರಾಡಿದ್ದ ಸೈನಿಕನ ಮಗ ಧ್ರುವ್:
ಧ್ರುವ್​ ತಂದೆ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಾರ್ಗಿಲ್ ಯುದ್ಧದಲ್ಲಿಯೂ ಹೋರಾಡಿದ್ದರು. ತಮ್ಮ ಮಗನೂ ಸೇನೆಗೆ ಸೇರಬೇಕೆಂಬ ಆಸೆ ಹೊಂದಿದ್ದರು. ಹಾಗಾಗಿ ಆರ್ಮಿ ಸ್ಕೂಲ್​ನಲ್ಲಿ ಮಗನಿಗೆ ವಿದ್ಯಾಭ್ಯಾಸ ಕೊಡಿಸಿದ್ದರು. ಆದ್ರೆ ರಜಾದಿನಗಳಲ್ಲಿ ಕ್ರಿಕೆಟ್​ ಆಡಲು ಪ್ರಾರಂಭಿಸಿದ್ದ ಧ್ರುವ್​ಗೆ ಕ್ರಿಕೆಟ್​ನಲ್ಲಿ ಆಸಕ್ತಿ ಮೂಡಿತ್ತು. ಆದರೂ ಶಿಕ್ಷಣ ಹಾಗೂ ಕ್ರಿಕೆಟ್ ಎರಡನ್ನೂ ಸರಿದೂಗಿಸಿಕೊಂಡು, ಕ್ರಿಕೆಟ್​ ಅಭ್ಯಾಸ ನಡೆಸಿದರು. ಇದೀಗ ಅಂಡರ್​ 19 ಏಷ್ಯಾ ಕಪ್​​ನ ಭಾರತ ಕ್ರಿಕೆಟ್​ ತಂಡಕ್ಕೆ ನಾಯಕನಾಗಿ ಧ್ರುವ್​ ಆಯ್ಕೆಯಾಗಿರುವುದು ಖುಷಿ ನೀಡಿದೆ. ಸೈನಿಕರು ದೇಶದ ಗಡಿಯಲ್ಲಿ ದೇಶಸೇವೆ ಸಲ್ಲಿಸಿದರೆ, ತಮ್ಮ ಮಗ ಕ್ರಿಕೆಟ್​ ಮೂಲಕ ದೇಶದ ಸೇವೆ ಮಾಡುತ್ತಿದ್ದಾನೆ ಎಂದು ತಂದೆ ನೇಮ್​ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.

ಧೋನಿ ಪ್ರೇರಣೆ:
ಕ್ರಿಕೆಟ್​ನಲ್ಲಿ ಧ್ರುವ್​ನ ಆಸಕ್ತಿ ನೋಡಿ ನಾನು ಕೂಡ ಪ್ರೋತ್ಸಾಹಿಸಿದೆ. ಧ್ರುವ್ ಧೋನಿಯಂತಯೇ ಆಡುತ್ತಿದ್ದಾನೆ. ಅಂಡರ್​ 19 ಕ್ರಿಕೆಟ್​ ತಂಡಕ್ಕೆ ಧ್ರುವ್​ ನಾಯಕನಾಗಿರುವುದು ಖುಷಿಯಾಗಿದೆ ಎನ್ನುತ್ತಾರೆ ಅವರ ತಾಯಿ ರಜನಿ.

ಇನ್ನು ಧ್ರುವ್​ ಮನೆಯಲ್ಲಿ ಕ್ರಿಕೆಟ್​ ಕುರಿತು ಹೆಚ್ಚು ಮಾತನಾಡದಿದ್ದರೂ, ಮೈದಾನದಲ್ಲಿ ಉತ್ತಮವಾಗಿ ಆಡುತ್ತಾನೆ. ಎಂ​. ಎಸ್.​ ಧೋನಿಯ ನಾಯಕತ್ವ ಗುಣಗಳು ಧ್ರುವ್​ನಲ್ಲಿವೆ. ಧೋನಿಯೇ ಆತನ ಪ್ರೇರಣೆ ಎಂದು ಧ್ರುವ್ ಅಕ್ಕ ನೀರೂ ಹೇಳುತ್ತಾರೆ.

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.