ರೊಹ್ಟಕ್: ಕೇವಲ 15 ವರ್ಷ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಂಚುತ್ತಿರುವ ಹರಿಯಾಣದ ಶೆಫಾಲಿ ವರ್ಮಾ ಸಚಿನ್ ತೆಂಡೂಲ್ಕರ್ರನ್ನು ಅನುಕರಣೆ ಮಾಡುತ್ತಿದ್ದಾರೆ.
ವಿಂಡೀಸ್ ವಿರುದ್ಧದ ಕಳೆದ ಎರಡು ಟಿ20 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಕ್ರಿಕೆಟ್ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿರುವ ಶೆಫಾಲಿ ವರ್ಮಾ ಕ್ರಿಕೆಟ್ ಆಯ್ದುಕೊಂಡಿರುವುದೇ ಸಚಿನ್ರಿಂದಾಗಿಯಂತೆ. ಸ್ವತಃ ಈ ವಿಚಾರವನ್ನು ಈಟಿವಿ ಭಾರತ್ ನಡೆಸಿರುವ ಸಂದರ್ಶನದಲ್ಲಿ ಶೆಫಾಲಿ ಅವರ ಪೋಷಕರು ತಿಳಿಸಿದ್ದಾರೆ.
ವಿಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ 30 ವರ್ಷಗಳಿಂದ ಸಚಿನ್ ಹೆಸರಿನಲ್ಲಿದ್ದ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು ಈಗ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ ಶೆಫಾಲಿ.
ಈಟಿವಿ ಭಾರತ ಜೊತೆ ಮಾತನಾಡಿದ ಶೆಫಾಲಿ ತಾಯಿ ಪರ್ವೀನ್ ಬಾಲಾ ಮತ್ತು ಅವರ ತಂದೆ ಸಂಜೀವ್ ವರ್ಮಾ ಅವರು ತಮ್ಮ ಮಗಳು ಆರಂಭದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಶಸ್ಸುನ್ನು ಕಾಣುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಶೆಫಾಲಿ ಸಚಿನ್ ತೆಂಡೂಲ್ಕರ್ ಅವರ ಬಹುದೊಡ್ಡ ಅಭಿಮಾನಿಯಾಗಿದ್ದು, ಅವಳು ಕ್ರಿಕೆಟ್ ಆಟವನ್ನು ಆಯ್ದಕೊಳ್ಳಲು ಸಚಿನ್ ಅವರೇ ಕಾರಣ. ಅವರೇ ಶೆಫಾಲಿಗೆ ಸ್ಫೂರ್ತಿಯಾಗಿದ್ದಾರೆ ಎಂದಿದ್ದಾರೆ.
ಶೆಫಾಲಿ ತಂದೆಗೆ ತಮ್ಮ ಮಗಳು ಸಚಿನ್ ರಂತೆ ಕ್ರಿಕೆಟ್ನಲ್ಲಿ ದೊಡ್ಡ ಹೆಸರು ಮಾಡಬೇಕು ಹಾಗೂ ಹಲವಾರು ದಾಖಲೆಗಳನ್ನು ಸೃಷ್ಟಿಸಬೇಕು ಎಂದು ಮಗಳಿಗೆ ಸ್ಪೂರ್ತಿ ತುಂಬುವುದರ ಜೊತೆ ಆಶೀರ್ವಾದ ಸಹ ಮಾಡಿದ್ದಾರೆ.