ಬೆಂಗಳೂರು: ಇಷ್ಟು ವರ್ಷಗಳ ಕಾಲ ಐಪಿಎಲ್ ಟ್ರೋಫಿ ಎತ್ತಿ ಹಿಡಿಯದಿದ್ದರೂ ಬೇಸರಪಡದ ಆರ್‌ಸಿಬಿ ಅಭಿಮಾನಿಗಳು ದಕ್ಷಿಣ ಆಫ್ರಿಕಾ ವೇಗಿ ಡೇಲ್ ಸ್ಟೈನ್ರನ್ನು ತಂಡದಿಂದ ಕೈ ಬಿಟ್ಟಿರುವುದಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ.
ಮೂರು ಬಾರಿ ಫೈನಲ್ಗೇರಿದರೂ ಆರ್‌ಸಿಬಿ ಒಮ್ಮೆಯೂ ಐಪಿಎಲ್ ಟ್ರೋಫಿ ಎತ್ತಿ ಹಿಡಿಯಲೇ ಇಲ್ಲ. ಆದರೆ ಎಷ್ಟು ಬಾರಿ ಸೋತರೂ 'ಈ ಸಲ ಕಪ್ ನಮ್ದೆ..' ಎನ್ನುತ್ತಾ ತಂಡವನ್ನು ಹುರಿದುಂಬಿಸೋ ಫ್ಯಾನ್ಸ್, ಆರ್‌ಸಿಬಿ ಫ್ರಾಂಚೈಸಿ ಮೇಲೆ ಮುನಿಸಿಕೊಂಡಿದ್ದಾರೆ. ಸೋಲಿನ ಸರಮಾಲೆ ಕಟ್ಟಿಕೊಂಡಿದ್ದ ಆರ್ಸಿಬಿಯನ್ನು ಕಳೆದ ಬಾರಿ ಗೆಲುವಿನ ಲಯಕ್ಕೆ ಕೊಂಡೊಯ್ದಿದ್ದ ಡೇಲ್ ಸ್ಟೈನ್ರನ್ನು ತಂಡದಿಂದ ಹೊರಹಾಕಿರುವುದೇ ಇದಕ್ಕೆ ಕಾರಣ.
ಆಸ್ಟ್ರೇಲಿಯಾ ವೇಗಿ ನೇಥನ್ ಕೌಲ್ಟರ್ ನೈಲ್ ಗಾಯದ ಕಾರಣ ತಂಡ ಸೇರಿರಲಿಲ್ಲ. ಈ ಸಮಯದಲ್ಲಿ ಸೇಲ್ ಆಗದೆ ಉಳಿದಿದ್ದ ಡೇಲ್ ಸ್ಟೈನ್ರನ್ನು ಆರ್‌ಸಿಬಿ ತಂಡಕ್ಕೆ ಸೇರಿಸಿಕೊಂಡಿತ್ತು. ಡೇಲ್ ಸ್ಟೈನ್ ತಂಡಕ್ಕೆ ಕಾಲಿಟ್ಟ ಕೂಡಲೇ ಬೌಲಿಂಗ್ ಶಕ್ತಿಯೇ ಬದಲಾಗಿತ್ತು. ಇನ್ನೊಂದು ಪಂದ್ಯ ಗೆದ್ದರೆ ಕ್ವಾಲಿಫಯರ್ ಹಂತಕ್ಕೂ ತಲುಪಬಹುದಾದ ಹಂತಕ್ಕೆ ಆರ್‌ಸಿಬಿ ಬಂದಿತ್ತು.
-
#BRINGBACKSTEYNGUN pic.twitter.com/Gkxlj6rucW
— Nishant (@Nishant65090361) November 18, 2019 " class="align-text-top noRightClick twitterSection" data="
">#BRINGBACKSTEYNGUN pic.twitter.com/Gkxlj6rucW
— Nishant (@Nishant65090361) November 18, 2019#BRINGBACKSTEYNGUN pic.twitter.com/Gkxlj6rucW
— Nishant (@Nishant65090361) November 18, 2019
ಇದೀಗ ಟ್ವಿಟ್ಟರ್ನಲ್ಲಿ #bringbacksteyngun ಎಂಬ ಹ್ಯಾಶ್ಟ್ಯಾಗ್ನಲ್ಲಿ ಆರ್‌ಸಿಬಿ ಫ್ರಾಂಚೈಸಿಗೆ ಡಿಸೆಂಬರ್ನಲ್ಲಿ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಸ್ಟೈನ್ರನ್ನು ಖರೀದಿಸಿ ಎಂದು ಮನವಿ ಮಾಡುತ್ತಿದ್ದಾರೆ. ಇವರ ಜೊತೆಯಲ್ಲಿ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯ್ನಿಸ್ ಖರೀದಿಸುವ ಸಲಹೆ ನೀಡಿದ್ದಾರೆ.
ಕಳೆದ ಆವೃತ್ತಿಯಲ್ಲಿ ದುಬಾರಿ ಬೆಲೆ ನೀಡಿದರೂ ಸರಿಯಾದ ಪ್ರದರ್ಶನ ತೋರದ ಹಿನ್ನಲೆ ವಿಂಡೀಸ್ನ ಹೆಟ್ಮೈರ್, ಕಿವೀಸ್ನ ಗ್ರ್ಯಾಂಡ್ಹೋಮ್ ಹಾಗೂ ಸೌಥಿ, ಸ್ಟೋಯ್ನಿಸ್, ಆಫ್ರಿಕಾದ ಸ್ಟೈನ್, ಕ್ಲಾಸೆನ್ರನ್ನು ತಂಡದಿಂದ ಆರ್‌ಸಿಬಿ ಕೈಬಿಟ್ಟಿತ್ತು.
-
#bringbacksteyngun https://t.co/ooaPF2xm1k
— Abi Shek (@AbiShek21671994) November 18, 2019 " class="align-text-top noRightClick twitterSection" data="
">#bringbacksteyngun https://t.co/ooaPF2xm1k
— Abi Shek (@AbiShek21671994) November 18, 2019#bringbacksteyngun https://t.co/ooaPF2xm1k
— Abi Shek (@AbiShek21671994) November 18, 2019
-
Do the Steps in Twitter also ❤🔥#Dalesteyn #Steyn #Viratkohli #bringbacksteyngun #indvban #rcb #ipl #IPL2020 pic.twitter.com/jW8vHXu7q5
— its_.viratkohli18 (@ItsViratkohli18) November 19, 2019 " class="align-text-top noRightClick twitterSection" data="
">Do the Steps in Twitter also ❤🔥#Dalesteyn #Steyn #Viratkohli #bringbacksteyngun #indvban #rcb #ipl #IPL2020 pic.twitter.com/jW8vHXu7q5
— its_.viratkohli18 (@ItsViratkohli18) November 19, 2019Do the Steps in Twitter also ❤🔥#Dalesteyn #Steyn #Viratkohli #bringbacksteyngun #indvban #rcb #ipl #IPL2020 pic.twitter.com/jW8vHXu7q5
— its_.viratkohli18 (@ItsViratkohli18) November 19, 2019