ETV Bharat / sports

ಇಂಗ್ಲೆಂಡ್​-ವಿಂಡೀಸ್‌ ಅಂತಿಮ ಟೆಸ್ಟ್: ಮೂರು ದಶಕಗಳ ಬಳಿಕ ಇತಿಹಾಸ ಸೃಷ್ಟಿಸುವುದೇ ವಿಂಡೀಸ್​? - ರಖೀಮ್​ ಕಾರ್ನ್​ವಲ್

ವೆಸ್ಟ್​ ಇಂಡೀಸ್​ ತಂಡ ಇಂಗ್ಲೆಂಡ್​ ನೆಲದಲ್ಲಿ 1988ರಲ್ಲಿ ಕೊನೆಯ ಬಾರಿ ಟೆಸ್ಟ್​ ಸರಣಿ ಗೆದ್ದ ಸಾಧನೆ ಮಾಡಿದೆ. ಅಲ್ಲಿಂದೀಚೆಗೆ ಆಂಗ್ಲರ ನೆಲದಲ್ಲಿ ಟೆಸ್ಟ್​ ಸರಣಿ ಗೆಲ್ಲಲಾಗದ ವಿಂಡೀಸ್‌ ಟೀಂಗೆ ಈ ಬಾರಿ ಅದ್ಭುತ ಅವಕಾಶ ದೊರೆತಿದೆ. ಮೊದಲ ಟೆಸ್ಟ್​ನಲ್ಲಿ ಗೆದ್ದಿದ್ದ ಹೋಲ್ಡರ್​ ಪಡೆ ಎರಡನೇ ಟೆಸ್ಟ್​ನಲ್ಲಿ ಡ್ರಾ ಸಾಧಿಸಬಹುದಾದ ಪಂದ್ಯದಲ್ಲಿ ನೀರಸ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ 114 ರನ್​ಗಳ ಸೋಲು ಕಂಡಿತ್ತು.

ಇಂಗ್ಲೆಂಡ್​ -ವೆಸ್ಟ್​ ಇಂಡೀಸ್​ ಅಂತಿಮ ಟೆಸ್ಟ್

author img

By

Published : Jul 23, 2020, 7:33 PM IST

ಮ್ಯಾಂಚೆಸ್ಟರ್: ಇಂಗ್ಲೆಂಡ್​ ಹಾಗೂ ವೆಸ್ಟ್​ ಇಂಡೀಸ್​ ನಡುವಿನ 3ನೇ ಟೆಸ್ಟ್​ ಪಂದ್ಯ ನಾಳೆಯಿಂದ ಮ್ಯಾಂಚೆಸ್ಟರ್​ನ ಎಮಿರೇಟ್ಸ್​ ಓಲ್ಡ್​ ಟ್ರಾಫೋರ್ಡ್​ನಲ್ಲಿ ನಡೆಯಲಿದೆ. ಎರಡೂ ತಂಡಗಳಿಗೂ ಸರಣಿ ಗೆಲ್ಲಲು ಈ ಪಂದ್ಯ ನಿರ್ಣಾಯಕವಾಗಿದೆ.

ವೆಸ್ಟ್​ ಇಂಡೀಸ್​ ತಂಡ ಇಂಗ್ಲೆಂಡ್​ ನೆಲದಲ್ಲಿ 1988ರಲ್ಲಿ ಕೊನೆಯ ಬಾರಿ ಟೆಸ್ಟ್​ ಸರಣಿ ಗೆದ್ದ ಸಾಧನೆ ಮಾಡಿದೆ. ಅಲ್ಲಿಂದೀಚೆಗೆ ಆಂಗ್ಲರ ನೆಲದಲ್ಲಿ ಟೆಸ್ಟ್​ ಸರಣಿ ಗೆಲ್ಲಲಾಗದ ವಿಂಡೀಸ್‌ ಟೀಂಗೆ ಈ ಬಾರಿ ಅದ್ಭುತ ಅವಕಾಶ ದೊರೆತಿದೆ. ಮೊದಲ ಟೆಸ್ಟ್​ನಲ್ಲಿ ಗೆದ್ದಿದ್ದ ಹೋಲ್ಡರ್​ ಪಡೆ ಎರಡನೇ ಟೆಸ್ಟ್​ನಲ್ಲಿ ಡ್ರಾ ಸಾಧಿಸಬಹುದಾದ ಪಂದ್ಯದಲ್ಲಿ ನೀರಸ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ 114 ರನ್​ಗಳ ಸೋಲುಕಂಡಿತ್ತು.

ಇಂಗ್ಲೆಂಡ್​ ತಂಡಕ್ಕೆ ಸ್ಟೋಕ್ಸ್​ ಆಲ್​ರೌಂಡರ್​ ಆಟದ ಬಲದ ಜೊತೆಗೆ ಅಂತಿಮ ಟೆಸ್ಟ್​ನಲ್ಲಿ ಜೋಫ್ರಾ ಆರ್ಚರ್​ ತಂಡ ಸೇರಿಕೊಳ್ಳುತ್ತಿರುವುದು ತಂಡದ ಬಲ ಹೆಚ್ಚಿಸಿದೆ.

ವಿಂಡೀಸ್​ ತಂಡದಲ್ಲಿ ಕ್ರೈಗ್​ ಬ್ರಾಥ್​ವೇಟ್​, ಬ್ಲಾಕ್​ವುಡ್​ ಹಾಗೂ ಬ್ರೂಕ್ಸ್​ ಅಮೋಘ ಫಾರ್ಮ್​ನಲ್ಲಿದ್ದಾರೆ. ಆದರೆ ಆರಂಭಿಕ ಬ್ಯಾಟ್ಸ್​ಮನ್​ ಕ್ಯಾಂಪ್​ಬೆಲ್​ ಹಾಗೂ ಅನುಭವಿ ಶಾಯ್​ ಹೋಪ್​ ಮಾತ್ರ ವಿಫಲವಾಗುತ್ತಿದ್ದಾರೆ. ಮೂರನೇ ಪಂದ್ಯದಲ್ಲಿ ವಿಂಡೀಸ್​ ತಂಡ ಗೆಲ್ಲಬೇಕೆಂದರೆ ಇವರಿಬ್ಬರ ಪಾತ್ರ ಮಹತ್ವದ್ದಾಗಿದೆ.

ಗೇಬ್ರಿಯಲ್​ ಮತ್ತು ಜೋಸೆಫ್​ ಗಾಯಗೊಂಡಿರುವುದರಿಂದ 3ನೇ ಟೆಸ್ಟ್​ನಲ್ಲಿ ಆಡುವುದು ಅನುಮಾನ. ಒಂದು ವೇಳೆ ಇವರಿಬ್ಬರೂ ಅವಕಾಶ ಪಡೆಯದಿದ್ದರೆ, ಆಲ್​ರೌಂಡರ್​ ರಖೀಮ್​ ಕಾರ್ನ್​ವಾಲ್​ ಕಣಕ್ಕಿಳಿಯುವ ನಿರೀಕ್ಷೆಯಿದೆ. ಕಳೆದ ಪಂದ್ಯದಲ್ಲಿ ರಾಸ್ಟನ್​ ಚೇಸ್​ 5 ವಿಕೆಟ್​ ಪಡೆದಿರುವುದರಿಂದ ಮತ್ತೊಬ್ಬ ಸ್ಪಿನ್ನರ್​ಗೆ ಅವಕಾಶ ಕೊಡುವ ನಿರೀಕ್ಷೆಯಿದೆ. ಜೊತೆಗೆ ಕಾರ್ನ್​ವಾಲ್​ ಉತ್ತಮ ಬ್ಯಾಟ್ಸ್​ಮನ್​ ಕೂಡ ಆಗಿದ್ದಾರೆ.

ಇಂಗ್ಲೆಂಡ್​ ತಂಡ:

ಜೋ ರೂಟ್ (ನಾಯಕ), ಬೆನ್​ಸ್ಟೋಕ್ಸ್​(ಉಪ ನಾಯಕ), ಕ್ರಿಸ್​ ವೋಕ್ಸ್​ ​, ಡೊಮೆನಿಕ್​ ಬೆಸ್​, ಸ್ಟುವರ್ಟ್​ ಬ್ರಾಡ್​, ರೋನಿ ಬರ್ನ್ಸ್​, ಜೋಸ್​ ಬಟ್ಲರ್​, ಒಲ್ಲಿ ಪೋಪ್​, ಡಾಮ್​ ಸಿಬ್ಲಿ, ಸ್ಟುವರ್ಟ್​ ಬ್ರಾಡ್, ಜೋಫ್ರಾ ಆರ್ಚರ್​

ವೆಸ್ಟ್​ ಇಂಡೀಸ್ ತಂಡ:

ಕ್ರೇಗ್‌ ಬ್ರಾತ್‌ವೇಟ್‌, ಜಾನ್‌ ಕ್ಯಾಂಪ್‌ಬೆಲ್‌, ಶಾಯ್​ ಹೋಪ್‌, ಶಮರ್​ ಬ್ರೂಕ್ಸ್‌, ರಾಸ್ಟನ್‌ ಚೇಸ್‌, ಜೇಸನ್‌ ಹೋಲ್ಡರ್(ನಾಯಕ) ಜೆರ್ಮೈನ್‌ ಬ್ಲ್ಯಾಕ್‌ವುಡ್‌, ಶೇನ್‌ ಡೊರಿಚ್ (ವಿಕೀ ‌), ರಖೀಮ್​ ಕಾರ್ನ್​ವಲ್​, ಕೆಮರ್‌ ರೋಚ್, ಶನಾನ್‌ ಗೇಬ್ರಿಯೆಲ್/ ಚೆಮರ್ ಹೋಲ್ಡರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.