ಲಾಹೋರ್ : ಐಸಿಸಿ ಚಾಂಪಿಯನ್ಸ್ ಟ್ರೋಫಿ 2017ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಫಕರ್ ಜಮಾನ್ 31 ರನ್ ಗಳಿಸಿರುವುದು ಟೂರ್ನಿಯಲ್ಲಿ ತಂಡಕ್ಕೆ ಮಹತ್ವದ ತಿರುವು ನೀಡಿತ್ತು ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.
ಭಾರತ ವಿರುದ್ಧದ ಆರಂಭಿಕ ಪಂದ್ಯಗಳಲ್ಲಿ ಪಾಕಿಸ್ತಾನ ಸತತ ಸೋಲುತ್ತಾ ಬಂದಿತ್ತು. ಈ ಹಿನ್ನೆಲೆ ಅಹ್ಮದ್ ಶೆಹಜಾದ್ ಬದಲು ಫಕರ್ ಅವರನ್ನು ತಂಡಕ್ಕೆ ಕರೆತರಲಾಯಿತು. ಮಳೆಯಿಂದಾಗಿ ಪಂದ್ಯವು ಅನೇಕ ಅಡೆತಡೆಗಳನ್ನು ಎದುರಿಸಿತ್ತು. ಆದರೂ ಅಂತಿಮವಾಗಿ ಪಾಕಿಸ್ತಾನ 19 ರನ್‌ಗಳಿಂದ ಜಯ ಸಾಧಿಸಿತು. ಯಾಕೆಂದರೆ 27ನೇ ಓವರ್‌ನ ಆರಂಭದಲ್ಲಿ 119/3 ರನ್‌ಗಳಿದ್ದಾಗ ಮಳೆಯಿಂದ ಆಟ ಕೊನೆಗೊಂಡಿತು ಎಂದು ಹಕ್ ನೆನಪಿಸಿಕೊಂಡಿದ್ದಾರೆ.
ಕೆಲವೊಮ್ಮೆ ಒಂದು ಇನ್ನಿಂಗ್ಸ್ ನಿಮ್ಮನ್ನು ಕೆಳಗಿಳಿಸಬಹುದು ಅಥವಾ ನಿಮ್ಮನ್ನು ಮೇಲಕ್ಕೆತ್ತಬಹುದು. ಚಾಂಪಿಯನ್ಸ್ ಟ್ರೋಫಿಯಲ್ಲಿ ಫಕರ್ ಜಮಾನ್ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 37 (31) ರನ್ ಗಳಿಸಿದ್ದರು, ಆದರೆ ಆ ಪಂದ್ಯದಲ್ಲಿ ಅವರು ಬ್ಯಾಟಿಂಗ್ ಮಾಡಿದ ಆಕ್ರಮಣಶೀಲತೆಯು ಸಂಪೂರ್ಣವಾಗಿ ತಂಡದ ಸ್ಥೈರ್ಯವನ್ನು ಬದಲಾಯಿಸಿತು ಎಂದು ಹಕ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಿಳಿಸಿದ್ದಾರೆ.
ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ಪ್ರಬಲ ಇಂಗ್ಲೆಂಡ್ ತಂಡವನ್ನು ಸೋಲಿಸಿ ಫೈನಲ್‌ನಲ್ಲಿ ಭಾರತವನ್ನು ಮತ್ತೆ ಎದುರಿಸಿತು. ಈ ಪಂದ್ಯದುದ್ದಕ್ಕೂ ಪಾಕ್ ತಂಡದ ಆಟಗಾರರು ಭಾರತದ ವಿರುದ್ಧ ಉತ್ತಮ ಹಿಡಿತ ಸಾಧಿಸಿದ್ದರು. ಕೊನೆಗೆ 180 ರನ್‌ಗಳಿಂದ ಸೋಲಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದೆವು ಎಂದು ಹಕ್ ಹೇಳಿದರು.
ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಪಾಕಿಸ್ತಾನ ತಂಡ ಸಜ್ಜಾಗಿರುವ ನಡುವೆ ಪಿಸಿಬಿ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಆಟಗಾರರಲ್ಲಿ ಫಕರ್ ಜಮಾನ್ ಕೂಡ ಒಬ್ಬರು.