ETV Bharat / sports

ಎಕ್ಸ್​ಕ್ಲೂಸಿವ್​: ಸುಂದರ್​ ಟೆಸ್ಟ್​ ಆಡಬೇಕೆಂಬುದು ಕುಟುಂಬದ ಕನಸಾಗಿತ್ತು... ಸಹೋದರಿ ಶೈಲಜ ಸಂತಸ - ಭಾರತ vs ಆಸ್ಟ್ರೇಲಿಯಾ ಟೆಸ್ಟ್​ ಸರಣಿ

ಈ ಟಿವಿ ಭಾರತ ನಡೆಸಿದ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಮಾತನಾಡಿರುವ ವಾಷಿಂಗ್ಟನ್ ಸುಂದರ್​​ ಅವರ ಸಹೋದರಿ ಶೈಲಜ, ಬ್ರಿಸ್ಬೇನ್​ನಲ್ಲಿ ತಮ್ಮ ಸಹೋದರನ ಪ್ರದರ್ಶನ ತಮ್ಮ ಇಡೀ ಕುಟುಂಬಕ್ಕೆ ಅತೀವ ಸಂತಸವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ವಾಷಿಂಗ್ಟನ್ ಸುಂದರ್ ಸಹೋದರಿ ಶೈಲಜ ಸಂದರ್ಶನ
ವಾಷಿಂಗ್ಟನ್ ಸುಂದರ್ ಸಹೋದರಿ ಶೈಲಜ ಸಂದರ್ಶನ
author img

By

Published : Jan 21, 2021, 4:53 PM IST

ಚೆನ್ನೈ: ಭಾರತ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ಜಯ ಸಾಧಿಸಿದೆ. ಆಸೀಸ್​ ಭದ್ರಕೋಟೆ ಎನ್ನಲಾಗುತ್ತಿದ್ದ ಬ್ರಿಸ್ಬೇನ್​ ಗಬ್ಬಾದಲ್ಲಿ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ 2-1ರಲ್ಲಿ ಸರಣಿ ವಶಪಡಿಸಿಕೊಂಡಿದೆ. ಈ ಸರಣಿ ಗೆಲುವಿನಲ್ಲಿ ತಮಿಳುನಾಡಿನ ಆಲ್​ರೌಂಡರ್​ ವಾಷಿಂಗ್ಟನ್​ ಪ್ರಮುಖ ಪಾತ್ರವಹಿಸಿದ್ದಕ್ಕೆ ಅವರ ಕುಟುಂಬ ಸಂಭ್ರಮ ವ್ಯಕ್ತಪಡಿಸಿದೆ.

ಈ ಟಿವಿ ಭಾರತ ನಡೆಸಿದ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಮಾತನಾಡಿರುವ ವಾಷಿಂಗ್ಟನ್ ಸುಂದರ್​​ ಅವರ ಸಹೋದರಿ ಶೈಲಜ, ಬ್ರಿಸ್ಬೇನ್​ನಲ್ಲಿ ತಮ್ಮ ಸಹೋದರನ ಪ್ರದರ್ಶನ ತಮ್ಮ ಇಡೀ ಕುಟುಂಬಕ್ಕೆ ಅತೀವ ಸಂತಸವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

"ಇದೊಂದು ಅತ್ಯಂತ ವಿಶೇಷ ಕ್ಷಣವಾಗಿತ್ತು. ಇದು ನನಗೆ ಮಾತ್ರವಲ್ಲ, ನಮ್ಮ ಇಡೀ ಕುಟುಂಬಕ್ಕೆ ಸಂಭ್ರಮದ ಕ್ಷಣವಾಗಿತ್ತು. ಇದೊಂದು ಭಾರತ ತಂಡದ ಐತಿಹಾಸಿಕ ಗೆಲುವಾಗಿದ್ದು, ಅದರಲ್ಲಿ ವಾಷಿಂಗ್ಟನ್​ ಕೊಡುಗೆ ನೀಡಿರುವುದು ನಮಗೆ ಹೆಮ್ಮೆ ತಂದಿದೆ." ಎಂದಿದ್ದಾರೆ.

ಅವರು (ವಾಷಿ) ತಾವು ಕೊನೆಯ ಟೆಸ್ಟ್​ನಲ್ಲಿ ಭಾರತ ತಂಡದ ಪರ ಆಡುತ್ತಿದ್ದೇನೆ ಎಂದು ಹೇಳಿದಾಗ, ನಾವೆಲ್ಲ ತುಂಬಾ ಉತ್ಸಾಹಗೊಂಡಿದ್ದೆವು. ನಮಗೆ ಅವರು ಎಂದಾದರೂ ಒಂದು ದಿನ ಭಾರತ ತಂಡದ ಪರ ಟೆಸ್ಟ್​ ಕ್ರಿಕೆಟ್​ ಆಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೆವು. ಇದೀಗ ನಮ್ಮೆಲ್ಲರ ಕನಸು ನನಸಾಗಿದೆ. ಅದರಲ್ಲೂ ಅವರು ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ ಆಡಿದ ರೀತಿ ಅದ್ಭುತವಾಗಿತ್ತು" ಎಂದು ಶೈಲಜಾ ತಿಳಿಸಿದ್ದಾರೆ.

ವಾಷಿಂಗ್ಟನ್ ಸುಂದರ್ ಸಹೋದರಿ ಶೈಲಜ ಸಂದರ್ಶನ

ಸುದೀರ್ಘ ಪ್ರವಾಸದ ನಂತರ ಮನೆಗೆ ಮರಳಿದ ಸುಂದರ್​ಗೆ ಹೇಗೆ ಬರಮಾಡಿಕೊಳ್ಳುವಿರಿ ಎಂದು ಕೇಳಿದ್ದಕ್ಕೆ, "ಅವರು ಮನೆಗೆ ಯಾವಾಗ ಬರುತ್ತಾರೆ ಎಂಬುದನ್ನೇ ಕಾಯುತ್ತಿರುವೆವು. ಸುಮಾರು ಆರು ತಿಂಗಳು ಅವರು ತಮ್ಮ ಪಂದ್ಯಗಳಿಗಾಗಿ ಪ್ರವಾಸ ಮಾಡುತ್ತಿದ್ದಾರೆ. ಇದೀಗ ನಾವು ಅವರು ತಿನ್ನಲು ಏನು ಬಯಸುತ್ತಾರೋ ಅದನ್ನು ಮಾಡಿಕೊಡುತ್ತೇವೆ ಹಾಗೂ ನಮ್ಮ ಜೊತೆ ಸಮಯ ಕಳೆಯುವುದನ್ನು ಬಯಸುತ್ತೇವೆ. ಇಂಗ್ಲೆಂಡ್​ ಸರಣಿಗೂ ಮುನ್ನ ಅವರು ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ" ಎಂದು ಹೇಳಿದ್ದಾರೆ.

ವಿಶೇಷವೆಂದರೆ, ಸುಂದರ್​ ಕೇವಲ ನೆಟ್​ ಬೌಲರ್ ಆಗಿ​ 2020-21ರ ಆಸೀಸ್​ ಪ್ರವಾಸಕ್ಕೆ ತೆರಳಿದ್ದರು. ಆದರೆ ಕೆಲವು ಬೌಲರ್​ಗಳು ಗಾಯಗೊಂಡಿದ್ದರಿಂದ ಅನಿವಾರ್ಯವಾಗಿ ಕೊನೆಯ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಆದರೆ ತಮ್ಮ ಅದೃಷ್ಟದ ಆಯ್ಕೆಯನ್ನು ಸದುಪಯೋಗಪಡಿಸಿಕೊಂಡ ಯುವ ಬೌಲರ್ ಸ್ಟೀವ್​ ಸ್ಮಿತ್​ ಸೇರಿದಂತೆ ಪಂದ್ಯದಲ್ಲಿ 4 ವಿಕಟ್ ಪಡೆದರು. ಜೊತೆಗೆ ಬ್ಯಾಟಿಂಗ್​ನಲ್ಲೂ 67 ಮತ್ತು 22 ರನ್ ​ಗಳಿಸಿ ಬ್ರಿಸ್ಬೇನ್​ ಟೆಸ್ಟ್​ನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದನ್ನು ಓದಿ:ರಾಮ ಮಂದಿರ ನಿರ್ಮಾಣಕ್ಕೆ ಒಂದು ಕೋಟಿ ರೂ. ದೇಣಿಗೆ ನೀಡಿದ ಗೌತಮ್​ ಗಂಭೀರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.