ETV Bharat / sports

ತಿರಿಮನ್ನೆ ಶತಕ ವ್ಯರ್ಥ.. ಶ್ರೀಲಂಕಾ ವಿರುದ್ಧ ಗೆಲುವಿನ ಸನಿಹದಲ್ಲಿ ಇಂಗ್ಲೆಂಡ್​

author img

By

Published : Jan 17, 2021, 10:33 PM IST

ಮೊದಲ ಇನ್ನಿಂಗ್ಸ್​ನಲ್ಲಿ ಲಂಕಾ ಕೇವಲ 135 ರನ್​ಗಳಿಸಿದರೆ, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್​ 421 ರನ್ ಗಳಿಸಿತ್ತು. ಇನ್ನು 286 ರನ್​ಗಳ ಬೃಹತ್ ಇನ್ನಿಂಗ್ಸ್​ ಹಿನ್ನಡೆ ಅನುಭವಿಸಿದ್ದ ಆತಿಥೇಯ ತಂಡ 4ನೇ ದಿನದವರೆಗೆ ವೀರೋಚಿತ ಹೋರಾಟ ನಡೆಸಿ 359 ರನ್​ಗಳಿಗೆ ಆಲೌಟ್​ ಆಯಿತು..

ಶ್ರೀಲಂಕಾ vs  ಇಂಗ್ಲೆಂಡ್​
ಶ್ರೀಲಂಕಾ vs ಇಂಗ್ಲೆಂಡ್​

ಗಾಲೆ : ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​ ಗೆಲುವಿನ ಸನಿಹ ಬಂದಿದೆ. ಕೇವಲ 74 ರನ್​ಗಳ ಗುರಿ ಬೆನ್ನತ್ತಿರುವ ಪ್ರವಾಸಿ ತಂಡಕ್ಕೆ ಗೆಲ್ಲಲು ಕೇವಲ 36 ರನ್​ಗಳ ಅವಶ್ಯಕತೆಯಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಲಂಕಾ ಕೇವಲ 135 ರನ್​ಗಳಿಸಿದರೆ, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್​ 421 ರನ್ ಗಳಿಸಿತ್ತು. ಇನ್ನು 286 ರನ್​ಗಳ ಬೃಹತ್ ಇನ್ನಿಂಗ್ಸ್​ ಹಿನ್ನಡೆ ಅನುಭವಿಸಿದ್ದ ಆತಿಥೇಯ ತಂಡ 4ನೇ ದಿನವರೆಗೆ ವೀರೋಚಿತ ಹೋರಾಟ ನಡೆಸಿ 359 ರನ್​ಗಳಿಗೆ ಆಲೌಟ್​ ಆಯಿತು.

ನಿನ್ನೆ 76 ರನ್​ಗಳಿಸಿದ್ದ ಲಹಿರು ತಿರಿಮನ್ನೆ ಇಂದು 111 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು. ಇವರಿಗೆ ಸಾಥ್​​ ನೀಡಿದ ಮಾಜಿ ನಾಯಕ ಏಂಜೆಲೋ ಮ್ಯಾಥ್ಯೂಸ್​ 219 ಎಸೆತಗಳಲ್ಲಿ 71 ರನ್​ಗಳಿಸಿ ಔಟಾದರು. ಇವರಿಬ್ಬರ ಸಾಹಸದಿಂದ ಶ್ರೀಲಂಕಾ ತಂಡ ಇನ್ನಿಂಗ್ಸ್​ ಸೋಲು ತಪ್ಪಿಸಿಕೊಂಡಿತು.

ಜೊತೆಗೆ ಇಂಗ್ಲೆಂಡ್​ಗೆ 74 ರನ್​ಗಳ ಸಾಧಾರಣ ಟಾರ್ಗೆಟ್​ ನೀಡಿ ಪಂದ್ಯವನ್ನು ಕೊನೆಯ ದಿನದವರೆಗೂ ವಿಸ್ತರಿಸಿತು. ಇಂಗ್ಲೆಂಡ್ ಪರ ಜಾಕ್​ ಲೀಚ್​ 5, ಡಾಮ್​ ಬೆಸ್​ 2 ಹಾಗೂ ಸ್ಯಾಮ್ ಕರನ್​ 2 ವಿಕೆಟ್​ ಪಡೆದರು.

74 ರನ್​ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್​ ತಂಡ ಕೇವಲ 14 ರನ್​ಗಳಿಸುವಷ್ಟರಲ್ಲಿ ಪ್ರಮುಖ 3 ಬ್ಯಾಟ್ಸ್​ಮನ್​ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದೆ. ಜಾಕ್​ ಕ್ರಾಲೆ (8), ಡೊಮೆನಿಕ್ ಸಿಬ್ಲೆ (2) ಸ್ಪಿನ್ನರ್ ಎಂಬುಲ್ಡೆನಿಯಾಗೆ ವಿಕೆಟ್​ ಒಪ್ಪಿಸಿದ್ರೆ, ನಾಯಕ ಜೋ ರೂಟ್​ ಕೇವಲ 1 ರನ್​ಗಳಿಸಿ ರನ್​ಔಟ್ ಆಗಿದ್ದಾರೆ.

ಆದರೆ, ಅನುಭವಿ ಬ್ಯಾಟ್ಸ್​ಮನ್​ ಜಾನಿ ಬೈರ್ಸ್ಟೋವ್​ ತಾಳ್ಮೆ ಆಟವಾಡುತ್ತಿದ್ದು, ತಂಡವನ್ನು ಗೆಲುವಿನ ಗಡಿ ದಾಟಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಅವರು 37 ಎಸೆತಗಳನ್ನು ಎದುರಿಸಿದ್ದು, ಅಜೇಯ 11 ರನ್​ಗಳಿಸಿದ್ದರೆ, ಡೇನಿಯಲ್ ಲಾರೆನ್ಸ್​ 7 ರನ್​ಗಳಿಸಿ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಇಂಗ್ಲೆಂಡ್ ತಂಡ ಪ್ರಸ್ತುತ 3 ವಿಕೆಟ್​ ಕಳೆದುಕೊಂಡು 38 ರನ್​ಗಳಿಸಿದ್ದು, ಕೊನೆಯ ದಿನ ಗೆಲುವು ಸಾಧಿಸಲು ಕೇವಲ 36 ರನ್​ಗಳಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.