ಲಂಡನ್: ಫುಟ್ಬಾಲ್ ಇತಿಹಾಸದಲ್ಲಿ ಇಂಗ್ಲೆಂಡ್ ತಂಡ ಗೆದ್ದಿರುವ ಏಕೈಕ ವಿಶ್ವಕಪ್ ತಂಡದ ಭಾಗವಾಗಿದ್ದ ಹಾಗೂ ಲೀಡ್ಸ್ ಯುನೈಟೆಡ್ ಕ್ಲಬ್ನ ಡಿಫೆಂಡರ್ ಜಾಕ್ ಚಾರ್ಲ್ಟನ್ ತಮ್ಮ 85ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.
ದೀರ್ಘಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಚಾರ್ಲ್ಟನ್ ಶುಕ್ರವಾರ ಸಂಜೆ ನಿಧನರಾಗಿದ್ದಾರೆಂದು ಲೀಡ್ಸ್ ಯುನೈಟೆಬ್ ಕ್ಲಬ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಸಿದೆ.
ಚಾರ್ಲ್ಟನ್ ನಿಧನರಾದ ಸುದ್ದಿಯನ್ನು ಕೇಳಿ ತೀವ್ರ ದು:ಖವಾಗಿದೆ. 23 ವರ್ಷಗಳ ಕಾಲ ಲೀಡ್ಸ್ ಯುನೈಟೆಡ್ನ ಭಾಗವಾಗಿದ್ದ ಅವರು ಅನಾರೋಗ್ಯದಿಂದ ತಮ್ಮ 85ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಅಗಲಿದ್ದಾರೆ. ಅವರು ತಮ್ಮ 23 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಕ್ಲಬ್ ಪರ 773 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಅವರೊಬ್ಬ ಸಾರ್ವಕಾಲಿಕ ಶ್ರೇಷ್ಠ ಡೆಫೆಂಡರ್ ಎಂದು ಕ್ಲಬ್ ತಿಳಿಸಿದೆ.
ಚಾರ್ಲ್ಟನ್ 1966ರ ಫುಟ್ಬಾಲ್ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಆಡಿದ್ದ ಎಲ್ಲಾ ಪಂದ್ಯಗಳಲ್ಲಿಯೂ ಕಾಣಿಸಿಕೊಂಡಿದ್ದರು. ಅವರು ಪ್ರತಿನಿಧಿಸಿದ ಎಲ್ಲಾ ಪಂದ್ಯಗಳಲ್ಲೂ ಇಂಗ್ಲೆಂಡ್ ಜಯ ಸಾಧಿಸಿತ್ತು. ಫೈನಲ್ನಲ್ಲಿ ಪಶ್ಚಿಮ ಜರ್ಮನಿಯಲ್ಲಿ 4-2 ಗೋಲುಗಳ ಅಂತರದಲ್ಲಿ ಮಣಿಸಿ ಜಯ ಸಾಧಿಸಿತ್ತು.