ETV Bharat / sports

ಎಕ್ಸ್​ಕ್ಲೂಸಿವ್... ಚೆಂಡು ಹೊಳೆಯುವಂತೆ ಮಾಡಲು ಉಗುಳಿನ ಬದಲು, ಬೆವರು ಬಳಸಿ: ಶ್ರೀಶಾಂತ್​ - ಚೆಂಡು ಹೊಳೆಯಲು ಬೆವರು ಬಳಸಬಹುದು

ಉಗುಳು ನಿಷೇಧವು ಕ್ರಿಕೆಟ್ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಯಾರ್ಕರ್​ ಬೌಲ್​ ಮಾಡಬೇಕಾದರೆ ಅದು ರಿವರ್ಸ್​ ಸ್ವಿಂಗ್​ ಮೂಲಕ ಮಾತ್ರವೇ ಹೊರತು ಸಾಮಾನ್ಯ ಸ್ವಿಂಗ್​ ಮೂಲಕ ಅಲ್ಲ ಎಂದು ಕ್ರಿಕೆಟರ್​ ಶ್ರೀಶಾಂತ್​ ತಿಳಿಸಿದ್ದಾರೆ.

ಶ್ರೀಶಾಂತ್​ ಸಂದರ್ಶನ
ಶ್ರೀಶಾಂತ್​ ಸಂದರ್ಶನ
author img

By

Published : Jun 15, 2020, 6:03 PM IST

ಹೈದರಾಬಾದ್​: ಚೆಂಡು ಹೊಳೆಡಯುವಂತೆ ಮಾಡಲು ಉಗುಳು ಹಚ್ಚುವ ಅಗತ್ಯವಿಲ್ಲ, ಅದರ ಬದಲು ಬೆವರನ್ನು ಬಳಸಬಹುದು ಎಂದು ಈ ಟಿವಿ ಭಾರತಕ್ಕೆ ನೀಡಿದ ಎಕ್ಸ್​ಕ್ಲೂಸಿವ್​ ಸಂದರ್ಶನದಲ್ಲಿ ಕ್ರಿಕೆಟರ್​ ಶ್ರೀಶಾಂತ್​ ತಿಳಿಸಿದ್ದಾರೆ.

ಕೋವಿಡ್​ 19 ಭೀತಿಯಿಂದ ಚೆಂಡು ಹೊಳೆಯುವಂತೆ ಮಾಡಲು ಉಗುಳು ಬಳಸುವುದನ್ನಐಸಿಸಿ ನಿಷೇಧಿಸಿತ್ತು. ಈ ವಿಚಾರದ ಬಗ್ಗೆ ಹಲವು ಮಾಜಿ, ಹಾಲಿ ಕ್ರಿಕೆಟಿಗರು ಪರ ವಿರೋಧ ಹೇಳಿಕೆ ನೀಡಿದ್ದರು. ಹಾಗೆಯೆ ಪಾಕಿಸ್ತಾದ ಮಾಜಿ ವೇಗಿ ವಾಸಿಮ್​ ಅಕ್ರಮ್​ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದು,; ಉಗುಳು ಬಳಕೆ ನಿಷೇಧದಿಂದ ಬೌಲರ್​ಗಳಿ ರೋಬೋಟ್​ಗಳಾಗುತ್ತಾರೆ ಎಂದು ಹೇಳಿಕೆ ನೀಡಿದ್ದರು.

‘ನಾನು ಹೇಳುವುದೇನೆಂದರೆ ಕೊರೊನಾ ವೈರಸ್​ಗೆ ಮುಂಚಿತವಾಗಿ ಅವರು ನಿವೃತ್ತಿಯಾಗಿರುವುದಕ್ಕೆ ನಾನು ದೇವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಬಹಶಃ ಜನರು ಕಮೆಂಟ್​ ಮಾಡುವಾಗ ಅಥವಾ ಲೈವ್​ ಸೆಷನ್​​ಗಳಲ್ಲಿ ಸುದ್ದಿ ಮಾಡಲು ಈ ರೀತಿ ಏನಾದರೂ ಹೇಳಬಹುದು. ಆದರೆ ನಾನು ಹಾಗೆ ಹೇಳುವುದಿಲ್ಲ’ ಎಂದಿದ್ದಾರೆ.

ಶ್ರೀಶಾಂತ್​ ಸಂದರ್ಶನ

ಉಗುಳು ನಿಷೇಧವು ಕ್ರಿಕೆಟ್ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದರೆ ಯಾರ್ಕರ್​ ಬೌಲ್​ ಮಾಡಬೇಕಾದರೆ ಅದು ರಿವರ್ಸ್​ ಸ್ವಿಂಗ್​ ಮೂಲಕ ಮಾತ್ರವೇ ಹೊರತು ಸಾಮಾನ್ಯ ಸ್ವಿಂಗ್​ ಮೂಲಕ ಅಲ್ಲ. ಬೆವರಿನಿಂದ ಚೆಂಡನ್ನು ನಿರ್ವಹಣೆ ಮಾಡಬಹುದು. ಆದರೆ ಪ್ರಸ್ತುತ ನಾವು ಸಾವು-ಬದುಕಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ಎಲ್ಲರೂ ಉಗುಳು ನಿಷೇಧದ ಬಗ್ಗೆ ಚರ್ಚಿಸಬೇಕಾಗಿದೆ ಎಂದು ಶ್ರೀಶಾಂತ್ ಹೇಳಿದ್ದಾರೆ.

S Sreesanth
ಎಸ್​ ಶ್ರೀಶಾಂತ್​

ಯಾವುದೇ ಬೌಲರ್​ ತನ್ನ ಮೇಲೆ ವಿಶ್ವಾಸವನ್ನಿಟ್ಟು ಒಳ್ಳೆಯ ಪ್ರದೇಶಗಳಲ್ಲಿ ಬೌಲಿಂಗ್​ ಮಾಡಿದರೆ ಖಂಡಿತವಾಗಿ ಯಶಸ್ಸು ಪಡೆಯುತ್ತಾನೆ ಮತ್ತು ಇಲ್ಲಿ ಯಾರೂ ರೋಬೋಟ್​ಗಳಾಗುವುದಿಲ್ಲ ಎಂದು ಕೇರಳದ ವೇಗಿ ಹೇಳಿದ್ದಾರೆ.

ಇನ್ನು ಪ್ರಥಮ ದರ್ಜೆ ಕ್ರಿಕೆಟ್​ಗೆ ಮರಳಲಿರುವ ಶ್ರೀಶಾಂತ್​ ತಾವೂ ಕ್ರಿಕೆಟ್​ಗೆ ಮರಳುವ ವಿಚಾರದ ಬಗ್ಗೆ ಬಿಸಿಸಿಐ ಆಧ್ಯಕ್ಷರೊಂದಿಗೆ ಮಾತನಾಡಿದ್ದೀರ ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಸೌರವ್​ ಗಂಗೂಲಿಯವರೊಂದಿಗೆ ಮಾತನಾಡದಿದ್ದರೂ ಬಿಸಿಸಿಐ ಜಂಟಿ ಕಾರ್ಯದರ್ಶಿ ಹಾಗೂ ಕ್ರಿಕೆಟ್​ ಸಂಘದ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ನನ್ನ ಮೇಲೆ ಗಮನ ಹರಿಸಬೇಕೆಂದು ದಾದಾ ಅವರಿಗೆ ತಿಳಿಸಿದ್ದಾರಂತೆ ಎಂದು ಶ್ರೀಶಾಂತ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.