ಸೌತಾಂಪ್ಟನ್: ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, ಆಂಗ್ಲರು 1-0 ಅಂತರದಲ್ಲಿ ಸರಣಿ ಜಯಿಸಿದ್ದಾರೆ. ಮಳೆ ಹಿನ್ನೆಲೆ ಅಂತಿಮ ದಿನ ಹೆಚ್ಚಿನ ಸಮಯದ ಆಟ ನಡೆಯದ ಕಾರಣ ಪಾಕ್ ಎದುರಾಗಬಹುದಾದ ಸೋಲಿನಿಂದ ಬಚಾವಾಯಿತು.
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ 583 ರನ್ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ನಲ್ಲಿ 273ಕ್ಕೆ ಆಲೌಟ್ ಆದ ಪಾಕ್ ತಂಡ ಫಾಲೋಆನ್ಗೂ ಗುರಿಯಾಗಿತ್ತು. ಬಳಿಕ 310 ರನ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ನಡೆಸಿದ ಪಾಕ್ ನಾಲ್ಕನೇ ದಿನದಾಟದ ಅಂತ್ಯಕ್ಕೆ 100 ರನ್ಗಳಿಸಿ 2 ವಿಕೆಟ್ ಕಳೆದುಕೊಂಡಿತ್ತು. ಆದರೆ 5ನೇ ದಿನ ವರುಣ ಹಾಗೂ ಮಂದ ಬೆಳಕಿನಿಂದ ದಿನದ ಎರಡು ಸೆಸನ್ಗಳು ನಡೆಯದೆ ಕೇವಲ 27 ಓವರ್ಗಳ ಆಟ ಮಾತ್ರ ಸಾಧ್ಯವಾಯಿತು.
-
🏴 MATCH DRAWN 🇵🇰
— ICC (@ICC) August 25, 2020 " class="align-text-top noRightClick twitterSection" data="
Babar Azam finishes 63*, with England taking the series 1-0 🏆 #ENGvPAK SCORECARD ▶️ https://t.co/ZFClksEjKM pic.twitter.com/RePPb2M6Mx
">🏴 MATCH DRAWN 🇵🇰
— ICC (@ICC) August 25, 2020
Babar Azam finishes 63*, with England taking the series 1-0 🏆 #ENGvPAK SCORECARD ▶️ https://t.co/ZFClksEjKM pic.twitter.com/RePPb2M6Mx🏴 MATCH DRAWN 🇵🇰
— ICC (@ICC) August 25, 2020
Babar Azam finishes 63*, with England taking the series 1-0 🏆 #ENGvPAK SCORECARD ▶️ https://t.co/ZFClksEjKM pic.twitter.com/RePPb2M6Mx
ಪಾಕಿಸ್ತಾನ 4 ವಿಕೆಟ್ಗೆ 187 ರನ್ ಗಳಿಸಿದ್ದಾಗ ಉಭಯ ತಂಡಗಳು ಡ್ರಾಗೆ ಸಮ್ಮತಿಸಿದವು. ಪಾಕ್ ಪರ ಬಾಬರ್ ಅಜಮ್ ಔಟಾಗದೆ 63 ರನ್ ಗಳಿಸಿದರೆ, ನಾಯಕ ಅಜರ್ ಅಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಬೌಲಿಂಗ್ನಲ್ಲಿ ಔಟ್ ಆದರು. ಇದು ಆಂಡರ್ಸನ್ ಪಡೆದ ದಾಖಲೆಯ 600ನೇ ವಿಕೆಟ್ ಆಗಿದೆ.
ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಕ್ರಿಕೆಟರ್ ಹೊಸ ದಾಖಲೆ... 600 ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎಂಬ ರೆಕಾರ್ಡ್!
ಮ್ಯಾಂಚೆಸ್ಟರ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಮೂರು ವಿಕೆಟ್‌ಗಳ ಜಯದೊಂದಿಗೆ ಇಂಗ್ಲೆಂಡ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ. ನಂತರ ಸೌತಾಂಪ್ಟನ್‌ನಲ್ಲಿ ನಡೆದ ಎರಡು ಟೆಸ್ಟ್ಗಳೂ ಡ್ರಾದಲ್ಲಿ ಅಂತ್ಯಗೊಂಡಿವೆ. 2010ರಿಂದ ಪಾಕಿಸ್ತಾನದ ವಿರುದ್ಧದ ಇಂಗ್ಲೆಂಡ್ಗೆ ಇದು ಮೊದಲ ಟೆಸ್ಟ್ ಸರಣಿ ವಿಜಯವಾಗಿದೆ. ಕೆಲ ತಿಂಗಳ ಹಿಂದೆ ವೆಸ್ಟ್ ಇಂಡೀಸ್ ತಂಡವನ್ನು 2-1 ಅಂತರದಿಂದ ಜೋ ರೂಟ್ ಪಡೆ ಮಣಿಸಿತ್ತು.
ಇಂಗ್ಲೆಂಡ್ನ ಜಾಕ್ ಕ್ರಾವ್ಲಿ ಪಂದ್ಯ ಪುರುಷ, ಮೊಹಮ್ಮದ್ ರಿಜ್ವಾನ್ ಹಾಗೂ ಜೋಶ್ ಬಟ್ಲರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.