ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ 2000 ರನ್ ಪೂರೈಸಿದ್ದಾರೆ. ಈ ಮೂಲಕ ವೇಗವಾಗಿ ಈ ಸಾಧನೆ ಮಾಡಿದ 3ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಉಮೇಶ್ ಯಾದವ್ ಎಸೆದ ಮೊದಲ ಓವರ್ನಲ್ಲಿ ಬೌಂಡರಿಗಟ್ಟುವ ಮೂಲಕ ರಾಹುಲ್ ಈ ಮೈಲಿಗಲ್ಲನ್ನು ತಲುಪಿದರು. ಈ ಮೂಲಕ ಅತಿ ಕಡಿಮೆ ಇನ್ನಿಂಗ್ಸ್ನಲ್ಲಿ ಈ 2000 ರನ್ ಗಳಿಸಿದ ಭಾರತೀಯ ಹಾಗೂ ವೇಗವಾಗಿ ಈ ಸಾಧನೆ ಮಾಡಿದ 3ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ರಾಹುಲ್ಗಿತ ಮೊದಲು ಸಚಿನ್ ತೆಂಡೂಲ್ಕರ್ 63 ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದರು. ರಾಹುಲ್ 60 ಇನ್ನಿಂಗ್ಸ್ಗಳಲ್ಲಿ 2 ಸಾವಿರ ಪೂರೈಸಿದ್ದಾರೆ.
-
2000 IPL runs for @klrahul11 👏👏#Dream11IPL pic.twitter.com/9lvByyYlqX
— IndianPremierLeague (@IPL) September 24, 2020 " class="align-text-top noRightClick twitterSection" data="
">2000 IPL runs for @klrahul11 👏👏#Dream11IPL pic.twitter.com/9lvByyYlqX
— IndianPremierLeague (@IPL) September 24, 20202000 IPL runs for @klrahul11 👏👏#Dream11IPL pic.twitter.com/9lvByyYlqX
— IndianPremierLeague (@IPL) September 24, 2020
ಒಟ್ಟಾರೆ ಐಪಿಎಲ್ನಲ್ಲಿ ವೇಗವಾಗಿ 2000 ರನ್ ಪೂರೈಸಿರುವ ದಾಖಲೆ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು ಕೇವಲ ಈ ದಾಖಲೆಗೆ ಕೇವಲ 48 ಇನ್ನಿಂಗ್ಸ್ ತೆಗೆದುಕೊಂಡಿದ್ದರು. 2ನೇ ಸ್ಥಾನದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಆಡಿದ್ದ ಶಾನ್ ಮಾರ್ಶ್ 52 ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದರು.
ಉಳಿದಂತೆ, ಶೇನ್ ವಾಟ್ಸನ್(64) ಗೌತಮ್ ಗಂಭೀರ್(68) ಶೇನ್ಐಪಿಎಲ್ ಕಿಂಗ್ ಸುರೇಶ್ ರೈನಾ(69), ಸೆಹ್ವಾಗ್(70),ಶಿಖರ್ ಧವನ್(74) ರಾಹುಲ್ ದ್ರಾವಿಡ್(75), ಧೋನಿ(75), ವಿಲಿಯರ್ಸ್(76)ರೋಹಿತ್ ಶರ್ಮಾ (77) ಗಿಲ್ಕ್ರಿಸ್ಟ್(78),ವಿರಾಟ್ ಕೊಹ್ಲಿ(79) ನಂತರದ ಸ್ಥಾನದಲ್ಲಿದ್ದಾರೆ.