ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಪಾಕಿಸ್ತಾನ ತಂಡ 2ನೇ ಇನ್ನಿಂಗ್ಸ್ನಲ್ಲಿ 169 ರನ್ಗಳಿಗೆ ಆಲೌಟ್ ಆಗುವ ಮೂಲಕ ಇಂಗ್ಲೆಂಡ್ಗೆ 277 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
ಮೂರನೇ ದಿನ 8 ವಿಕೆಟ್ ಕಳೆದುಕೊಂಡು 137 ರನ್ಗಳಿಸಿದ್ದ ಪಾಕಿಸ್ತಾನ ತಂಡ ನಾಲ್ಕನೇ ದಿ ಆ ಮೊತ್ತಕ್ಕೆ 32 ರನ್ ಸೇರಿಸಲಷ್ಟೇ ಸಫಲವಾಯಿತು. ಅಬ್ಬರದ ಬ್ಯಾಟಿಂಗ್ ನಡೆಸಿದ ಯಾಸಿರ್ ಶಾ ಕೇವಲ 25 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 33 ರನ್ಗಳಿಸುವ ಮೂಲಕ ಪಾಕ್ ತಂಡದ ಟಾಪ್ ಸ್ಕೋರರ್ ಆದರು.
ಯಾಸಿರ್ ಶಾ ವಿಕೆಟ್ ಸಹಿತ ಸ್ಟುವರ್ಟ್ 37ಕ್ಕೆ 3 ವಿಕೆಟ್ ಪಡೆದರು. ಬೆನ್ ಸ್ಟೋಕ್ಸ್ 2, ಕ್ರಿಸ್ ವೋಕ್ಸ್ 2 ಹಾಗೂ ಆರ್ಚರ್ ಮತ್ತು ಡಾಮ್ ಬೆಸ್ ತಲಾ ಒಂದು ವಿಕೆಟ್ ಪಡೆದು ಪಾಕ್ ಎರಡನೇ ಇನ್ನಿಂಗ್ಸ್ಗೆ ಅಂತ್ಯವಾಡಿದರು.
ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್ನ 107 ರನ್ಗಳ ಮುನ್ನಡೆ ಸೇರಿದಂತೆ ಇಂಗ್ಲೆಂಡ್ ಗೆಲ್ಲಲು 277 ರನ್ಗಳ ಟಾರ್ಗೇಟ್ ನೀಡಿದೆ. ಇಂಗ್ಲೆಂಡ್ ತಂಡಕ್ಕೆ ಇನ್ನು ಎರಡು ದಿನಗಳ ಆಟ ಬಾಕಿ ಉಳಿದಿದ್ದು ಪಾಕ್ ತಂಡದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಸಿ ಗೆಲುವು ಸಾಧಿಸುವುದೋ ಎಂಬುದನ್ನ ಕಾದು ನೋಡಬೇಕಿದೆ.
ಈಗಾಗಲೆ ಬ್ಯಾಟಿಂಗ್ ನಡೆಸುತ್ತಿರುವ ಇಂಗ್ಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೆ 14 ರನ್ಗಳಿಸಿದೆ.