ನವದೆಹಲಿ: 2017ರ ಐಪಿಎಲ್ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಟಿ. ನಟರಾಜನ್ರನ್ನು ಆಯ್ಕೆ ಮಾಡಿದಾಗ ಎಲ್ಲರೂ ನನ್ನನ್ನು ಪ್ರಶ್ನಿಸಿದ್ದರು ಎಂದು ಭಾರತ ತಂಡದ ಮಾಜಿ ನಾಯಕ ವಿರೇಂದ್ರ ಸೆಹ್ವಾಗ್ ಬಹಿರಂಗಪಡಿಸಿದ್ದಾರೆ.
2017ರ ಟಿಎನ್ಪಿಎಲ್ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ನಟರಾಜನ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸೇರ್ಪಡೆಗೊಳ್ಳಲು ಕೋಚ್ ಆಗಿದ್ದ ಸೆಹ್ವಾಗ್ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಈತನ ಖರೀದಿಗೆ ಕೆಲವರು ಅವರನ್ನು ಪ್ರಶ್ನಿಸಿದ್ದರು ಎಂದು ಸೋನಿ ನೆಟ್ವರ್ಕ್ ಕಾರ್ಯಕ್ರಮದಲ್ಲಿ ವೀಕ್ಷಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತಿರಿಸುವ ವೇಳೆ ತಿಳಿಸಿದ್ದಾರೆ.
ಭಾರತ ತಂಡದ ಪರ ನಟರಾಜನ್ ಪದಾರ್ಪಣೆಯಾಗಿದ್ದರ ಬಗ್ಗೆ ನಿಮ್ಮ ಅಭಿಪ್ರಾಯ ಹೇಗಿದೆ ಎಂದು ಕೇಳಿದ್ದಕ್ಕೆ ಸೆಹ್ವಾಗ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
" ಆತ ಭಾರತ ತಂಡಕ್ಕೆ ಆಡುವುದನ್ನು ನೋಡಲು ಸಂತೋಷವಾಗುತ್ತಿದೆ. ಏಕೆಂದರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಐಪಿಎಲ್ ಹರಾಜಿನಲ್ಲಿ ಖರೀದಿಸಿದ ವೇಳೆ ಪ್ರತಿಯೊಬ್ಬರು ನನ್ನನ್ನು ಪ್ರಶ್ನಿಸಿದ್ದರು. ಒಂದು ದೇಶೀಯ ಪಂದ್ಯವನ್ನು ಆಡದ ಆಟಗಾರನನ್ನು ಕೇವಲ ಟಿಎನ್ಪಿಎಲ್ನಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಅಷ್ಟು ದೊಡ್ಡ ಮೊತ್ತಕ್ಕೆ ಖರೀದಿಸಿದ್ದರಿಂದ ನನಗೆ ಕೆಲವು ಪ್ರಶ್ನೆಗಳು ಎದುರಾಗಿದ್ದವು " ಎಂದು ವಿವರಿಸಿದ್ದಾರೆ.
-
Welcome to international cricket @Natarajan_91.
— BCCI (@BCCI) December 2, 2020 " class="align-text-top noRightClick twitterSection" data="
A big wicket on debut 👏👏
Live - https://t.co/V0mKhkApR4 #AUSVIND pic.twitter.com/p02xVlI74u
">Welcome to international cricket @Natarajan_91.
— BCCI (@BCCI) December 2, 2020
A big wicket on debut 👏👏
Live - https://t.co/V0mKhkApR4 #AUSVIND pic.twitter.com/p02xVlI74uWelcome to international cricket @Natarajan_91.
— BCCI (@BCCI) December 2, 2020
A big wicket on debut 👏👏
Live - https://t.co/V0mKhkApR4 #AUSVIND pic.twitter.com/p02xVlI74u
ಇದನ್ನೂ ಓದಿ: ಆಸ್ಟ್ರೇಲಿಯಾ ತಂಡಕ್ಕೆ ಟಿ-20 ಸರಣಿಯಲ್ಲಿ ಕಠಿಣ ಸವಾಲು ನೀಡಲು ಸಜ್ಜಾದ ಸಂಘಟಿತ ವಿರಾಟ್ ಪಡೆ
ನಟರಾಜನ್ ಅವರನ್ನು ಖರೀದಿಸಲು ತಮಗೆ ಕೆಲವು ತಮಿಳುನಾಡಿನ ರಣಜಿ ಆಟಗಾರರು ನನಗೆ ಶಿಪಾರಸು ಮಾಡಿದ್ದರು. ಏಕೆಂದರೆ ಅವರು ಡೆತ್ ಓವರ್ಗಳಲ್ಲಿ ಉತ್ತಮ ಯಾರ್ಕರ್ಗಳನ್ನು ಪ್ರಯೋಗಿಸುವುದರಲ್ಲಿ ಸಮರ್ಥರಾಗಿದ್ದರು ಎಂದು ಸೆಹ್ವಾಗ್ ನೆನಪಿಸಿಕೊಂಡಿದ್ದಾರೆ.
" ನಾನು ದುಡ್ಡಿನ ಬಗ್ಗೆ ಆಲೋಚನೆ ಮಾಡಲಿಲ್ಲ. ಏಕೆಂದರೆ ಅಲ್ಲಿ ಪ್ರತಿಭೆಯಿತ್ತು. ಆ ಸಂದರ್ಭದಲ್ಲಿ ನಮ್ಮ ತಂಡದಲ್ಲಿ ಕೆಲವು ತಮಿಳುನಾಡು ಕ್ರಿಕೆಟಿಗರಿದ್ದರು. ನಟರಾಜನ್ ಸ್ಲಾಗ್ ಓವರ್ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುವ ಮತ್ತು ಪರಿಪೂರ್ಣ ಯಾರ್ಕರ್ ಪ್ರಯೋಗಿಸುವ ಬೌಲರ್ " ಎಂದು ಅವರು ಮಾಹಿತಿ ನೀಡಿದ್ದರೆಂದು ಯಾರ್ಕರ್ ಕಿಂಗ್ ಆಯ್ಕೆಗೆ ಕಾರಣವಾದ ಅಂಶವನ್ನು ವಿವರಿಸಿದ್ದಾರೆ.
ಆತನ ವಿಡಿಯೋಗಳನ್ನು ನೋಡಿದ ಮೇಲೆ ಆತನನ್ನು ಖರೀದಿಸಬೇಕೆಂದು ಬಯಸಿದೆ. ಎಕೆಂದರೆ ನಮ್ಮಲ್ಲಿ ಡೆತ್ ಓವರ್ ಎಸೆಯುವ ಬೌಲರ್ಗಳ ಕೊರತೆಯಿತ್ತು . ದುರದೃಷ್ಟವಶಾತ್ ಆ ವರ್ಷ ಅವರು ಗಾಯಕ್ಕೆ ತುತ್ತಾಗಿದ್ದರಿಂದ ಅವರು ಸಾಕಷ್ಟು ಪಂದ್ಯಗಳಲ್ಲಿ ಆಡಲಾಗಲಿಲ್ಲ. ಆದರೆ, ಅವರು ಆಡಿದ ಒಂದು ಪಂದ್ಯವನ್ನು ಮಾತ್ರ ನಾವು ಗೆದ್ದಿದ್ದೆವು, ಉಳಿದ ಎಲ್ಲ ಪಂದ್ಯಗಳಲ್ಲಿ ಸೋಲುಕಂಡಿವೆ ಎಂದು ಸೆಹ್ವಾಗ್ ಹೇಳಿದ್ದಾರೆ.