ETV Bharat / sports

ಇಂಗ್ಲೆಂಡ್ - ಪಾಕಿಸ್ತಾನ ಮೊದಲ ಟೆಸ್ಟ್ : ಶಾನ್ ಮಸೂದ್ ಶತಕದ ಸಂಭ್ರಮ - ಆರಂಭದಲ್ಲೆ ಕುಸಿತ ಕಂಡ ಆಂಗ್ಲರು

ಬುಧವಾರ ಟಾಸ್​ ಗೆದ್ದು ಬ್ಯಾಟಿಂಗ್​​ಗೆ​ ಇಳಿದಿದ್ದ ಪಾಕ್​ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಬಾಬರ್​ ಅಜಮ್​ ಮತ್ತು ಶಾನ್​ ಮಸೂದ್ ಪಾಕ್​​​​​ ತಂಡಕ್ಕೆ ಸ್ವಲ್ಪ ಮಟ್ಟಿನ ಚೇತರಿಕೆ ತಂದು ಕೊಟ್ಟಿತ್ತು. ಮೊದಲ ದಿನ ಪಾಕಿಸ್ತಾನ ತಂಡ 139 ರನ್​ಗಳಿಸಿತ್ತು.

ಇಂಗ್ಲೆಂಡ್-ಪಾಕಿಸ್ತಾನ ಮೊದಲ ಟೆಸ್ಟ್
ಇಂಗ್ಲೆಂಡ್-ಪಾಕಿಸ್ತಾನ ಮೊದಲ ಟೆಸ್ಟ್
author img

By

Published : Aug 7, 2020, 8:08 AM IST

Updated : Aug 8, 2020, 12:46 PM IST

ಮ್ಯಾಂಚೆಸ್ಟರ್: ಓಲ್ಡ್ ಟ್ರ್ಯಾಫೋರ್ಡ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ - ಪಾಕಿಸ್ತಾನ ಮೊದಲ ಟೆಸ್ಟ್​ ಪಂದ್ಯದಲ್ಲಿ ಪಾಕ್​ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಆರಂಭಿಕ ಆಟಗಾರ ಶಾನ್ ಮಸೂದ್ ಶತಕದ ನೆರವಿನಿಂದ ಸವಾಲಿನ ಮೊತ್ತ ಗಳಿಸಿದೆ.

ಶಾನ್ ಮಸೂದ್ 156 ರನ್​​ ಗಳಿಸಿ ತಂಡದ ಮೊತ್ತವನ್ನು ಏರಿಸುವಲ್ಲಿ ಸಹಕಾರಿಯಾದರು. ಶಾನ್​ ಈ ಶತಕ ಗಳಿಸುವ ಮೂಲಕ ಹ್ಯಾಟ್ರಿಕ್​​ ಶತಕ ಸಿಡಿಸಿದ ಸಾಧನೆ ಮಾಡಿದರು. ಈ ಹಿಂದೆ ಶ್ರೀಲಂಕಾ ಮತ್ತು ಬಾಂಗ್ಲಾ ವಿರುದ್ಧ ಇವರು ಶತಕ ಸಿಡಿಸಿದ್ದರು. ಅವರ ಅದ್ಭುತ ಆಟದಿಂದ ಪಾಕ್​ ತಂಡ 109.3 ಓವರ್​​ಗಳಲ್ಲಿ 326 ರನ್​​ ಕಲೆಹಾಕಿತು.

ಬುಧವಾರ ಟಾಸ್​ ಗೆದ್ದು ಬ್ಯಾಟಿಂಗ್​​​ಗೆ​ ಇಳಿದಿದ್ದ ಪಾಕ್​ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಬಾಬರ್​ ಅಜಮ್​ ಮತ್ತು ಶಾನ್​ ಮಸೂದ್​ ತಂಡಕ್ಕೆ ಸ್ವಲ್ಪ ಮಟ್ಟಿನ ಚೇತರಿಕೆ ತಂದು ಕೊಟ್ಟು ಮೊದಲ ದಿನ 139 ರನ್​ಗಳಿಸಿತ್ತು. ಆದರೆ, ಎರಡನೇ ದಿನದಾಟದಲ್ಲಿ ಬಾಬರ್​ ಹೆಚ್ಚು ಹೊತ್ತು ಕ್ರಿಸ್​ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ನಂತರ ಬಂದ ಶಫೀಕ್​ ಮತ್ತು ರಿಜ್ವಾನ್​ ಬಂದ ಹಾಗೆ ಮರಳಿ ಪೆವಿಲಿಯನ್​ ಸೇರಿದರು. ಬ್ರಾಡ್​ ಮತ್ತು ಆರ್ಚರ್​​ ದಾಳಿಗೆ ಪಾಕ್​ ಬ್ಯಾಟ್ಸ್​ಮನ್​​ಗಳು ನಲುಗಿದರು.

ನಂತರ ಕ್ರಿಸ್​ಗೆ ಬಂದ ಶಾದಬ್​ ಖಾನ್​ (45) ಕ್ರಿಸ್​​ ಅಂಟಿಕೊಂಡು ಶಾನ್​ ಮಸೂದ್​ ಗೆ ಉತ್ತಮ ಸಾಥ್​​ ನೀಡಿ, ತಂಡದ ಮೊತ್ತವನ್ನು 300ರ ಗಡಿ ದಾಟಿಸುವಲ್ಲಿ ನೆರವಾದರು. ಅಂತಿಮ ವಾಗಿ ಪಾಕ್​ 109.3 ಓವರ್​​ಗಳಲ್ಲಿ 326 ರನ್​​ ಕಲೆಹಾಕಿತು.

ಆರಂಭದಲ್ಲೇ ಕುಸಿತ ಕಂಡ ಆಂಗ್ಲರು :

ಮೊದಲ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ ತಂಡ ಆರಂಭದಲ್ಲಿ ಕುಸಿತ ಕಂಡಿತು. ಆಂಗ್ಲರನ್ನ ಶಾಹೀನ್​ ಅಫ್ರಿದಿ ಮತ್ತು ಮೊಹಮ್ಮದ್​ ಅಬ್ಬಾಸ್​ ಕಾಡಿದರು. ಬಿಗುವಿನ ಬೌಲಿಂಗ್​ ದಾಳಿ ನಡೆಸಿದ ಪಾಕ್​ ಬೌಲರ್​ಗಳು ಇಂಗ್ಲೆಂಡ್​ ತಂಡಕ್ಕೆ ಶಾಕ್​​ ನೀಡಿದರು. ಕೇವಲ 12 ರನ್​ಗಳಿಸುವಷ್ಟರಲ್ಲಿ ಇಂಗ್ಲೆಂಡ್​ ತಂಡದ ರೋರಿ ಬರ್ನ್ಸ್​, ಡಾಮ್ ಸಿಬ್ಲಿ ಹಾಗೂ ಬೆನ್​ ಸ್ಟೋಕ್ಸ್​​ ಹೀಗೆ ​ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ರೂಟ್​ ತಂಡಕ್ಕೆ ಸ್ವಲ್ಪ ಮಟ್ಟಿನ ಚೇತರಿಕೆ ತಂದುಕೊಡಲು ಯತ್ನಿಸಿದರು. ಆದರೆ ಅದೂ ಆಗಲಿಲ್ಲ. ಅಂತಿಮವಾಗಿ ಇಂಗ್ಲೆಂಡ್​ ತಂಡ 4 ವಿಕೆಟ್​ ಕಳೆದುಕೊಂಡು 92 ರನ್​​ಗಳಿಸಿದೆ. ಓಲಿ ಪೋಪ್​ (46) ಹಾಗೂ ಜೋಸ್​ ಬಟ್ಲರ್​ (15) ಕ್ರೀಸ್​​ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್​: ಪಾಕಿಸ್ತಾನ 326 (ಶಾನ್ ಮಸೂದ್ 156, ಬಾಬರ್ ಅಜಮ್ 69, ಸ್ಟುವರ್ಟ್ ಬ್ರಾಡ್ 3/54) ಇಂಗ್ಲೆಂಡ್ 92/4 (ಓಲಿ ಪೋಪ್ 46 *, ಜೋಸ್ ಬಟ್ಲರ್ 15 * , ಮೊಹಮ್ಮದ್ ಅಬ್ಬಾಸ್ 2/24)

Last Updated : Aug 8, 2020, 12:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.